ತಪ್ಪು ಮಾಡಿದವರು ಯಾರೇ ಆದರೂ ಕ್ರಮ ಕೈಗೊಳ್ಳಿ: ಮಲ್ಲಿಕಾರ್ಜುನ ಖರ್ಗೆ
ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ವೈಫಲ್ಯವು ಅಭಿವೃದ್ಧಿಗೆ ಮಾರಕ. ಕಾನೂನು ಸುವ್ಯವಸ್ಥೆ ವೈಫಲ್ಯ ಕಾರಣವಾದವರು ಹಿಂದೂ, ಮುಸ್ಲಿಂ ಯಾರೇ ಇರಲಿ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಬೆಂಗಳೂರು (ಆ.01): ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ವೈಫಲ್ಯವು ಅಭಿವೃದ್ಧಿಗೆ ಮಾರಕ. ಕಾನೂನು ಸುವ್ಯವಸ್ಥೆ ವೈಫಲ್ಯ ಕಾರಣವಾದವರು ಹಿಂದೂ, ಮುಸ್ಲಿಂ ಯಾರೇ ಇರಲಿ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದರೆ ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತದೆ. ಬಂಡವಾಳ ಹೂಡಿಕೆಯೂ ಸಹಜವಾಗಿಯೇ ಹೆಚ್ಚಾಗಿ ಹರಿದು ಬರುತ್ತದೆ. ಆದರೆ, ಕಾನೂನು ಸುವ್ಯವಸ್ಥೆ ಸರಿಯಿಲ್ಲದಿದ್ದರೆ ಅಭಿವೃದ್ಧಿಗೆ ಮಾರಕವಾಗುತ್ತದೆ.
ಪ್ರಸ್ತುತ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಇದಕ್ಕೆ ಕಾರಣವಾದವರು ಹಿಂದೂ, ಮುಸ್ಲಿಂ ಯಾರೇ ಇರಲಿ ಕ್ರಮ ತೆಗೆದುಕೊಳ್ಳಬೇಕು. ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದರು. ರಾಜ್ಯ ಸರ್ಕಾರ ರಕ್ಷಣೆ, ಪರಿಹಾರ ಒಬ್ಬರಿಗೆ ಮಾತ್ರ ಕೊಟ್ಟಿದೆ. ಮತ್ತೊಬ್ಬರಿಗೆ ಪರಿಹಾರ, ಸಾಂತ್ವನ ಎರಡೂ ಇಲ್ಲ. ಈ ಮಲತಾಯಿ ಧೋರಣೆ ಸರಿಯಲ್ಲ. ಇಬ್ಬರಿಗೂ ಸಮಾನ ನ್ಯಾಯ ಕಲ್ಪಿಸಬೇಕಿರುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಹೇಳಿದರು. ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಆಟ ನಡೆಯಲ್ಲ ಎಂಬ ಬಾಬುರಾವ್ ಚಿಂಚನಸೂರು ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ‘ಹೌದು, ನಮಗೆ ಶಕ್ತಿ ಇಲ್ಲ ಬಿಡಿ’ ಎಂದು ಗರಂ ಆದರು. ಇನ್ನು ಸಿದ್ದರಾಮೋತ್ಸವ ವಿಚಾರವಾಗಿ ಪ್ರತಿಕ್ರಿಯಿಸಲೂ ಖರ್ಗೆ ನಿರಾಕರಿಸಿದರು.
ಕಾಂಗ್ರೆಸ್‌ನಲ್ಲಿ ಸಿಎಂ ಚರ್ಚೆ ನಡುವೆಯೇ ಖರ್ಗೆ-ಪರಂ ದೀರ್ಘ ಸಭೆ: ಸಸ್ಪೆನ್ಸ್ ಭೇಟಿ
ಸಿದ್ದು ಜನಪರ ಕಾರ‍್ಯಕ್ರಮಗಳಿಗೆ ಖರ್ಗೆ ಪರಾಕ್: ಆಹಾರ ಭದ್ರತಾ ಕಾಯಿದೆ ಜಾರಿಗೆ ಬಂದ ಬಳಿಕ ಮೊಟ್ಟಮೊದಲ ಬಾರಿಗೆ ‘ಅನ್ನಭಾಗ್ಯ’ ಯೋಜನೆಯನ್ನು ಸಿದ್ದರಾಮಯ್ಯ ಕರ್ನಾಟಕದಲ್ಲಿ ಜಾರಿಗೆ ತಂದವರು. ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದ ಮುಖ್ಯಮಂತ್ರಿ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ನಗರದ ಕಲಾಮಂದಿರದಲ್ಲಿ ಜನಮನ ಪ್ರತಿಷ್ಠಾನ ಆಯೋಜಿಸಿದ್ದ ‘ಸಿದ್ದರಾಮಯ್ಯ ಆಡಳಿತ: ನೀತಿ ನಿರ್ಧಾರ’ ಗ್ರಂಥ ಬಿಡುಗಡೆ ಸಮಾರಂಭ ಹಾಗೂ ಸಂವಾದ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಅಭಿವೃದ್ಧಿ ಪರವಾಗಿ ಇರುವವರು ಮಾತ್ರ ಕೆಲಸ ಮಾಡುತ್ತಾರೆ. ಆಂಧ್ರಪ್ರದೇಶ ಬಿಟ್ಟರೆ ಕರ್ನಾಟಕದಲ್ಲಿ ಮಾತ್ರ ಆಹಾರ ಭದ್ರತಾ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಸಿದ್ದರಾಮಯ್ಯ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿದ್ಧಾಂತದಲ್ಲಿ ಉದಾರತೆ ಇದ್ದವರು ಸಿದ್ದರಾಮಯ್ಯ ಅವರನ್ನು ಬಿಟ್ಟು ಓಡಿ ಹೋದರು. ಈಗ ಐದು ರೂಪಾಯಿಗೆ ಹೋಗಿ ಕೈಕಟ್ಟಿನಿಂತಿರುತ್ತಾರೆ. ನಮ್ಮ ತತ್ತ$್ವ, ಸಿದ್ಧಾಂತಕ್ಕೆ ಬೆಂಬಲ ಸಿಗಲಿಲ್ಲ ಎಂಬ ಬೇಸರವಿದೆಯೇ ಹೊರತು ನಮಗೆ ಸೋಲಿನ ಬಗ್ಗೆ ಚಿಂತೆ ಇಲ್ಲ. ಬುದ್ಧಿವಂತರು, ಜನಪರ ಸಿದ್ಧಾಂತ, ಸಂವಿಧಾನ ಪರವಾಗಿ ಇರುವವರನ್ನು ಮತದಾರರು ಸೋಲಿಸಿ, ಸಿದ್ಧಾಂತದ ವಿರುದ್ಧ ಇರುವವರನ್ನು ಪ್ರೋತ್ಸಾಹಿಸಿ ರಾಜಕೀಯ ಶಕ್ತಿ ತುಂಬುತ್ತಿದ್ದಾರೆ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದ ಖರ್ಗೆ, ಸಿದ್ದರಾಮಯ್ಯ ಅವರ ಕಾಲದ ಆಡಳಿತವನ್ನು ಒಪ್ಪಿಕೊಂಡು ಬೇರೆಯವರಿಗೆ ಹೇಳದಿದ್ದರೆ ಪ್ರಯೋಜನ ಆಗುವುದಿಲ್ಲ ಎಂದು ಅವರು ತಿಳಿಸಿದರು.
ಸೋನಿಯಾ ವಿಚಾರಣೆ ಕಾರಣ ಖರ್ಗೆ 80ನೇ ಜನ್ಮದಿನ ಆಚರಣೆ ಇಲ್ಲ
450 ಪುಟಗಳ ಬೃಹತ್ ಕೃತಿ: ‘ಸಿದ್ದರಾಮಯ್ಯ ಆಡಳಿತ -ನೀತಿ ನಿರ್ಧಾರ’ ಸಿದ್ದರಾಮಯ್ಯ ಅವರ 75ನೇ ಜನ್ಮದಿನೋತ್ಸವ ಅಂಗವಾಗಿ ಅವರ ಆಡಳಿತ ಕುರಿತ 450 ಪುಟಗಳ ಬೃಹತ್ ಕೃತಿಯಾಗಿದೆ. ಸಾಹಿತಿ ಕಾ.ತ.ಚಿಕ್ಕಣ್ಣ ಹಾಗೂ ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು ಸಂಪಾದಿಸಿರುವ ಈ ಕೃತಿಯಲ್ಲಿ 27 ಮಂದಿ ಖ್ಯಾತ ಲೇಖಕರು ಸಿದ್ದರಾಮಯ್ಯ ಅವರ ಆಡಳಿತ ಮತ್ತು ಪರಿಣಾಮದ ಕುರಿತು ವಿಮರ್ಶಾತ್ಮಕ ಲೇಖನಗಳನ್ನು ಬರೆದಿದ್ದಾರೆ. ಕೃತಿಯಲ್ಲಿ ಸಿದ್ದರಾಮಯ್ಯ ಆಡಳಿತದಲ್ಲಿ ರೂಪಿಸಿದ್ದ ಯೋಜನೆಗಳಲ್ಲಿ ಸಂವಿಧಾನದ ಮೌಲ್ಯಗಳು ಹಾಗೂ ಸಾಮಾಜಿಕ ನ್ಯಾಯದ ಅನುಷ್ಠಾನದ ಬಗ್ಗೆ ವಸ್ತುನಿಷ್ಠ ಮತ್ತು ವಿಮರ್ಶಾತ್ಮಕ ಲೇಖನಗಳಿವೆ.