* ಮಾಜಿ ಕೇಂದ್ರ ಸಚಿವ ಸದಾನಂದಗೌಡರನ್ನ ಭೇಟಿಯಾದ ಶ್ರೀರಾಮುಲು, ರೆಡ್ಡಿ* ಸದಾನಂದಗೌಡರನ್ನ ಭೇಟಿಯಾದ ಶ್ರೀರಾಮುಲು ಹಾಗೂ ಆಪ್ತ ಗೆಳೆಯ ಗಾಲಿ ಜನಾರ್ದನ ರೆಡ್ಡಿ * ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ 

ಬೆಂಗಳೂರು, (ಜು.15): ಇದೇ ಜುಲೈ 21, 22 ರಂದು ಕೆಲವು ಶಾಸಕರು ದೆಹಲಿಗೆ ಹೋಗಲು ತಯಾರಿ ನಡೆಸಿದ್ದಾರೆ. ಈ ಬಗ್ಗೆ ಸ್ವತಃ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಮತ್ತೊಂದೆಡೆ ಸಚಿವ ಶ್ರೀರಾಮುಲು ಹಾಗೂ ಆಪ್ತ ಗೆಳೆಯ ಗಾಲಿ ಜನಾರ್ದನ ರೆಡ್ಡಿ ಸೇರಿ ಮಾಜಿ ಕೇಂದ್ರ ಸಚಿವ ಸದಾನಂದಗೌಡ ಅವರನ್ನ ಭೇಟಿ ಮಾಡಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಮೋದಿ ಭೇಟಿಗೆ ಸಮಯ ನಿಗದಿ: ದಿಲ್ಲಿಗೆ ತೆರಳಿರುವ ಸಿಎಂ ಬಿಎಸ್‌ವೈ

ಇಂದು (ಗುರುವಾರ) ಶ್ರೀರಾಮುಲು‌ ಮತ್ತು ಜನಾರ್ಧನ ರೆಡ್ಡಿ, ಸದಾನಂದ ಗೌಡರ ನಿವಾಸಕ್ಕೆ ತೆರಳಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ಸಿಎಂ ಪಟ್ಟವನ್ನು ಸದಾನಂದಗೌಡರಿಗೆ ಕಟ್ಟುವುದರಿಂದ ಅವರನ್ನ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಾಗಿದೆ ಎನ್ನುವ ಚರ್ಚಗಳು ನಡೆಯುತ್ತಿವೆ.

ಅದರಲ್ಲೂ ರಾಜ್ಯ ರಾಜಕಾರಣದಿಂದ ದೂರ ಉಳಿದಿರುವ ಜನಾರ್ಧನ ರೆಡ್ಡಿ ಸದಾನಂದಗೌಡರನ್ನ ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.