ಬಿಜೆಪಿ ಸೇರಲು ಮುಂದಾದ ಶಾಸಕ: ವಿಜಯೇಂದ್ರ ಜತೆ ಮೊದಲ ಸುತ್ತಿನ ಮಾತುಕತೆ ಮುಕ್ತಾಯ..!
ಗ್ರಾಮ.ಪಂಚಾಯಿತಿ.ಚುನಾವಣೆ ಘೋಷಣೆ ಬೆನ್ನಲ್ಲೇ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ರಾಜಕೀಯ ಅಖಾಡ ರಂಗೇರಿದ್ದು, ಶಾಸಕರೊಬ್ಬರು ಕಮಲ ಮುಡಿಯಲು ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.
ಚಾಮರಾಜನಗರ, (ಡಿ.02): ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ವಿಶ್ವಾಸ ಮತದ ದಿನ ಗೈರಾಗುವ ಮೂಲಕ ಪರೋಕ್ಷವಾಗಿ ಬಿಜೆಪಿ ಬೆಂಬಲಿಸಿದ್ದ ಶಾಸಕ ಎನ್.ಮಹೇಶ್, ಬಿಎಸ್‍ಪಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದರು.
ಇದೀಗ ಗ್ರಾ.ಪಂ.ಚುನಾವಣೆ ಹಿನ್ನಲೆ ತಮ್ಮ ಬೆಂಬಲಿಗರು, ಕಾರ್ಯಕರ್ತರಿಗೆ ಅಧಿಕಾರ ಒದಗಿಸಿಕೊಡಬೇಕಾಗಿರುವ ನಿಟ್ಟಿನಲ್ಲಿ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಆನೆ ಇಳಿದು ಬಿಜೆಪಿ ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ.
ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ: ಬಿಜೆಪಿ ಸೇರುವುದಾಗಿ ಘೋಷಿಸಿದ ಕೈ ನಾಯಕ
ಈ ಕುರಿತು ಸಚಿವರಾದ ಆರ್.ಅಶೋಕ್,ಸೋಮಶೇಖರ್, ಗೋಪಾಲಯ್ಯ, ಸುರೇಶ್ ಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜೆಯೇಂದ್ರ, ರವಿಕುಮಾರ್ ಜೊತೆಗೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ ಎಂಬ ತಿಳಿದುಬಂದಿದೆ.
ಇನ್ನು ಅಂತಿಮವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ಮಾಡಲಿದ್ದು, ಎಲ್ಲವೂ ಅಂದುಕೊಂಡತೆ ಆದರೆ ಸಂಕ್ರಾತಿ ಹಬ್ಬದ ನಂತರ ಎನ್.ಮಹೇಶ್ ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ.