ದಲಿತ ಮುಖ್ಯಮಂತ್ರಿ ಪ್ರಸ್ತಾವನೆಗೆ ಫುಲ್‌ಸ್ಟಾಪ್ ಹಾಕಲಾಗಿದ್ದು, ಸದ್ಯ ಆ ವಿಷಯದ ಕುರಿತು ಚರ್ಚೆ ಇಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

  ಕಲಬುರಗಿ :  ದಲಿತ ಮುಖ್ಯಮಂತ್ರಿ ಪ್ರಸ್ತಾವನೆಗೆ ಫುಲ್‌ಸ್ಟಾಪ್ ಹಾಕಲಾಗಿದ್ದು, ಸದ್ಯ ಆ ವಿಷಯದ ಕುರಿತು ಚರ್ಚೆ ಇಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗರೊಂದಿಗೆ ಮಾತನಾಡಿ, ದಲಿತ ಸಿಎಂ ವಿಚಾರಕ್ಕೆ ಕಳೆದ 1 ವರ್ಷದಿಂದ ಫುಲ್‌ಸ್ಟಾಪ್ ಬಿದ್ದಿದ್ದು, ಈ ಅವಧಿಯಲ್ಲಿ ಆ ಬಗ್ಗೆ ಚರ್ಚೆ ಇಲ್ಲ. ಮುಂದಿನ ಅವಧಿಯಲ್ಲಿ ನೋಡೋಣ ಎನ್ನುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆ ಬಳಿಕ ಮತ್ತೇ ದಲಿತ ಸಿಎಂ ಕೂಗು ಎತ್ತುವ ಕುರಿತು ಮುನ್ಸೂಚನೆ ನೀಡಿದರು.

ಸೆಪ್ಟೆಂಬರ್‌ನಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂಬ ಎಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅವರ ಪಕ್ಷ ಬೇರೆ ನಮ್ಮ ಪಕ್ಷ ಬೇರೆ ಅವರ ಹೇಳಿಕೆಗೆ ನ್ಯಾನೇಕೆ ಉತ್ತರಿಸಬೇಕು? ಎಂದರು.

ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತಿಲ್ಲ ಎನ್ನುವ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿ, ಬಿಜೆಪಿಯವರು ಕಳೆದ 2 ವರ್ಷದಿಂದ ಇದನ್ನೇ ಹೇಳುತ್ತಿದ್ದಾರೆ. ಬರುವ 2 ವರ್ಷ ಸಹ ಇದನ್ನೇ ಹೇಳುತ್ತಿರುತ್ತಾರೆ. ಆದರೆ, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾತ್ರ ನಿಂತಿಲ್ಲ. ಗ್ಯಾರಂಟಿ ಯೋಜನೆಗಳ ಜೊತೆಗೆ ಇತರ ಅಭಿವೃದ್ಧಿ ಕೆಲಸಗಳೂ ಸಮರ್ಪಕವಾಗಿ ನಡೆಯುತ್ತಿವೆ. ಹಿಂದಿನ ಬೊಮ್ಮಾಯಿ ಸರ್ಕಾರದ ಬಜೆಟ್‌ ಹಾಗೂ ನಮ್ಮ ಸರ್ಕಾರದ ಬಜೆಟ್ ನೋಡಿ ಗೊತ್ತಾಗುತ್ತದೆ ಎಂದರು. 

ಮಲ್ಲಿಕಾರ್ಜುನ ಖರ್ಗೆ ಹೇಳಿರುವುದು ಸತ್ಯ ನಾವು ಹುಷಾರಾಗಿರಬೇಕು: ಸಚಿವ ಸತೀಶ್ ಜಾರಕಿಹೊಳಿ

ರಾಜ್ಯದಲ್ಲಿ ಜಾತಿಗಣತಿ ತಕ್ಷಣ ಮಾಡೋ ಅಂತ ವಿಚಾರ ಅಲ್ಲ, ಸಮಯ ತೆಗೆದುಕೊಳ್ಳುತ್ತೆ, ಸೂಕ್ಷ್ಮ ವಿಚಾರ ಈ ವಿಚಾರದಲ್ಲಿ ಇನ್ನೂ ಸರಿಯಾದ ನಿರ್ಧಾರ ಆಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಅರಕಲಗೂಡಿನಲ್ಲಿ ನಡೆಯುತ್ತಿರುವ ಜೈ ಭೀಮ್ ಕಪ್ ಪಂದ್ಯಾವಳಿ ಉದ್ಘಾಟನೆಗೆ ಆಗಮಿಸಿದ ವೇಳೆ ಮಾಧ್ಯಮದವರ ಜೊತೆ ಮಾತನಾಡಿ, ರಾಜ್ಯದಲ್ಲಿ ಜಾತಿಗಣತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ತಕ್ಷಣ ಮಾಡೋ ಅಂತ ವಿಚಾರ ಅಲ್ಲ ಟೈಮ್ ತೆಗೆದುಕೊಳ್ಳುತ್ತೆ, ಬಹಳಷ್ಟು ಸಭೆಗಳು ಆಗೋದಿದೆ, ಟೈಮ್ ಬೇಕು, ಈಗಲೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ, ಮನೆಗೆ ಹೋಗಿ ಸಹಿ ಮಾಡಿಸಿದ್ದಾರೆ.

ಲೋಪಗಳ ಬಗ್ಗೆ ಅಧಿಕಾರಿಗಳು ಸರಿಪಡಿಸುತ್ತಾರೆ, ಇದರಲ್ಲಿ ರಾಜಕೀಯ ಲಾಭ, ನಷ್ಟ ಇಲ್ಲ, ಇದರಿಂದ ಪಕ್ಷಕ್ಕೆ ಲಾಭ ಆಗೋದಿಲ್ಲ, ಜಾತಿ ಗಣತಿ ವಿಚಾರ ಇನ್ನು ಸರಿಯಾದ ನಿರ್ಧಾರಕ್ಕೆ ಬಂದಿಲ್ಲ ಜಾತಿ ಗಣತಿ ಮಾಡಿಲ್ಲ, ಜಾತಿಗಣತಿ ವಿಚಾರ ಇನ್ನು ಆರು ತಿಂಗಳು ಆಗಬಹುದು, ಈಗಲೇ ನಿರ್ಧಾರ ಇಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿಯವರು ಸರ್ಕಾರ ಬೀಳಿಸುತ್ತಾರೆ ಎಂಬ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, "ಮಲ್ಲಿಕಾರ್ಜುನ್ ಖರ್ಗೆ ಹೇಳಿರುವುದು ಸತ್ಯ ಇದೆ. ಬಾರ್ಡರ್‌ನಲ್ಲಿ ಇದ್ದೋರು ಮಲಗಲಿಕ್ಕೆ ಆಗೋದಿಲ್ಲ. ಡೇ ಒನ್‌ನಿಂದ ಸರ್ಕಾರ ಬೀಳಿಸಬೇಕು ಅಂತ ಇದೆ. ಅದ್ರೆ ನಾವು ಹುಷಾರಾಗಿರಬೇಕು" ಎಂದು ಹೇಳಿದರು.