ಬೆಂಗಳೂರು, (ಜುಲೈ.18): ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಆಶಾ ಕಾರ್ಯಕರ್ತೆಯರ ಪ್ರಾಣವನ್ನು ಲೆಕ್ಕಿಸದೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಅನೇಕರಿಗೆ ಕೊರೋನಾ ಸೋಂಕು ತಗುಲಿದೆ. ಕೊರೋನಾ ವಾರಿಯರ್ಸ್ ಅಂತ ಕರೆದಿದ್ದೀರ, ಪ್ರಧಾನಿ ಕೂಡ ಚಪ್ಪಾಳೆ ತಟ್ಟಿ ಹೂಮಳೆಗರೆದರು. ಇದಕ್ಕೆ ಜನರು ಸಹಮತ ವ್ಯಕ್ತಪಡಿಸಿದರು.

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಸಾಥ್‌

ಆದರೆ, ಇವರಿಗೆ ನೀಡುತ್ತಿರುವ ಮಾಸಿಕ ವೇತನ 4,000 ರೂ. ಕೆಲವರಿಗೆ 6,000 ರೂ. ನೀಡಲಾಗುತ್ತಿದೆ ಸರ್ಕಾರ ಬಜೆಟ್​ನಲ್ಲಿ 8/9 ಸಾವಿರ ಘೋಷಿಸಿತ್ತು. ಆದರೆ, ಇದುವರೆಗೆ 1 ರೂಪಾಯಿ ಕೂಡ ಹೆಚ್ಚಿಸಿಲ್ಲ, ಅವರ ಬೇಡಿಕೆಗಳು ತುಂಬಾ ಸರಳವಾಗಿವೆ. ಮಾಸಿಕ 12 ಸಾವಿರ ಗೌರವಧನ ನಿಗದಿ ಮಾಡಿ, ಕೋವಿಡ್ ಹಿನ್ನೆಲೆ ಅಗತ್ಯ ರಕ್ಷಣಾ ಸಾಮಗ್ರಿಗಳಿಗೆ ಒತ್ತಾಯಿಸಿದ್ದು, ಈ ಎರಡು ಬೇಡಿಕೆಗಳನ್ನ ಸರ್ಕಾರ ಈಡೇರಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ಏಪ್ರಿಲ್ ತಿಂಗಳಿನಲ್ಲಿ ಸರ್ಕಾರ ಒಂದು ಬಾರಿ ವಿಶೇಷ ಪ್ಯಾಕೇಜ್ ಎಂದು ರಾಜ್ಯದ ಸಹಕಾರ ಇಲಾಖೆಯಿಂದ ರೂ. 3,000ಗಳನ್ನು ನೀಡುವುದಾಗಿ ಘೋಷಣೆ ಮಾಡಿತ್ತು . ಇದು ಶೇ .50 % ರಷ್ಟು ಅಶಾ ಕಾರ್ಯಕರ್ತೆರಿಗೂ ತಲುಪಿಲ್ಲ . ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಕೂಡ ಸರಳವಾಗಿದೆ .

ಬೇಡಿಕೆಗಳು
1. ಮಾಸಿಕ ರೂ .12000 ಗೌರವಧನ ಖಾತರಿಪಡಿಸಬೇಕು . 
2. ಕೋವಿಡ್ -19 ವಿರುದ್ದ ಹೋರಾಟಕ್ಕೆ ಅಗತ್ಯವಿರುವಷ್ಟು ಸಂರಕ್ಷಣಾ ಸಾಮಗ್ರಿಗಳನ್ನು ನೀಡಬೇಕು 
3. ಕೋವಿಡ್ -19 ಗೆ ಸೋಂಕಿಗೆ ಒಳಗಾದ ಅಶಾಕಾರ್ಯಕರ್ತೆರಿಗೆ ಪರಿಹಾರ, ಸಂಪೂರ್ಣ ಚಿಕಿತ್ಸೆ ನೀಡಬೇಕು.
 ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಅತ್ಯಂತ ಸಣ್ಣ ಮಟ್ಟದವಾಗಿದೆ . ಆದ್ದರಿಂದ ಸರ್ಕಾರ ಸರಳವಾದ ಈ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.