ಸಿಎಂ ಸಿದ್ದರಾಮಯ್ಯಗೆ ಬೆಂಬಲ ನೀಡುವವರಿಂದಲೇ ಖುರ್ಚಿ ಮೇಲೆ ಕಣ್ಣು: ಕೆ.ಎಸ್‌.ಈಶ್ವರಪ್ಪ

ಸಿಎಂ ಖುರ್ಚಿ ಮೇಲೆ ಬಹಷ್ಟು ಕಾಂಗ್ರೆಸ್‌ ನಾಯಕರ ಕಣ್ಣು ಹಾಕಿದ್ದಾರೆ. ಸಿಎಂ ಖುರ್ಚಿ ಮೇಲೆ ಸಿಎಂಗೆ ಬೆಂಬಲ ನೀಡುವವರದ್ದೇ ಹಂಬಲವಿದೆ. ಆ ಹಂಬಲದಿಂದಲೇ ರಾಜಕಾರಣ ನಡಿತಾ ಇದೆ. ಈಗ ಏನು ತೀರ್ಪು ಬರುತ್ತದೆ ಅಂತಾ ಎಲ್ಲರೂ ಕಾಯುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಹೇಳಿದರು.

Siddaramaiahs backers eye on CM chair Says KS Eshwarappa gvd

ಬಾಗಲಕೋಟೆ (ಸೆ.08): ಸಿಎಂ ಖುರ್ಚಿ ಮೇಲೆ ಬಹಷ್ಟು ಕಾಂಗ್ರೆಸ್‌ ನಾಯಕರ ಕಣ್ಣು ಹಾಕಿದ್ದಾರೆ. ಸಿಎಂ ಖುರ್ಚಿ ಮೇಲೆ ಸಿಎಂಗೆ ಬೆಂಬಲ ನೀಡುವವರದ್ದೇ ಹಂಬಲವಿದೆ. ಆ ಹಂಬಲದಿಂದಲೇ ರಾಜಕಾರಣ ನಡಿತಾ ಇದೆ. ಈಗ ಏನು ತೀರ್ಪು ಬರುತ್ತದೆ ಅಂತಾ ಎಲ್ಲರೂ ಕಾಯುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಬಾಗಲಕೋಟೆಯಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದ ತೀರ್ಪುನಲ್ಲಿ ಸಿಎಂ ಅವರದ್ದೇ ತಪ್ಪಿದೆ ಎಂದು ತೀರ್ಪು ಬಂದ್ರೆ, ಎಫ್‌ಐಆರ್ ಬಿದ್ರೆ, ಸಿಎಂ ರಾಜೀನಾಮೆ ಕೊಡಬಹುದು. ಕೊಡಬೇಕಾಗಬಹುದು. ಆ ಸಮಯದಲ್ಲಿ ಸಿಎಂ ಸಿದ್ದು ಅಪೇಕ್ಷೆ ಪಡೋ ವ್ಯಕ್ತಿ ಸಿಎಂ ಆಗ್ತಾರಾ? ಅಥವಾ ಸಿಎಂ ಬೆಂಬಲಿಗರು ಸಿಎಂ ಆಗಲಿಕ್ಕೆ ಡಿಕೆಶಿ, ಎಂಬಿಪಿ ಅವಕಾಶ ಕೊಡಲಿಲ್ಲ ಅಂದ್ರೆ, ಸರ್ಕಾರ ಎಷ್ಟರಮಟ್ಟಿಗೆ ಇರುತ್ತದೆ ಇರೊಲ್ವೊ ಎನ್ನುವುದು ತೀರ್ಪಿನ ಮೇಲೆ ತೀರ್ಮಾಣ ಆಗುತ್ತದೆ. ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಉಳಿಲಿಕ್ಕಿಲ್ಲ ಅಂತಾ ಕಾಂಗ್ರೆಸ್‌ನ ನಾಯಕರು ಅಂದುಕೊಂಡಿದ್ದಾರೆ ಎಂದರು.

ನನಗೂ ಸಿಎಂ ಆಗುವ ಆಸೆ ಇದೆ, ಆದರೆ ಈಗಲ್ಲ: ಸಚಿವ ಎಂ.ಬಿ.ಪಾಟೀಲ್

ವೈಯಕ್ತಿಕ ಟೀಕೆಗಳಿಂದ ಟಿವಿ ನೋಡುವುದಕ್ಕೆ ಬೇಸರ: ರಾಜ್ಯ ರಾಜಕೀಯದಲ್ಲಿ ಹಗರಣಗಳ ಆರೋಪ-ಪ್ರತ್ಯಾರೋಪದ ಕುರಿತು ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಕರ್ನಾಟಕದ ಈಗಿನ ರಾಜಕಾರಣ ಕೀಳುಮಟ್ಟಕ್ಕೆ ಇಳಿದಿದೆ. ಆಡಳಿತ ಪಕ್ಷದ ಭ್ರಷ್ಟಾಚಾರ ಬಗ್ಗೆ, ವಿರೋಧ ಪಕ್ಷ ಆರೋಪ ಮಾಡೋದು ತಪ್ಪಲ್ಲ, ಆದರೆ, ವಿರೋಧ ಪಕ್ಷದ ಆರೋಪವನ್ನು ಆಡಳಿತ ಪಕ್ಷದವ್ರು ತನಿಖೆ ಮಾಡಿಸುವ ಪದ್ಧತಿ ಇದೆ. ತಪ್ಪಿತಸ್ಥರಾಗಿದ್ರೆ ಶಿಕ್ಷೆ ಆಗಬೇಕೋ ಆಗುತ್ತೆ, ಆದ್ರೆ ಈಗ ಆಡಳಿತ ಪಕ್ಷ ಬಂದು ಒಂದೂವರೆ ವರ್ಷ ಆದ ಮೇಲೆ, ವಿರೋಧ ಪಕ್ಷಗಳು ವಿಶೇಷವಾಗಿ ಸಿದ್ದರಾಮಯ್ಯ ಸರ್ಕಾರದ ಮಂತ್ರಿಗಳು, ಸಿದ್ದರಾಮಯ್ಯ ಬಗ್ಗೆ ಆಪಾದನೆ ಮಾಡುತ್ತಿದಾರೆ. 

ಈ ವೇಳೆ ಪಾದಯಾತ್ರೆ, ಧರಣಿಯಂತಹ ಹೋರಾಟಗಳು ನಡೆಯುತ್ತವೆ. ತನಿಖೆ ಸಂದರ್ಭದಲ್ಲಿ ವೈಯಕ್ತಿಕ ಟೀಕೆ ಎಷ್ಟು ಕೀಳುಮಟ್ಟಕ್ಕೆ ಇಳಿದಿದೆ ಅಂದ್ರೆ, ಟಿವಿಗಳನ್ನು ನೋಡುವುದೇ ಬೇಸರ ಆಗ್ತಿದೆ. ರಾಜಕೀಯಕ್ಕೆ ಬರುವ ಯುವ ರಾಜಕಾರಣಿಗಳಲ್ಲಿ ರಾಜಕೀಯಕ್ಕೆ ಬರಬಾರದು ಎಂಬ ಮನಸ್ಥಿತಿ ನಿರ್ಮಾಣ ಆಗಿದೆ. ಕೀಳುಮಟ್ಟ ವೈಯಕ್ತಿಕ ಟೀಕೆಗಳನ್ನು ಎಂದೂ ನಾವು ಕಂಡಿರಲಿಲ್ಲ. ನನ್ನ ರಾಜಕೀಯ ಇತಿಹಾಸದಲ್ಲಿ ಇದನ್ನು ಕಂಡಿರಲಿಲ್ಲ, ವೈಯುಕ್ತಿಕ ಟೀಕೆ ಬಿಟ್ಟು, ತನಿಖೆ ಮಾಡಿ ಕ್ರಮ ಕೈಗೊಳ್ಳಲಿ ಎಂದು ಈಶ್ವರಪ್ಪ ತಿಳಿಸಿದರು.

ಮಸೀದಿ, ಚರ್ಚ ಆಹಾರ ಪರೀಕ್ಷೆ ಮಾಡಿದ್ದೀರಾ?: ಚೌತಿ ಗಣಪತಿಯ ಪ್ರಸಾದವನ್ನು ಪರೀಕ್ಷೆ ಮಾಡಿ ವಿತರಣೆ ಮಾಡಲಾಗುತ್ತಿದೆ ಎಂಬ ವಿಚಾರಕ್ಕೆ ಕೆಎಸ್ ಈಶ್ವರಪ್ಪ ಗರಂ ಆಗಿ ಪ್ರತಿಕ್ರಿಯೆ ನೀಡಿದರು. ರಾಜ್ಯ ಮಾತ್ರವಲ್ಲ ದೇಶದ ತುಂಬೆಲ್ಲ ಗಣಪತಿ ಕೂಡ್ರಿಸಲಾಗುತ್ತದೆ. ಗಣಪತಿ ಪ್ರಸಾದ ಕೊಡಬೇಕಾದರೆ ಆಹಾರ ಇಲಾಖೆ ಪರೀಕ್ಷೆ ಮಾಡಬೇಕಂತೆ, ಸಿದ್ದರಾಮಯ್ಯ ಹುಟ್ಟೋ ಮೊದಲಿನಿಂದಲೂ ದೇಶದಲ್ಲಿ ಗಣಪತಿ ಕೂಡ್ರಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಹುಟ್ಟೊಕ್ಕಿಂತ ಮುಂಚೆ ದೇಶದಲ್ಲಿ ಗಣಪತಿ ಇಡಲಾಗುತ್ತಿದೆ. ಈಗ ಸರ್ಕಾರ ಹೊಸ ವ್ಯವಸ್ಥೆ ಮಾಡಿಕೂತಿದೆ. 

ಸಿಎಂ ಆಗುವ ಆಸೆ ಇದೆ, ಸದ್ಯ ರೇಸ್‌ನಲ್ಲಿ ಇಲ್ಲ: ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟನೆ

ಪ್ರಸಾದ ಪರೀಕ್ಷೆ ಮಾಡಿ ನೀಡುವ ಕಾನೂನು ತಂದ್ರೆ, ಹಿಂದೂ ಧರ್ಮದ ಬಗ್ಗೆ ಇಷ್ಟು ಕೀಳುಮಟ್ಟದ ರಾಜಕಾರಣ ಕಾಂಗ್ರೆಸ್‌ನವರು ಯಾಕೆ ಮಾಡುತ್ತಿದ್ದಾರೆ. ನೀವು ಮಸೀದಿ, ಚರ್ಚು ಗಳಲ್ಲಿ ತಿನ್ನುವ ಪದಾರ್ಥಗಳ ಪರೀಕ್ಷೆ ಮಾಡಿದ್ದೀರಾ? ಸಿಎಂಗೆ ಯಾಕೆ ಹಿಂದೂಗಳ ಬಗ್ಗೆ ನಿಕೃಷ್ಟ ಭಾವನೆ, ಹಿಂದೂ ದೇವರುಗಳಿಗೆ ಅಪಮಾನ ಮಾಡಬೇಡಿ, ಕಾನೂನಿಗೆ ಅಪಮಾನ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios