ಚಿಕ್ಕಮಗಳೂರು: ಕಾಂಗ್ರೆಸ್‌ನ ಎಚ್.ಡಿ. ತಮ್ಮಯ್ಯ ಸೇರಿ 33 ನಾಮಪತ್ರ ಸಲ್ಲಿಕೆ

ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ 33 ನಾಮಪತ್ರ ಸಲ್ಲಿಕೆ. 

Submission of 33 Nominations Including Congress Candidate DC Tammayya in Chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಏ.20):  ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಇಂದು (ಏಪ್ರಿಲ್ 20 ರಂದು) ಚಿಕ್ಕಮಗಳೂರು ಜಿಲ್ಲೆಯಲ್ಲಿ 33 ನಾಮಪತ್ರ ಸಲ್ಲಿಕೆಯಾಗಿವೆ. ಕೇಂದ್ರದಲ್ಲಿ ಕಾಂಗ್ರೆಸ್ ಎಚ್. ಡಿ. ತಮ್ಮಯ್ಯ ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿ ಶಕ್ತಿ ಪ್ರದರ್ಶಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಗಾಯತ್ರಿ ಶಾಂತೇಗೌಡ ಸಾತ್ ನೀಡಿದರು. ಮೂಡಿಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದು ಶಾಸಕ ಸಿ.ಟಿ. ರವಿ ಇತರರು ಉಪಸ್ಥಿತರಿದ್ದರು– ಶೃಂಗೇರಿ, ವಿಧಾನಸಭಾ ಕ್ಷೇತ್ರದಿಂದ  ಎಂ.ಕೆ. ದಯಾನಂದ, ಜನತಾ ದಳ (ಜಾತ್ಯಾತೀತ)ದಿಂದ ಸುಧಾಕರ ಎಸ್ ಶೆಟ್ಟಿ, ಪಕ್ಷೇತರ ಅಭ್ಯರ್ಥಿಗಳಾಗಿ ಮಂಜುನಾಥ ಯಾನೆ ಅಬ್ರಾಹಾಮ್, ಕೆ.ಆರ್. ಕುಸುಮ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದಿಂದ ಉಮೇಶ್ ಬಿ.ಎ., ನಾಮಪತ್ರ ಸಲ್ಲಿಸಿದ್ದಾರೆ.

ಮೂಡಿಗೆರೆ, ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ ದೀಪಕ್ ದೊಡ್ಡಯ್ಯ, ಕರುನಾಡು ಪಕ್ಷದಿಂದ ಹೆಚ್.ಎಸ್. ಕುಮಾರಸ್ವಾಮಿ, ಎ.ಎ.ಪಿ. ಯಿಂದ ಪ್ರಭು ಸಿ., ಪಕ್ಷೇತರರಾಗಿ ಬಿ.ಬಿ. ನಿಂಗಯ್ಯ,  ನಾಮಪತ್ರ ಸಲಿಸಿದ್ದಾರೆ.ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ನೂರುಲ್ಲಾಖಾನ್, ಸೈಯ್ಯದ್ ಜಬಿ, ಶಾಬುದ್ದೀನ್, ಮೋಸೀನಾ, ಸಿ.ಕೆ. ಜಗದೀಶ, ಪುಟ್ಟೇಗೌಡ ಯು.ಪಿ., ರವಿಕುಮಾರ್ ಎನ್.ಸಿ. ಪಕ್ಷೇತರರಾಗಿ ಹಾಗೂ ಜೆಡಿಎಸ್ ನಿಂದ, ಭಾರತೀಯ ಜನತಾ ಪಕ್ಷದಿಂದ ಸಿ.ಟಿ. ರವಿ, ಜನತಾ ದಳ (ಜಾತ್ಯಾತೀತ)ದಿಂದ ತಿಮ್ಮಶೆಟ್ಟಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಹೆಚ್.ಡಿ. ತಮ್ಮಯ್ಯ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಶಿವಪ್ರಕಾಶ್ ನಾಮಪತ್ರ ಸಲ್ಲಿಸಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ವಿರೋಧ ನಡುವೆಯೂ ಸಾಲಮನ್ನಾ ಮಾಡಿದ್ದೆ, ಈ ಬಾರಿ ಬಹುಮತ ಕೊಡಿ: ಎಚ್‌ಡಿಕೆ

ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ಹೆಚ್.ಪಿ. ಅಶೋಕ, ಗಿರೀಶ್ ನಾಯ್ಕ ಆರ್.ಎಲ್., ಎ.ಆರ್. ಸತೀಶ್, ಎ.ಆರ್. ನಾಗರಾಜಪ್ಪ, ಗೋಪಾಲಕೃಷ್ಣ ಬಿ., ರಫೀಕ್ ಅಹಮ್ಮದ್, ಪರಮೇಶ್ವರಪ್ಪ ಡಿ.ಎಂ., ಸಿ.ಎಂ. ನಂಜಪ್ಪ,  ಭಾರತೀಯ ಜನತಾ ಪಕ್ಷದಿಂದ ಡಿ.ಎಸ್. ಸುರೇಶ್, ಎ.ಎ.ಪಿ. ಯಿಂದ ಡಿ.ಸಿ. ಸುರೇಶ್,  ನಾಮಪತ್ರ ಸಲ್ಲಿಸಿದ್ದಾರೆ.– ಕಡೂರು ವಿಧಾನ ಸಭಾ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಕೆ.ಎಸ್. ಆನಂದ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಆನಂದ ನಾಯ್ಕ ಎಸ್.ಎಲ್, ನಾಮಪತ್ರ ಸಲ್ಲಿಸಿದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios