ಬೈ ಎಲೆಕ್ಷನ್: ಕೈ ಹಿಡಿಯಲು, ಕಮಲ ಅರಳಿಸಲು, ದಳಪತಿಗಳು ದಾಳ ಉರುಳಿಸಲು ಹೈವೋಲ್ಟೇಜ್ ಪ್ರಚಾರ!
ಶಿರಾ ಹಾಗೂ ರಾರಾ ಉಪಚುನಾವಣಾ ಅಖಾಡ ರಾಜಕೀಯ ನಾಯಕರ ವಾಕ್ಸಮರಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಮಾತಿನ ಚಕಮಕಿ ಜೋರಾಗಿದೆ.
ಬೆಂಗಳೂರು (ಅ. 29): ಶಿರಾ ಹಾಗೂ ರಾರಾ ಉಪಚುನಾವಣಾ ಅಖಾಡ ರಾಜಕೀಯ ನಾಯಕರ ವಾಕ್ಸಮರಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಮಾತಿನ ಚಕಮಕಿ ಜೋರಾಗಿದೆ. ಕಟೀಲ್ ಪಂಚಪಾಂಡವರಲ್ಲ. ದೇಶವನ್ನು ಲೂಟಿ ಮಾಡುವವರು' ಎಂದು ಎಚ್‌ಡಿಕೆ ಶಿರಾ ಹೇಳಿದರೆ, ನಾನು ವೋಟ್‌ಗಾಗಿ ಕಣ್ಣೀರು ಹಾಕಿಲ್ಲ. ತಾಯಿಯನ್ನು ನೆನೆದು ಕಣ್ಣೀರು ಹಾಕಿದ್ದೇನೆ ಎಂದು ರಾರಾದಲ್ಲಿ ಮುನಿರತ್ನ ಹೇಳಿದ್ದಾರೆ.
ಶಿರಾದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತೆ ಅಂತ ರೇಣುಕಾಚಾರ್ಯ ಹೇಳಿದರೆ, ಜೆಡಿಎಸ್ ಗೆದ್ದೇ ಗೆಲ್ಲುತ್ತದೆ ಎಂದು ದಳವತಿ ರೇವಣ್ಣ ಹೇಳಿದ್ದಾರೆ.
ಶಿರಾದಲ್ಲಿಂದು ಸಿದ್ದರಾಮಯ್ಯ, ಎಚ್‌ಡಿಕೆ ಹಾಗೂ ವಿಜಯೇಂದ್ರ ಪ್ರಚಾರ ನಡೆಸಿದ್ದಾರೆ. ಆರ್‌ಆರ್ ನಗರದಲ್ಲಿ ಮುನಿರತ್ನ ಪರ ದರ್ಶನ್ ಪ್ರಚಾರ ನಡೆಸಿದ್ದಾರೆ.