ಕಾಂಗ್ರೆಸ್‌ನ್ನ ನಿರ್ಮಾ ಸರ್ಫ್ ಹಾಕಿ ತೊಳೆದ ಸಿದ್ದರಾಮಯ್ಯ: ಮನೆಗೆ ಹೋಗೋದಷ್ಟೇ ಬಾಕಿ

ಸಿದ್ದರಾಮಯ್ಯ ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ ಅನ್ನು ನಿರ್ಮಾ ಸರ್ಫ್ ಹಾಕಿ ತೊಳೆದು ಬಿಟ್ಟಿದ್ದಾರೆ. ವರುಣಾದಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಪರಿಣಾಮ ಎದುರಿಸ್ತಾರೆ ಎಂದು ಕಂದಾಯ ಸಚಿವ ಆರ್. ಅಶೋಕ್‌ ಟಾಂಗ್‌ ನೀಡಿದ್ದಾರೆ.

Siddaramaiah washed away Congress Nirma Surf Just waiting to go home sat

ರಾಮನಗರ (ಏ.23):  ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ ಅನ್ನು ನಿರ್ಮಾ ಸರ್ಫ್ ಹಾಕಿ ತೊಳೆದು ಬಿಟ್ಟಿದ್ದಾರೆ. ವರುಣಾದಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಪರಿಣಾಮ ಎದುರಿಸ್ತಾರೆ ಎಂದು ಕಂದಾಯ ಸಚಿವ ಆರ್. ಅಶೋಕ್‌ ಟಾಂಗ್‌ ನೀಡಿದ್ದಾರೆ.

ಕನಕಪುರ ವಿಧಾನಸಭಾ ಕ್ಷೇತ್ರದ ಟಿ.ಬೇಕುಪ್ಪೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯವನ್ನು ಕೈಗೊಂಡಿರುವ ಕಂದಾಯ ಸಚಿವ ಆರ್. ಅಶೋಕ್‌ ಮಾಧ್ಯಮಗಳೊಂದಿಗೆ ಮಾತನಾಡಿದರು. ಈಗಾಗಲೇ ಕಾಂಗ್ರೆಸ್‌ ಅನ್ನು ನಿರ್ಮಾ ಸರ್ಫ್ ಹಾಕಿ ತೊಳೆದು ಬಿಟ್ಟಿದ್ದಾರೆ. ಇದರ ಪರಿಣಾಮವನ್ನು ವರುಣಾ ಸೇರಿ ಎಲ್ಲೆಡೆ ಎದುರಿಸುತ್ತಾರೆ. ಜೊತೆಗೆ, ಲಿಂಗಾಯತರು ಭ್ರಷ್ಟಾಚಾರಿಗಳು ಎಂದು ಹೇಳುವ ಮೂಲಕ ದೊಡ್ಡ ಅವಮಾನವನ್ನು ಮಾಡಿದ್ದಾರೆ. ಹೀಗಾಗಿ, ಲಿಂಗಾಯತರನ್ನ ಸಿದ್ದರಾಮಯ್ಯ ಬಹಿರಂಗವಾಗಿ ಕ್ಷಮೆ ಕೇಳಬೇಕು. ಆದರೆ, ಈಗ ನಾನು ಹೇಳಿಲ್ಲ, ಹೇಳಿಕೆ ತಿರುಚಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ಸಿದ್ದು ಈ ಬಾರಿ ಸೋಲ್ತಾರೆ, ಕಾಂಗ್ರೆಸ್‌ಗೆ ವಿರೋಧ ಪಕ್ಷದ ಸ್ಥಾನನೂ ಬರಲ್ಲ: ಈಶ್ವರಪ್ಪ 

ದೇಶದಲ್ಲಿ ಇಂದು ಬಸವಜಯಂತಿ ಆಚರಣೆ ಮಾಡ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಲಿಂಗಾಯತ ಸಿಎಂ ಗಳೆಲ್ಲ ಕರಪ್ಟ್ ಅಂತ ಹೇಳಿರೋದು ಖಂಡನೀಯ. ಇದು ಲಿಂಗಾಯತ ಸಮುದಾಯದ ಎದೆಗೆ ಚೂರಿ ಹಾಕುವ ಕೆಲಸವಾಗಿದೆ. ಹಿಂದೆ ವೀರೇಂದ್ರ ಪಾಟೀಲ್ ಗೆ ಅವಮಾನ ಮಾಡಿದ್ದರು. ಬಳಿಕ ಲಿಂಗಾಯತ ಧರ್ಮ ಒಡೆಯುವ ಕೆಲಸ ಮಾಡಿದರು. ಈಗ ಲಿಂಗಾಯತ ಸಮುದಾಯದ ವಿರುದ್ಧ ಅವಹೇಳನ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ತಲೆಯ ಮೇಲೆ ಚಪ್ಪಡಿ ಎಳೆದಿದ್ದಾರೆ ಎಂದು ಹೇಳಿದರು.

ಇನ್ನೂ 100 ವರ್ಷ ಲಿಂಗಾಯತ ಸಮುದಾಯ ಕಾಂಗ್ರೆಸ್ ಕಡೆ ತಿರುಗಿಯೂ ನೋಡಲ್ಲ. ಇದನ್ನ ಸಿದ್ದರಾಮಯ್ಯ ಬೇಕು ಅಂತಲೇ ಮಾಡಿದ್ದಾರೆ. ರಾಹುಲ್ ಗಾಂಧಿ ಮೋದಿ ಬಗ್ಗೆ ಮಾತನಾಡಿ ಶಿಕ್ಷೆ ಅನುಭವಿಸಿದ್ದಾರೆ. ಅವರ ಲೋಕಸಭೆಯ ಸದಸ್ಯತ್ವ ಕಳೆದುಕೊಂಡಿದ್ದಾರೆ. ಈಗಲೂ ಅದೇರೀತಿ ಆಗುತ್ತದೆ. ಸಿದ್ದರಾಮಯ್ಯ ಈ ಬಾರಿ ಮನೆಗೆ ಹೋಗುತ್ತಾರೆ. ಅದರ ಬದಲು ರಾಜಕೀಯ ನಿವೃತ್ತಿ ಪಡೆಯಲಿ. ಸಿದ್ದರಾಮಯ್ಯ ವಿರುದ್ಧ ಸಚಿವ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜನರೇ ಗೆಲ್ಲಿಸ್ತಾರೆಂದರೆ ಹೇಗೆ ಮತದಾನ ಕೇಳಬೇಕಲ್ವಾ? : ಇಲ್ಲಿ ನಾಮಪತ್ರ ಸಲ್ಲಿಸೋದಷ್ಟೇ ಜನ ಗೆಲ್ಲಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್‌ ಹೇಳುತ್ತಾರೆ. ಆದರೆ, ಗೌರವಕ್ಕಾದರೂ ಮತದಾನ ಕೊಡುವಾಗ ಕೇಳಬೇಕಲ್ವಾ.? ನೇತ್ರದಾನ, ಆನ್ನದಾನ, ವಿದ್ಯಾದಾನದ ರೀತಿಯಲ್ಲಿಯೇ ಪ್ರಜಾಪ್ರಭುತ್ವ ದೇಶದಲ್ಲಿ ಮತದಾನವೂ ಒಂದು ಮಹತ್ವದ ದಾನವಾಗಿದೆ. ಅದು ಮತದಾರರು ಕೊಡುವ ಭಿಕ್ಷೆಯಾಗಿದೆ. ಅದನ್ನ ಬೇಡಿ ಪಡೆಯಬೇಕು. ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಪ್ರಚಾರ ಮಾಡೋದು, ಮಾಡದೇ ಇರೋದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

ಕನಕಪುರದಲ್ಲಿ ನಕಲಿ ಮತದಾನದ ಹಾವಳಿ ಹೆಚ್ಚು: ಡಿಕೆಶಿ ವಿರುದ್ಧ ಆರ್. ಅಶೋಕ್‌

ನಕಲಿ ವೋಟಿಂಗ್‌ ಸಂಖ್ಯೆ ಅಧಿಕ: ಕನಕಪುರದಲ್ಲಿ ನಕಲಿ ಮತದಾನದ (Proxy voting) ಫ್ರಾಕ್ಸಿ ಓಟಿಂಗ್‌ನ ಆತಂಕ ಇದೆ. ಚುನಾವಣಾ ಸಮಯದಲ್ಲಿ ಯಾವಾಗ ಬೇಕೆಂದರೆ ಆಗ ಕರೆಂಟ್ ತೆಗೆಸ್ತಾರೆ. ಇಲ್ಲಿ ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ ಎಂದು ಈಗಾಗಲೇ ಜೆಡಿಎಎಸ್ ಮುಖಂಡರು ಮಾಹಿತಿ ನೀಡಿದ್ದಾರೆ. ನಾವು ಪ್ರಬಲ ಪೈಪೋಟಿ ಕೊಟ್ಟಾಗ ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಎಂತಲೂ ಹೇಳುತ್ತಿದ್ದಾರೆ. ಆದರೆ ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರ ಇದೆ. ಇಲ್ಲಿನ ಭಯಮುಕ್ತವಾಗಿ ಜನರು ಮತದಾನ ಮಾಡಬಹುದು ಎಂದು ಮನವಿ ಮಾಡಿದರು.

ಏಪ್ರಿಲ್‌ 13 ರಿಂದ ಆರಂಭವಾಗಿದ್ದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್‌ 21ರವರೆಗೆ ಪೂರ್ಣಗೊಂಡಿದೆ. ನಾಮಪತ್ರ ಹಿಂಪಡೆಯಲು ನಾಳೆ ಏಪ್ರಿಲ್‌ 24 ಕೊನೆಯ ದಿನವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

Latest Videos
Follow Us:
Download App:
  • android
  • ios