*   ಅಹಲ್ಯಾಬಾಯಿ ಹೋಳ್ಕರ್‌ ಜನ್ಮದಿನಾಚರಣೆಯಲ್ಲಿ ವಿಪಕ್ಷ ನಾಯಕ ಆಕ್ರೋಶ*  ‘ಇಂದಿರಾ ಕ್ಯಾಂಟೀನ್‌’ ಯೋಜನೆಗಳಿಗೆ ಬಿಜೆಪಿ ಆದ್ಯತೆ ನೀಡುತ್ತಿಲ್ಲ*  ಸ್ಕಾಲರ್‌ಶಿಪ್‌ ವಿತರಿಸುವ ‘ವಿದ್ಯಾಸಿರಿ’ ಯೋಜನೆಯನ್ನೇ ನಿಲ್ಲಿಸಿದ್ದಾರೆ 

ಬೆಂಗಳೂರು(ಜೂ.01): ಕಾಂಗ್ರೆಸ್‌ ಜಾರಿಗೆ ತಂದ ಅನ್ನಭಾಗ್ಯ, ಮಾತೃಪೂರ್ಣ, ಇಂದಿರಾ ಕ್ಯಾಂಟೀನ್‌ ಯೋಜನೆಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕುಂಠಿತವಾಗಿದೆ. ಹಿಂದುಳಿದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡುವ ವಿದ್ಯಾಸಿರಿ ಯೋಜನೆಯನ್ನೂ ನಿಲ್ಲಿಸುವ ಮೂಲಕ ಜನದ್ರೋಹಿ ಆಡಳಿತ ನಡೆಸಿದ್ದಾರೆ ಎಂದು ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಹಲ್ಯಾ ಬಾಯಿ ಹೋಳ್ಕರ್‌ ಮಹಿಳಾ ಪತ್ತಿನ ಸಹಕಾರ ಸಂಘದಿಂದ ಮಂಗಳವಾರ ರವೀಂದ್ರ ಕಲಾ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಅಹಲ್ಯಾ ಬಾಯಿ ಹೋಳ್ಕರ್‌ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Karnataka Politics: ಮುಸ್ಲಿಮರ ರಾಜಕೀಯ ನರಮೇಧಕ್ಕೆ ಸಿದ್ದು ರಣತಂತ್ರ: ಎಚ್‌ಡಿಕೆ

ಬಡವರಿಗೆ ತಲಾ 7 ಕೆ.ಜಿ. ಉಚಿತ ಅಕ್ಕಿ ನೀಡುವ ‘ಅನ್ನಭಾಗ್ಯ ಯೋಜನೆ’, ಜನಿಸುವ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಎಂದು ಗರ್ಭಿಣಿಯರಿಗೆ ಮೊಟ್ಟೆ, ಸಿಹಿ ನೀಡುವ ‘ಮಾತೃ ಪೂರ್ಣ’, ಬಡವರಿಗೆ ಕಡಿಮೆ ದರದಲ್ಲಿ ಊಟ-ತಿಂಡಿ ನೀಡುವ ‘ಇಂದಿರಾ ಕ್ಯಾಂಟೀನ್‌’ ಯೋಜನೆಗಳಿಗೆ ಬಿಜೆಪಿ ಆದ್ಯತೆ ನೀಡುತ್ತಿಲ್ಲ. ಹಾಸ್ಟೆಲ್‌ನಲ್ಲಿದ್ದು ಅಭ್ಯಾಸ ಮಾಡುವ ಹಿಂದುಳಿದ ಜಾತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ 15 ಸಾವಿರ ರು. ಸ್ಕಾಲರ್‌ಶಿಪ್‌ ವಿತರಿಸುವ ‘ವಿದ್ಯಾಸಿರಿ’ ಯೋಜನೆಯನ್ನೇ ನಿಲ್ಲಿಸಿದ್ದಾರೆ ಎಂದು ಟೀಕಿಸಿದರು.