ಕುತೂಹಲ ಕೆರಳಿಸಿದ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ

ಬಿಜೆಪಿ ರಾಜ್ಯಾಧ್ಯಕ್ಷ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಂತೋಷ್ ಸಮ್ಮುಖದಲ್ಲಿ ನಡೆಯಲಿರುವ ಸಭೆ|  ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರು, ಎಂಟು ಮೋರ್ಚಾಗಳ ಅಧ್ಯಕ್ಷರು, ಖಜಾಂಚಿ, ಕಾರ್ಯಾಲಯ ಕಾರ್ಯದರ್ಶಿಗಳು ಭಾಗಿ| 

State BJP officials meeting Will be Held Today

ಬೆಂಗಳೂರು(ಆ.23): ಇಂದು ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದೆ.  ಸಂಜೆ ಐದು ಗಂಟೆಗೆ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಸಭೆಯಲಿರುವ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರು ಭಾಗಿಯಾಗಲಿದ್ದಾರೆ.

"

ಬಿಜೆಪಿ ರಾಜ್ಯಾಧ್ಯಕ್ಷ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಂತೋಷ್ ಸಮ್ಮುಖದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರು, ಎಂಟು ಮೋರ್ಚಾಗಳ ಅಧ್ಯಕ್ಷರು, ಖಜಾಂಚಿ, ಕಾರ್ಯಾಲಯ ಕಾರ್ಯದರ್ಶಿಗಳು ಭಾಗಿಯಾಗಲಿದ್ದಾರೆ. 

ಒಬ್ಬೊಬ್ಬರಾಗಿಯೇ ಭೇಟಿಯಾಗುತ್ತಿರೋ ಸಚಿವರು: ಕುತೂಹಲ ಮೂಡಿಸಿದ ಬಿಲ್ ಸಂತೋಷ್‌ ನಡೆ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಸಿಎಂ ಅಧಿಕೃತ ನಿವಾಸ ಕಾವೇರಿಯಿಂದ ಭಾಗಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಇಲ್ಲದವರು ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿದ್ದಾರೆ. ನೂತನ ಪದಾಧಿಕಾರಿಗಳ ನೇಮಕವಾದ ಬಳಿಕ ಇದು ಪಕ್ಷದ ಮೊದಲ ಸಭೆಯಾಗಿದೆ. 

ಸಭೆಯ ಅಜೆಂಡಾ ಹೀಗಿವೆ: 

* ಸರ್ಕಾರ ಮತ್ತು ಪಕ್ಷದ ನಡುವೆ ಹೇಗೆ ಕೆಲಸ ಮಾಡಬೇಕು
* ಕೇಂದ್ರ ರಾಜ್ಯ ಸರ್ಕಾರದ ಸಾಧನೆ ಹೇಗೆ ಜನರಿಗೆ ತಲುಪಿಸಬೇಕು
* ಸರ್ಕಾರವನ್ನು ಹೇಗೆ ಡಿಪೆಂಡ್ ಮಾಡಿಕೊಳ್ಳಬೇಕು
* ಬೂತ್ ಮಟ್ಟದಲ್ಲಿ ಹೇಗೆ ಕೆಲಸ ಮಾಡಬೇಕು
* ಎರಡು ವರ್ಷಗಳಲ್ಲಿ ಪಕ್ಷದ ಸಂಘಟನೆ ಹೇಗೆ ಇರಬೇಕು
* ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ಹೇಗೆ ತಲುಪಿಸಬೇಕು
* ಯುವ ಮೋರ್ಚಾ ಹೇಗೆ ಜವಾಬ್ದಾರಿ ನಿಭಾಯಿಸಬೇಕು

ಇವೆಲ್ಲ ವಿಚಾರಗಳ ಬಗ್ಗೆ ನೂತನ ಪದಾಧಿಕಾರಿಗಳಿಗೆ ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಸಲಹೆ ಸೂಚನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. 
 

Latest Videos
Follow Us:
Download App:
  • android
  • ios