ಬಿಜೆಪಿ ಮಾರ್ಚ್ 15 ರೊಳಗೆ ಹೊಸ ರಾಷ್ಟ್ರೀಯ ಪಕ್ಷದ ಅಧ್ಯಕ್ಷರನ್ನು ಪಡೆಯುವ ಸಾಧ್ಯತೆಯಿದೆ. ಸ್ಮೃತಿ ಇರಾನಿ, ಅನುರಾಗ್‌ ಠಾಕೂರ್‌, ಶಿವರಾಜ್‌ ಸಿಂಗ್‌ ಚೌಹಾಣ್‌ ಸೇರಿ ಹಲವರು ರೇಸ್‌ನಲ್ಲಿದ್ದಾರೆ ಎನ್ನಲಾಗಿದೆ. ಕರ್ನಾಟಕ ಸೇರಿ ಉಳಿದ ರಾಜ್ಯಗಳ ರಾಜ್ಯಾಧ್ಯಕ್ಷರನ್ನು ಶೀಘ್ರ ಬಿಜೆಪಿ ನೇಮಿಸಲಿದೆ.

ನವದೆಹಲಿ: ಬಿಜೆಪಿ ಮಾರ್ಚ್ 15 ರೊಳಗೆ ಹೊಸ ರಾಷ್ಟ್ರೀಯ ಪಕ್ಷದ ಅಧ್ಯಕ್ಷರನ್ನು ಪಡೆಯುವ ಸಾಧ್ಯತೆಯಿದೆ ಎಂದು ಗುರುವಾರ ಮೂಲಗಳು ಹೇಳಿವೆ ಎಂದು ಎನ್ಡಿಡೀವಿ ವರದಿ ಮಾಡಿದೆ. ಆದಾಗ್ಯೂ, ಹುದ್ದೆಗೆ ಪ್ರಮುಖ ಆಯ್ಕೆಗಳು ಅಥವಾ ಮುಂಚೂಣಿಯಲ್ಲಿರುವವರ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಸ್ಮೃತಿ ಇರಾನಿ, ಅನುರಾಗ್‌ ಠಾಕೂರ್‌, ಶಿವರಾಜ್‌ ಸಿಂಗ್‌ ಚೌಹಾಣ್‌ ಸೇರಿ ಹಲವರು ರೇಸ್‌ನಲ್ಲಿದ್ದಾರೆ ಎನ್ನಲಾಗಿದೆ.ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಅಧಿಕಾರಾವಧಿ ಜೂನ್ 2024 ರಲ್ಲಿ ಕೊನೆಗೊಂಡಿತ್ತು. ಆದರೆ ಕೆಲವು ವಿಧಾನಸಭೆ ಚುನಾವಣೆಗಳು ಎದುರಾದ ಕಾರಣ ಅವರನ್ನು ಮುಂದುವರಿಸಲಾಗಿತ್ತು. ಆದರೆ ಈಗ ದಿಲ್ಲಿ ಚುನಾವಣೆ ಮುಗಿದ ಕಾರಣ ಮಾ.15ರೊಳಗೆ ಚುನಾವಣೆ ಮುಗಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶೀಘ್ರ ರಾಜ್ಯಾಧ್ಯಕ್ಷರ ಆಯ್ಕೆ:

ಕನಾಟಕ ಸೇರಿ ಉಳಿದ ರಾಜ್ಯಗಳ ರಾಜ್ಯಾಧ್ಯಕ್ಷರನ್ನು ಶೀಘ್ರ ಬಿಜೆಪಿ ನೇಮಿಸಲಿದೆ ಎಂದು ಮೂಲಗಳು ಹೇಳಿವೆ. ಬಿಜೆಪಿ 28 ರಾಜ್ಯಗಳ ಪೈಕಿ 12 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆಗಳನ್ನು ಪೂರ್ಣಗೊಳಿಸಿದೆ.

ನಾನು ಬಿಜೆಪಿಗೆ ಹತ್ತಿರ ಎಂಬುದು ಸುಳ್ಳು, ನಾನು ಎಲ್ಲ ಧರ್ಮ ಪ್ರೀತಿಸುತ್ತೇನೆ: ಡಿಕೆಶಿ

2 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಗೊಳಗಾದ ರಾಜಕಾರಣಿಗಳ ಆಜೀವ ಅನರ್ಹತೆಗೆ ಕೇಂದ್ರದ್ದೇ ವಿರೋಧ!