ರಾಜ್ಯಸಭೆ: ಜೆಡಿಎಸ್‌ನ ಆತ್ಮಸಾಕ್ಷಿ ಮತ ಕಾಂಗ್ರೆಸ್‌ಗೆ ಬರುತ್ತೆ: ಸಿದ್ದು

*   ಪ್ರತಿಬಾರಿಯೂ ಜೆಡಿಎಸ್‌ ಯಾಕೆ ಗೆಲ್ಲಬೇಕು? ಜೆಡಿಎಸ್‌ ಅಭ್ಯರ್ಥಿ ಹಿಂಪಡೆಯಲಿ: ಸಿದ್ದು ಆಗ್ರಹ

*   ನಾವು ಅನೇಕ ಬಾರಿ ಜೆಡಿಎಸ್‌ಗೆ ನೆರವಾಗಿಲ್ವಾ?

*  ಯಾವುದು ಸತ್ಯ, ಯಾವುದು ಸುಳ್ಳು?:

Siddaramaiah slams on JDS grg

ಮೈಸೂರು(ಜೂ.07): ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕೆಲ ಆತ್ಮಸಾಕ್ಷಿಯ ಮತಗಳು ಕಾಂಗ್ರೆಸ್‌ ಬರುತ್ತವೆ. ನಮ್ಮ ಗೆಲುವಿಗೆ ಎಷ್ಟುಮತ ಬೇಕೋ ಅಷ್ಟುಆತ್ಮಸಾಕ್ಷಿಯ ಮತಗಳು ಜೆಡಿಎಸ್‌, ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದೇ ಬರುತ್ತದೆ. ಜೆಡಿಎಸ್‌ಗೆ ಈಗಲೂ ಬಿಜೆಪಿ ಗೆಲ್ಲಬಾರದು ಎಂಬ ಇಚ್ಛೆ ಇದ್ದರೆ ಅವರ ಅಭ್ಯರ್ಥಿಯನ್ನು ಕಣದಿಂದ ನಿವೃತ್ತಿ ಮಾಡಿಸಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಅನೇಕ ಬಾರಿ ಜೆಡಿಎಸ್‌ಗೆ ನೆರವಾಗಿಲ್ವಾ? ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವಾಗ ನಾವು ಬೆಂಬಲಿಸಲಿಲ್ವಾ? 37 ಸ್ಥಾನ ಇದ್ದ ಜೆಡಿಎಸ್‌ಗೆ ನಾವು ಮುಖ್ಯಮಂತ್ರಿ ಸ್ಥಾನ ಕೊಡಲಿಲ್ಲವಾ? ಹೀಗೆ ಹಲವು ಬಾರಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಾವು ಜೆಡಿಎಸ್‌ಗೆ ಸಹಕಾರ ಕೊಟ್ಟಿದ್ದೇವೆ. ಈಗ ಅಲ್ಪಸಂಖ್ಯಾತರೊಬ್ಬರು ಗೆಲ್ಲಲು ಜೆಡಿಎಸ್‌ ತನ್ನ ಅಭ್ಯರ್ಥಿಯ ನಿವೃತ್ತಿ ಘೋಷಿಸಲಿ. ಪ್ರತಿ ಬಾರಿಯೂ ಜೆಡಿಎಸ್‌ ಯಾಕೆ ಗೆಲ್ಲಬೇಕು ಎಂದು ಪ್ರಶ್ನಿಸಿದರು.

Yoga Day in Mysuru: ಜೂ.21ಕ್ಕೆ ಮೈಸೂರು ಅರಮನೆ ಮುಂದೆ ಮೋದಿ ಯೋಗ

ಜೆಡಿಎಸ್‌ನಿಂದ ದಲಿತ, ಖರ್ಗೆ ಅಸ್ತ್ರ ಬಳಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ದಲಿತರಿಗೆ ನಾವು ಏನ್‌ ಮಾಡಿದ್ದೇವೆ ಅಂತ ಎಲ್ಲರಿಗೂ ಗೊತ್ತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಹೆಚ್ಚು ಆದ್ಯತೆ ಕೊಟ್ಟಿದ್ದು ದಲಿತರಿಗೆ. ಕಾಂಗ್ರೆಸ್‌ನಲ್ಲಿ ದಲಿತರಿಗೆ ಹೆಚ್ಚು ಸ್ಥಾನಮಾನ ನೀಡಲಾಗಿದೆ. ಹೀಗಾಗಿ, ಜೆಡಿಎಸ್‌ನವರಿಂದ ಹೇಳಿಸಿಕೊಳ್ಳಬೇಕೆನ್ರೀ... ಎಂದು ಕಿಡಿಕಾರಿದರು.

ಯಾವುದು ಸತ್ಯ, ಯಾವುದು ಸುಳ್ಳು?:

ಸರ್ಕಾರ ಬೀಳಲಿ ಅಂತಾ ಫಾರಿನ್‌ಗೆ ಹೋದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆಗ ಸಿದ್ದರಾಮಯ್ಯ ಶಾಸಕರನ್ನು ಕಳುಹಿಸಿದರು ಅಂದರು. ಈಗ ಈ ರೀತಿ ಹೇಳುತ್ತಿದ್ದಾರೆ. ಯಾವುದು ಸತ್ಯ? ಯಾವುದು ಸುಳ್ಳು? ಅವರ ರೀತಿ ಸುಳ್ಳು ಹೇಳಲು ನಮಗೆ ಬರುವುದಿಲ್ಲ. ಟಾರ್ಚರ್‌ ವಿಚಾರ ಅಂದು ಏಕೆ ಹೇಳಲಿಲ್ಲ? ವಿಧಾನಸಭೆಯಲ್ಲಿ ಉತ್ತರ ನೀಡಿದ್ದಾರೆ, ಆಗ ಟಾರ್ಚರ್‌ ಬಗ್ಗೆ ಮಾತನಾಡಿಲ್ಲ. ಈಗ ಹೇಳಿದರೆ ನಂಬಬೇಕಾ? ಎಂದರು.

ಇಬ್ರಾಹಿಂ ವಿರುದ್ಧ ಕಿಡಿ: ರಾಜ್ಯಸಭೆ ಚುನಾವಣೆಯಲ್ಲಿ ಯಡಿಯೂರಪ್ಪ-ಸಿದ್ದರಾಮಯ್ಯ ಒಳಒಪ್ಪಂದ ಎಂಬ ಸಿ.ಎಂ. ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಬ್ರಾಹಿಂಗೆ ಮಾನ-ಮರ್ಯಾದೆ ಇಲ್ಲ. ಜೆಡಿಎಸ್‌ನಲ್ಲಿ ಇಬ್ರಾಹಿಂ ಕ್ಯಾಪ್ಟಿವ್‌ ಪ್ರೆಸಿಡೆಂಟ್‌(ಸ್ವಾತಂತ್ರ್ಯ ಇಲ್ಲದ) ಇದ್ದಂತೆ. ಕೂತ್ಕೋ ಅಂದ್ರೆ ಕೂತ್ಕೋಬೇಕು, ನಿಂತ್ಕೋ ಅಂದ್ರೆ ನಿಂತ್ಕೋಬೇಕು ಎಂದು ಲೇವಡಿ ಮಾಡಿದರು. ಎಂಎಲ್ಸಿ ಮಾಡ್ತೀವಿ ಅಂತ ಕರ್ಕೊಂಡು ಹೋದ್ರು, ಎಂಎಲ್ಸಿ ಮಾಡಿದ್ದಾರಾ? ಏನೋ ಒಂದು ಹುದ್ದೆ ಕೊಟ್ಟಿದ್ದಾರೆ ಅಂತ ಬಾಯಿಗೆ ಬಂದಂತೆ ಇಬ್ರಾಹಿಂ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Latest Videos
Follow Us:
Download App:
  • android
  • ios