ಪ್ರಾದೇಶಿಕ ಪಕ್ಷಗಳು ವಿರೋಧ ಪಕ್ಷವಾಗುವುದು ಒಳ್ಳೆಯ ಬೆಳವಣಿಗೆಯಲ್ಲಚುನಾವಣೆ ಸೋಲುಗಳಿಂದ ನಿರಾಶರಾಗಬೇಡಿಪ್ರಜಾಪ್ರಭುತ್ವಕ್ಕೆ ಬಲಿಷ್ಠ ಕಾಂಗ್ರೆಸ್ ಪಕ್ಷದ ಅಗತ್ಯವಿದೆ ಎಂದ ಕೇಂದ್ರ ಸಚಿವ
ಮುಂಬೈ (ಮಾ. 28): ಪ್ರಜಾಪ್ರಭುತ್ವಕ್ಕೆ (democracy) ಬಲಿಷ್ಠ ಕಾಂಗ್ರೆಸ್ ಪಕ್ಷ ( strong Congress party ) ಅಗತ್ಯ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Union Minister Nitin Gadkari) ಅವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯಿಸಿದ್ದು, ಸರಣಿ ಚುನಾವಣೆ ಸೋಲಿನಿಂದ (serial election losses) ಜರ್ಜರಿತವಾಗಿರುವ ಕಾಂಗ್ರೆಸ್ ಬಲವರ್ಧನೆಯಾಗಲಿ ಮತ್ತು ಅದರ ನಾಯಕರು ಹತಾಶೆಯಲ್ಲಿ.ಪಕ್ಷ ಬದಲಾಯಿಸದಿರಲಿ ಎಂಬುದು ನನ್ನ ಪ್ರಾಮಾಣಿಕ ಹಾರೈಕೆಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ನಿತಿನ್ ಗಡ್ಕರಿ ಅವರು ಕಾಂಗ್ರೆಸ್ ದುರ್ಬಲವಾಗಿದೆ (weakened Congress) ಎಂದಾದಲ್ಲಿ ಪ್ರಾದೇಶಿಕ ಪಕ್ಷಗಳು (regional parties) ವಿರೋಧದ ಪಕ್ಷಗಳ ಸ್ಥಾನವನ್ನು ತೆಗೆದುಕೊಂಡಿದೆ ಇದು "ಒಳ್ಳೆಯ ಲಕ್ಷಣವಲ್ಲ" (not a good sign) ಎಂದು ಹೇಳಿದರು.
"ಪ್ರಜಾಪ್ರಭುತ್ವ ಎನ್ನುವುದು ಎರಡು ಚಕ್ರಗಳ ಮೇಲೆ ನಡೆಯುತ್ತದೆ - ಆಡಳಿತ ಮತ್ತು ಪ್ರತಿಪಕ್ಷಗಳು. ಪ್ರಜಾಪ್ರಭುತ್ವಕ್ಕೆ ಪ್ರಬಲ ಪ್ರತಿಪಕ್ಷದ ಅವಶ್ಯಕತೆಯಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವು ಬಲಗೊಳ್ಳಬೇಕು ಎಂಬುದು ನನ್ನ ಪ್ರಾಮಾಣಿಕ ಆಶಯವಾಗಿದೆ. ಅಲ್ಲದೆ, ಕಾಂಗ್ರೆಸ್ ದುರ್ಬಲಗೊಂಡ ನಂತರ, ಅದರ ಸ್ಥಾನವನ್ನು ಪ್ರಾದೇಶಿಕ ಪಕ್ಷಗಳು ಆಕ್ರಮಿಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವದ ಬಲವರ್ಧನೆಗೆ ಪ್ರಾದೇಶಿಕ ಪಕ್ಷಗಳು ಒಳ್ಳೆಯದಲ್ಲ. ವಿರೋಧ ಪಕ್ಷಗಳು ಬಲವಾಗಿರಬೇಕು" ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವರು ಶನಿವಾರ ಖಾಸಗಿ ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದರು.
"ಜವಾಹರಲಾಲ್ ನೆಹರು ಒಂದು ಉದಾಹರಣೆ. ಅಟಲ್ ಬಿಹಾರಿ ವಾಜಪೇಯಿ ಅವರು ಲೋಕಸಭೆ ಚುನಾವಣೆಯಲ್ಲಿ ಸೋತಾಗ, ಜವಾಹರಲಾಲ್ ನೆಹರು ಅವರಿಗೆ ಇನ್ನೂ ಗೌರವವನ್ನು ನೀಡಿದರು. ಆದ್ದರಿಂದ, ಪ್ರಜಾಪ್ರಭುತ್ವದಲ್ಲಿ, ಪ್ರತಿಪಕ್ಷದ ಪಾತ್ರವು ಬಹಳ ಮುಖ್ಯವಾಗಿದೆ" ಎಂದು ಅವರು ಒತ್ತಿ ಹೇಳಿದರು. ಕಾಂಗ್ರೆಸ್ ನಾಯಕರು ಸೋಲಿನ ಬಗ್ಗೆ "ಧೈರ್ಯ ಕಳೆದುಕೊಳ್ಳಬೇಡಿ" ಮತ್ತು ಪಕ್ಷದೊಂದಿಗೆ ಇರಬೇಕೆಂದು ಅವರು ಒತ್ತಾಯಿಸಿದರು.
“ಕಾಂಗ್ರೆಸ್ ಗಟ್ಟಿಯಾಗಿ ಉಳಿಯಲಿ ಎಂದು ನನ್ನ ಹೃದಯದಿಂದ ಹಾರೈಸುತ್ತೇನೆ.ಕಾಂಗ್ರೆಸ್ ಸಿದ್ಧಾಂತವನ್ನು ಅನುಸರಿಸುವವರು ಪಕ್ಷದಲ್ಲಿ ಉಳಿಯಬೇಕು ಮತ್ತು ಅವರ ನಂಬಿಕೆಗೆ ಅಂಟಿಕೊಳ್ಳಬೇಕು, ಅವರು ಸೋಲಿನ ಬಗ್ಗೆ ಹತಾಶರಾಗದೆ ಕೆಲಸ ಮಾಡಬೇಕು. ಒಂದು ದಿನ ಖಂಡಿತಾ ಗೆಲುವು ಇದ್ದೇ ಇರುತ್ತದೆ" ಎಂದು ಕಾಂಗ್ರೆಸ್‌ನ ಇತ್ತೀಚಿನ ಚುನಾವಣಾ ಸೋಲುಗಳನ್ನು ಉಲ್ಲೇಖಿಸಿ ಗಡ್ಕರಿ ತಿಳಿಸಿದ್ದಾರೆ.
1 ವರ್ಷ ಮೊದಲೇ ಚುನಾವಣೆಗೆ ಬಿಜೆಪಿ ತಯಾರಿ: ಏಪ್ರಿಲ್‌ನಲ್ಲಿ ರಾಜ್ಯಕ್ಕೆ ಮೋದಿ, ಶಾ, ನಡ್ಡಾ!
ಸಂಸತ್ ಚುನಾವಣೆಯಲ್ಲಿ ಬಿಜೆಪಿ ಕೇವಲ ಎರಡು ಸ್ಥಾನಗಳನ್ನು ಗೆದ್ದ ದಿನದ ಸಮಯವನ್ನು ಉಲ್ಲೇಖಿಸಿ ಗಡ್ಕರಿ ಮಾತನಾಡಿದರು. ಆದರೆ ಪಕ್ಷದ ಕಾರ್ಯಕರ್ತರ ಪ್ರಯತ್ನದಿಂದ ಕಾಲ ಬದಲಾಯಿತು ಮತ್ತು ಅಟಲ್ ಬಿಹಾರಿ ವಾಜಪೇಯಿಯವರ ರೂಪದಲ್ಲಿ ನಮಗೆ ಪ್ರಧಾನಿ ಸಿಕ್ಕಿದರು. ಆದ್ದರಿಂದ ಹತಾಶೆಯ ಕ್ಷಣಗಳಲ್ಲಿ ಒಬ್ಬರ ಸಿದ್ಧಾಂತವನ್ನು ತ್ಯಜಿಸಬಾರದು ಎಂದು ಸಚಿವರು ಹೇಳಿದರು. ಗಡ್ಕರಿಯವರ ನಿಲುವು ಅವರ ಪಕ್ಷದ ಅನಧಿಕೃತ ಧ್ಯೇಯವಾಕ್ಯಕ್ಕೆ ವಿರುದ್ಧ ಎನ್ನುವುದನ್ನು ಇಲ್ಲಿ ಗಮನಿಸಬೇಕಾಗಿದೆ. "ಕಾಂಗ್ರೆಸ್-ಮುಕ್ತ್ ಭಾರತ (ಕಾಂಗ್ರೆಸ್ ಮುಕ್ತ ಭಾರತ)" - ಇದನ್ನು ಬಿಜೆಪಿಯ ಉನ್ನತ ನಾಯಕರು ಚುನಾವಣಾ ಸಮಾವೇಶಗಳು ಮತ್ತು ಇತರ ವೇದಿಕೆಗಳಲ್ಲಿ ಆಗಾಗ್ಗೆ ಹೇಳುತ್ತಿರುತ್ತಾರೆ.
ಆಯುರ್ವೇದ ವೈದ್ಯ ಪ್ರಮೋದ್ ಸಾವಂತ್ 2ನೇ ಬಾರಿಗೆ ಗೋವಾ ಮುಖ್ಯಮಂತ್ರಿ!
ಅಭಿವೃದ್ಧಿ ಕಾರ್ಯದಲ್ಲಿ ರಾಜಕಾರಣ(Politics) ಮಾಡಬಾರದು. ಅದು ಒಳ್ಳೆಯದಲ್ಲ. ಈ ತತ್ವವನ್ನು ಅನುಸರಿಸಿಕೊಂಡು ಇತರರಿಗೆ ಮಾದರಿಯಾಗುವಂತೆ ಕೆಲಸ ಮಾಡುತ್ತಿರುವವರು ಕೇಂದ್ರ ಸಚಿವ ನಿತಿನ್ ಗಡ್ಕರಿ(Nitin Gadkari) ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ, ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಎಂದು ಗಡ್ಕರಿ ಅವರನ್ನು ಮುಕ್ತಕಂಠದಿಂದ ಇತ್ತೀಚೆಗೆ ಶ್ಲಾಘಿಸಿದ್ದರು. ಗಡ್ಕರಿ ಅವರ ಬಗ್ಗೆ ನನಗೆ ವಿಶೇಷ ಗೌರವವಿದೆ. ಅವರು ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ. ಸಾರ್ವಜನಿಕರ ಹಿತಕ್ಕಾಗಿ ಏನು ಅವಶ್ಯವೋ ಆ ಕೆಲಸವನ್ನು ಮಾಡುವಲ್ಲಿ ಸದಾಕಾಲ ಮುಂದೆ ಇದ್ದವರು. ಹೀಗಾಗಿ ರಾಜಕೀಯವನ್ನು ಬದಿಗಿಟ್ಟು ಅವರ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದರು. ಮೊದಲ ಬಾರಿಗೆ ಗಡ್ಕರಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಹಿಂದೆ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಅಭಿವೃದ್ಧಿ ಕೆಲಸಗಳ ಕುರಿತು ಅವರೊಂದಿಗೆ ಪ್ರಸ್ತಾಪಿಸಿದರೆ ತಕ್ಷಣ ಒಪ್ಪಿಗೆ ಕೊಡುತ್ತಿದ್ದರು. ಒಮ್ಮೆ ಕಾಂಗ್ರೆಸ್(Congress) ಪಕ್ಷದ ಕಚೇರಿಗೆ ಬಂದು ಯೋಜನೆಯೊಂದರ ಆದೇಶದ ಪ್ರತಿ ಕೊಟ್ಟು ಹೋಗಿದ್ದರು. ಯಾವ ರಾಜ್ಯದವರು, ಯಾವ ಪಕ್ಷದವರು ಎಂದು ನೋಡದೆ ಕೆಲಸಗಳಿಗೆ ಮಾತ್ರ ಮಹತ್ವ ನೀಡುವವರು ಎಂದು ಗುಣಗಾನ ಮಾಡಿದ್ದರು.
