Asianet Suvarna News

'ರಾಜೀ​ನಾಮೆ ಪತ್ರ ಟೈಪ್‌ ಮಾಡಿದ್ದೇನೆ, ಚರ್ಚಿಸಿ ನೀಡು​ತ್ತೇನೆ'

ನಾನು ಈಗಲೇ ರಾಜೀನಾಮೆ ಪತ್ರ ಟೈಪ್ ಮಾಡಿ ಇಟ್ಟುಕೊಂಡಿದ್ದೇನೆ. ಈ ಬಗ್ಗೆ ಚರ್ಚಿಸಿ ಶೀಘ್ರದಲ್ಲೇ ನೀಡಯತ್ತೇನೆ ಎಂದು ಸಚಿವರು ಹೇಳಿದ್ದಾರೆ

Soon will give resignation letter to CM  says Minister CT Ravi snr
Author
Bengaluru, First Published Sep 30, 2020, 8:22 AM IST
  • Facebook
  • Twitter
  • Whatsapp

ಚಿಕ್ಕಮಗಳೂರು (ಸೆ.30): ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲು ಈಗಾಗಲೇ ರಾಜೀನಾಮೆ ಪತ್ರವನ್ನು ಟೈಪ್‌ ಮಾಡಿ ಇಟ್ಟಿದ್ದೇನೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಅ.1ರಂದು ಕ್ಯಾಬಿನೆಟ್‌ ಸಭೆ ಇದೆ. 2ರಂದು ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅದೇ ದಿನ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇನೆ. ಸಚಿವನಾಗಿ ಒಂದು ವರ್ಷ ಪೂರೈಸಿದ್ದೇನೆ. 

ಇದರ ರಿಪೋರ್ಟ್‌ ಕಾರ್ಡ್‌ ಅವರಿಗೆ ಕೊಟ್ಟು ಸಮಾಲೋಚನೆ ನಡೆಸಿ, ರಾಜೀನಾಮೆ ನೀಡುತ್ತೇನೆಂದು ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು. ಸಚಿವ ಸ್ಥಾನ ಪಡೆಯಲು ಎಲ್ಲರಿಗೂ ಯೋಗ್ಯತೆ ಇದೆ. ಯೋಗ ಇದ್ದವರು ಆ ಸ್ಥಾನ ಪಡೆಯುತ್ತಾರೆ. ಸಿಎಂ ಅನುಭವಿಗಳು ಸೂಕ್ತವಾದ ತೀರ್ಮಾನ ತೆಗೆದುಕೊಳ್ಳುತ್ತಾರೆ. ನೇಮಕ ಸ್ವಾಭಾವಿಕ ಪ್ರಕ್ರಿಯೆ. ಸಂಘಟನೆ, ಸರ್ಕಾರ, ಇದರಲ್ಲಿ ಆದ್ಯತೆ ಕೇಳಿದಾಗ ಸಂಘಟನೆ ಎಂದು ಹೇಳಿದ್ದೆ ಎಂದರು.

ಪ್ರಮುಖ ಬಿಜೆಪಿ ನಾಯಕರಿಗೆ ಶಾಕ್: ಮುಂದಿನ ತಿಂಗ್ಳು ರಾಜ್ಯ ರಾಜಕಾರಣದಲ್ಲಿ ಸಂಚಲನ .

ತೀರ್ಮಾನ ತೆಗೆದುಕೊಂಡರು ವರಿಷ್ಠರು. ಸಾಮಾನ್ಯ ಕಾರ್ಯಕರ್ತನ್ನಾಗಿ ಕೆಲಸ ಮಾಡಿದ್ದೇನೆ. ಅಧಿಕಾರ ಒಂದು ಸಾಧನಾ, ಅಧಿಕಾರವೇ ಜೀವನದ ಅಂತಿಮ ಗುರಿ ಅಲ್ಲ. ಸಚಿವನಾಗಿ ಕೆಲವು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದೇನೆ. ಕೆಲವು ಅನುಷ್ಠಾನ ಮಾಡೇ ಮಾಡ್ತಿನಿ ಎಂದರು.

Follow Us:
Download App:
  • android
  • ios