ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಸೋಲಿಗೆ ಸ್ವಪಕ್ಷದ ಗುಬ್ಬಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಕಾರಣ  ಗುಬ್ಬಿ ಶಾಸಕರು 2 ವರ್ಷದಿಂದ ಸಂಪರ್ಕದಲ್ಲಿಲ್ಲ, ಶಿರಾ ಉಪಚುನಾವಣೆಗೆ ಬಂದಿಲ್ಲ, ತುಮಕೂರಲ್ಲಿ ದೇವೇಗೌಡರನ್ನು ಸೋಲಿಸಲು ಅವರೇ ಚಿತಾವಣೆ ಮಾಡಿದ್ದರು

ತುಮಕೂರು (ಅ.26): ಲೋಕಸಭಾ ಚುನಾವಣೆಯಲ್ಲಿ (loksabha election) ದೇವೇಗೌಡರ (HD Devegowda) ಸೋಲಿಗೆ ಸ್ವಪಕ್ಷದ ಗುಬ್ಬಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ (Sr shrinivas) ಕಾರಣ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಹರಿಹಾಯ್ದಿದ್ದಾರೆ.

ಗುಬ್ಬಿಯಲ್ಲಿ ತಾಪಂ. ಜಿಪಂ. ಮಾಜಿ ಸದಸ್ಯರ ಜೆಡಿಎಸ್‌ (JDS) ಸೇರ್ಪಡೆ ವೇಳೆ ಮಾತನಾಡಿದ ಎಚ್‌ಡಿಕೆ, ಗುಬ್ಬಿ (Gubbi) ಶಾಸಕರು 2 ವರ್ಷದಿಂದ ಸಂಪರ್ಕದಲ್ಲಿಲ್ಲ, ಶಿರಾ ಉಪಚುನಾವಣೆಗೆ (By Election) ಬಂದಿಲ್ಲ, ತುಮಕೂರಲ್ಲಿ (Tumakur) ದೇವೇಗೌಡರನ್ನು ಸೋಲಿಸಲು ಅವರೇ ಚಿತಾವಣೆ ಮಾಡಿದ್ದರು ಎಂದು ಕಿಡಿಕಾರಿದರು.

ಜೆಡಿಎಸ್‌ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ (SR Shrinivas) ಕಳೆದ 2 ವರ್ಷಗಳಿಂದ ನನ್ನ ಸಂಪರ್ಕದಲ್ಲಿಲ್ಲ, ಅವರು ಕಾಂಗ್ರೆಸ್‌ (Congress) ನಾಯಕರ ಸಂಪರ್ಕದಲ್ಲಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ (Tumakur) ಸ್ಪರ್ಧಿಸಿದ ದೇವೇಗೌಡರ ಸೋಲಿಗೆ ಅವರೇ ಪ್ರಮುಖ ಕಾರಣ, ದೇವೇಗೌಡರ ಅವರು ಏನೇನು ಮಾಡಿದ್ದಾರೆ ಎಂಬುದು ಗೊತ್ತಿದೆಯ ಅವರು ಯಾವ ಪಕ್ಷಕ್ಕೆ ಬೇಕಾದರೂ ಹೋಗಲಿ. ಆದರೆ ನಮ್ಮನ್ನು ದೂರುವುದು ಮಾತ್ರ ಬೇಡ ಎಂದು ಎಚ್‌ಡಿಕೆ ವಾಗ್ದಾಳಿ ನಡೆಸಿದರು.

ಜೆಡಿಎಸ್ ಶಾಸಕಗೆ HDK ಟಾಂಗ್ : ಪಕ್ಷ ಸೇರುತ್ತಿದ್ದಾರೆ ಮತ್ತೋರ್ವ ಮುಖಂಡ

ದೇವೇಗೌಡರು ಕುಂಚಿಟಿಗರನ್ನು ಮಂತ್ರಿ ಮಾಡಿ ಎಂದು ಹೇಳಿದ್ದರೂ ಗುಬ್ಬಿ ಶಾಸಕರನ್ನು ಮಂತ್ರಿ ಮಾಡಿದೆ. ನನ್ನನ್ನು ಎಷ್ಟುಟೀಕಿಸಿದರೂ ಸರಿ ದೇವೇಗೌಡರನ್ನು ಟೀಕಿಸಬಾರದು. ಅಲ್ಲದೇ ನಾವೇನೂ ಪಕ್ಷ ಬಿಟ್ಟು ಹೋಗಿ ಅಂತ ಹೇಳಿಲ್ಲ. ಅವರೇ ತೀರ್ಮಾನಿಸಿದ್ದಾರೆ, ಅವರು ಜೆಡಿಎಸ್‌ನಲ್ಲೇ ಇರುತ್ತೇನೆ ಅಂದರೆ ಸಂತೋಷ ಎಂಬ ಮಾತನ್ನೂ ಎಚ್‌ಡಿಕೆ ಇದೇ ವೇಳೆ ಹೇಳಿದರು.

ಜತೆಗೆ ರಾಜಕಾರಣ (Politics) ಮಾಡುವುದಿದ್ದರೆ ನೇರವಾಗಿ ಮಾಡಲಿ. ಹಿಂದೊಂದು, ಮುಂದೊಂದು ಮಾತನಾಡುವುದು ಬೇಡ ಎಂದು ಮಾರ್ಮಿಕವಾಗಿ ನುಡಿದರು. ಪಕ್ಷದ ನಾಯಕರ ಜತೆ ಮುನಿಸಿಕೊಂಡಿರುವ ಗುಬ್ಬಿ ಜೆಡಿಎಸ್‌ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಕಾಂಗ್ರೆಸ್‌ ಸೇರುವುದಾಗಿ ಬಹಿರಂಗವಾಗಿ ಹೇಳಿದ್ದಾರೆ.