Asianet Suvarna News Asianet Suvarna News

ಮುಂಬರುವ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿಯೇ ಆಗಬೇಕು: ಬಸವರಾಜ ಹೊರಟ್ಟಿ

ಇಂದು ರಾಜಕೀಯ ಸಂಪೂರ್ಣವಾಗಿ ಕಲುಷಿತಗೊಂಡಿದೆ. ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚಿಸದೇ ಕೇವಲ ಆರೋಪ, ಪ್ರತ್ಯಾರೋಪಗಳಲ್ಲಿ ಕಾಲ ಕಳೆಯುತ್ತಿರುವುದು ಆತಂಕಕಾರಿ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. 

The upcoming winter session should be held in Belagavi Says Basavaraj Horatti gvd
Author
First Published Oct 24, 2023, 1:30 AM IST

ಹುಬ್ಬಳ್ಳಿ (ಅ.24): ಇಂದು ರಾಜಕೀಯ ಸಂಪೂರ್ಣವಾಗಿ ಕಲುಷಿತಗೊಂಡಿದೆ. ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚಿಸದೇ ಕೇವಲ ಆರೋಪ, ಪ್ರತ್ಯಾರೋಪಗಳಲ್ಲಿ ಕಾಲ ಕಳೆಯುತ್ತಿರುವುದು ಆತಂಕಕಾರಿ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಅನಾವೃಷ್ಟಿ ಉದ್ಭವವಾಗಿದೆ. ಇಂತಹ ಸಮಯದಲ್ಲಿ ಜನಪ್ರತಿನಿಧಿಗಳು ರಾಜಕಾರಣ ಮಾಡುವುದನ್ನು ಕೈ ಬಿಡಬೇಕು. ರಾಜ್ಯದ ಅಭಿವೃದ್ಧಿಯ ಬಗ್ಗೆ, ಜನರ ಹಿತಾಸಕ್ತಿಯ ಬಗ್ಗೆ ಗಮನಹರಿಸಬೇಕಿದೆ. ಆದರೆ, ಇದು ಆಗದಿರುವುದು ಕಳವಳಕಾರಿ ಸಂಗತಿ ಎಂದು ವಿಷಾಧಿಸಿದರು.

ಬದ್ಧತೆಯೇ ಇಲ್ಲ: ಇಂದಿನ ದಿನಮಾನಗಳಲ್ಲಿ ರಾಜಕೀಯದ ಬಗ್ಗೆ ಕಡಿಮೆ ಮಾತನಾಡಬೇಕು ಎನ್ನಿಸುತ್ತಿದೆ. ಯಾರ ಬಳಿಯೂ ಬದ್ಧತೆ ಎನ್ನುವುದು ಕಂಡುಬರುತ್ತಿಲ್ಲ. ನಾವು ಯಾರನ್ನು ಪ್ರತಿನಿಧಿಸುತ್ತೇವೆ ಎನ್ನುವುದನ್ನು ಮೊದಲು ನೆನಪು ಮಾಡಿಕೊಳ್ಳಬೇಕು. ಬರೀ ಇವರನ್ನು ಅವರು ಬಯ್ಯುವುದು, ಅವರನ್ನು ಇವರ ಬಯ್ಯುವುದರಲ್ಲಿ ಕಾಲ ಕಳೆಯಲಾಗುತ್ತಿದೆ. ಅದು ಆಡಳಿತ ಪಕ್ಷವೇ ಇರಲಿ, ವಿರೋಧ ಪಕ್ಷ ಇರಲಿ. ಎಲ್ಲಲ್ಲೂ ಇದೇ ಸ್ಥಿತಿ ಇದೆ. ಎಂತಹ ಕಠಿಣವಾದ ಪರಿಸ್ಥಿತಿಯಲ್ಲಿದ್ದೇವೆ ಎಂಬುದನ್ನು ನಾವೆಲ್ಲ ಅರಿತುಕೊಳ್ಳಬೇಕಿದೆ. ಇನ್ನಾದರೂ ಟೀಕೆ-ಟಿಪ್ಪಣಿ ಮಾಡುವುದನ್ನು ಕೈಬಿಟ್ಟು ಜನರ ಬಗ್ಗೆ ಯೋಚನೆ ಮಾಡಬೇಕು ಎಂದರು.

ಕಾವೇರಿ ಸಮಸ್ಯೆಗೆ ನ್ಯಾಯಾಲಯದಿಂದ ಪರಿಹಾರ ಸಿಗದು: ಸಂತೋಷ್ ಹೆಗ್ಡೆ

ಬೆಳಗಾವಿಯಲ್ಲೇ ಅಧಿವೇಶನ: ಮುಂಬರುವ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿಯೇ ಆಗಬೇಕು. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ. ಡಿ. 6ರಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕೆಂಬ ತಾತ್ವಿಕವಾಗಿ ಒಪ್ಪಲಾಗಿದೆ. ₹400-500 ಕೋಟಿ ಖರ್ಚು ಮಾಡಿ ಸುವರ್ಣ ಸೌಧವನ್ನು ಭೂತ ಬಂಗಲೆ ಮಾಡುವುದು ಸರಿಯಲ್ಲ. ಈ ಹಿಂದೆ ನಾನು 13 ಇಲಾಖೆಗಳು ಬೆಳಗಾವಿಗೆ ಬರಬೇಕೆಂದು ಒತ್ತಾಯ ಮಾಡಿದ್ದೆ. ಕೆಲವು ಇಲಾಖೆಗಳು ಬಂದಿವೆ, ಇನ್ನೂ ಹಲವು ಇಲಾಖೆಗಳು ಬರಬೇಕಿವೆ. 15 ದಿನಗಳ ಕಾಲ ಅಧಿವೇಶನ ನಡೆಸಬೇಕು ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಖಚಿತ: ರಕ್ಷಾ ರಾಮಯ್ಯ

ದಸರಾ ರಜೆ ವಿಸ್ತರಣೆ ಮಾಡುವಂತೆ ಸಚಿವರಿಗೆ ಕರೆ: ಶಾಲೆಗಳ ರಜಾ ದಿನಗಳನ್ನು ವಿಸ್ತರಣೆ ಮಾಡುವಂತೆ ಶಿಕ್ಷಣ ಸಚಿವರಿಗೆ ಕರೆ ಮಾಡಿ ಸಲಹೆ ನೀಡಿದ್ದೇನೆ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. ಮಕ್ಕಳ ಹಿತದೃಷ್ಟಿಯಿಂದ ನ. 1ರ ವರೆಗೂ ರಜೆ ವಿಸ್ತರಣೆ ಮಾಡುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕರೆ ಮಾಡಿ ಸಲಹೆ ನೀಡಿದ್ದೇನೆ. ಇಂದು ಶಿಕ್ಷಣ ವ್ಯವಸ್ಥೆ ಸರಿಯಾದ ವ್ಯವಸ್ಥೆಯಲ್ಲಿಲ್ಲ. ಈ ಹಿಂದೆ ಅ. 2ರಿಂದ 30ರ ವರೆಗೆ ಶೈಕ್ಷಣಿಕ ವರ್ಷದ ಮೊದಲ ಅವಧಿಯ(ದಸರಾ) ರಜೆ ಇರುತ್ತಿತ್ತು. ಆದರೆ, ಇಂದು ಜ್ಞಾನ ಇಲ್ಲದ ಕೆಲವು ಅಧಿಕಾರಿಗಳು ತಮಗೆ ಹೇಗೆ ಬೇಕೋ ಹಾಗೆ ರಜಾ ದಿನಗಳನ್ನು ನಿಗದಿ ಮಾಡಿದ್ದಾರೆ. ಇದು ಸರಿಯಲ್ಲ. ಪದ್ದತಿಯನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

Follow Us:
Download App:
  • android
  • ios