Asianet Suvarna News Asianet Suvarna News

Karnataka Politics: ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಅಧಿಕಾರ ಸೋನಿಯಾಗೆ

 

  • ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಅಧಿಕಾರ ಸೋನಿಯಾಗೆ
  • ಕೆಪಿಸಿಸಿ ಸದಸ್ಯರ ಸಭೆಯಲ್ಲಿ ನಿರ್ಧಾರ
  • ಮತ್ತೆ ಡಿಕೆಶಿಗೇ ಪಟ್ಟಸಾಧ್ಯತೆ
Sonia has the power to elect KPCC president bengaluru rav
Author
First Published Sep 17, 2022, 7:35 AM IST

ಬೆಂಗಳೂರು (ಸೆ.17) : ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರ ಆಯ್ಕೆ ಮಾಡಲು ಎಐಸಿಸಿ ಅಧ್ಯಕ್ಷರಾದ ಸೋನಿಯಾಗಾಂಧಿ ಅವರಿಗೆ ಸಂಪೂರ್ಣ ಅಧಿಕಾರ ನೀಡಿ ರಾಜ್ಯ ಕೆಪಿಸಿಸಿ ಸದಸ್ಯರ ಸಭೆಯಲ್ಲಿ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷರ ಆಯ್ಕೆಯ ಅಧಿಕಾರವನ್ನು ಸೋನಿಯಾಗಾಂಧಿ ಅವರಿಗೆ ವರ್ಗಾಯಿಸಿದ್ದು, ಸದ್ಯದಲ್ಲೇ ಡಿ.ಕೆ. ಶಿವಕುಮಾರ್‌ ಅವರನ್ನೇ ಮತ್ತೊಂದು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ ನೇಮಿಸಿ ಸೋನಿಯಾಗಾಂಧಿ ಅವರು ಆದೇಶ ಹೊರಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಸಚಿವ ದೇಶಪಾಂಡೆ ವಿರುದ್ಧ ಡಿಕೆಶಿ ಬಹಿರಂಗ ಆಕ್ರೋಶ

ಬೆಂಗಳೂರಿನ(Bengaluru) ಅಂಬೇಡ್ಕರ್‌ ಭವನ(Ambedkar Bhavana)ದಲ್ಲಿ ಚುನಾವಣಾಧಿಕಾರಿ ಸುದರ್ಶನ್‌ ನಾಚಿಯಪ್ಪನ್‌(Sudarshan nachiappan) ಸಮ್ಮುಖದಲ್ಲಿ ನಡೆದ ಕೆಪಿಸಿಸಿ ಸದಸ್ಯರ ಸಭೆಯಲ್ಲಿ ಕೆಪಿಸಿಸಿ(KPCC) ಅಧ್ಯಕ್ಷರ ಆಯ್ಕೆಯ ಅಧಿಕಾರವನ್ನು ಎಐಸಿಸಿ ಅಧ್ಯಕ್ಷರಿಗೆ ನೀಡಲು ಡಿ.ಕೆ. ಶಿವಕುಮಾರ್‌(D.K.Shivakumar) ನಿರ್ಣಯ ಮಂಡಿಸಿದರು. ಸಭೆಯಲ್ಲಿ ಹಾಜರಿದ್ದ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah), ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌(B.K.Hariprasad), ಕೆಪಿಸಿಸಿ ಕಾರ್ಯಾಧ್ಯಕ್ಷರು ಸೇರಿದಂತೆ ಎಲ್ಲಾ ಕೆಪಿಸಿಸಿ ಸದಸ್ಯರು ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದರಿಂದ, ಅವಿರೋಧವಾಗಿ ನಿರ್ಣಯ ಅಂಗೀಕಾರಗೊಂಡಿದೆ.

ಸರ್ವಾನುಮತದಿಂದ ಅಂಗೀಕಾರ:

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರ ನೇಮಕದ ಅಧಿಕಾರವನ್ನು ಸೋನಿಯಾಗಾಂಧಿ ಅವರಿಗೆ ವಹಿಸುವ ನಿರ್ಣಯವನ್ನು ಕೆಪಿಸಿಸಿ ಸದಸ್ಯರೆಲ್ಲರೂ ಸರ್ವಾನುಮತದಿಂದ ಅಂಗೀಕರಿಸಿದ್ದಾರೆ. ಇದರ ಅನ್ವಯ ಸದ್ಯದಲ್ಲೇ ಸೋನಿಯಾ ನೇಮಕ ಮಾಡಲಿದ್ದಾರೆ ಎಂದು ಹೇಳಿದರು.

ಅ.2ರಂದು ಬದನವಾಳು ಗ್ರಾಮದಲ್ಲಿ ರಾಹುಲ್‌ಗಾಂಧಿ ನೇತೃತ್ವದಲ್ಲಿ ಗಾಂಧಿ ಜಯಂತಿ: ಡಿಕೆಶಿ

ಇದಕ್ಕೂ ಮೊದಲು ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ಪಕ್ಷದ ಅಧ್ಯಕ್ಷನಾಗಿ ನನ್ನ ಅಧಿಕಾರ ಅವಧಿ ಮುಕ್ತಾಯದ ಹಂತಕ್ಕೆ ಬಂದಿದೆ. ಹೀಗಾಗಿ ಚುನಾವಣೆ ಪ್ರಕ್ರಿಯೆ ನಡೆಯಬೇಕಾಗಿತ್ತು. ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಮುಂದಿನ ತಿಂಗಳು ನಿಗದಿಯಾಗಿದ್ದು, ಸೆ.20 ರೊಳಗಾಗಿ ಕೆಪಿಸಿಸಿ ಅಧ್ಯಕ್ಷರ ಸ್ಥಾನದ ಬಗ್ಗೆ ನಿರ್ಣಯ ಆಗಬೇಕಿತ್ತು. ಹೀಗಾಗಿ ನಿರ್ಧಾರ ಮಾಡಿ ಹೈಕಮಾಂಡ್‌ಗೆ ಕಳುಹಿಸಲಾಗಿದೆ’ ಎಂದರು.

Follow Us:
Download App:
  • android
  • ios