Asianet Suvarna News Asianet Suvarna News

'ಬಿಜೆಪಿಗೆ ಬೇಡವಾದ ಕೂಸಾದ ಬಿಎಸ್‌ವೈ, ಕಿತ್ತು ಹಾಕಲು ಹೈಕಮಾಂಡ್ ಸಿದ್ಧತೆ'

ನಾಯಕತ್ವ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ
ಬಿಎಸ್‌ವೈ ಬಿಜೆಪಿಗೆ ಬೇಡವಾದ ಕೂಸಾಗಿದೆ ಎಂದ ಸಿದ್ದು
ನಾಯಕತ್ವ ಬದಲಾವಣೆ  ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ

Siddaramaiah Reacts On Yediyurappa Leadership Change in Karnataka BJP rbj
Author
Bengaluru, First Published Jun 8, 2021, 6:43 PM IST

ಬೆಂಗಳೂರು, (ಜೂನ್.08): ಕೊರೋನಾ ಸಂಕಷ್ಟದ ಮಧ್ಯೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿದ್ದು, ಬಿಜೆಪಿ ರಾಜಕೀಯ ವಿದ್ಯಾಮನಗಳು ಬಿರುಸುಗೊಂಡಿವೆ. 

ಕೆಲವರು ಸಿಎಂ ಪರ ಬ್ಯಾಟಿಂಗ್ ಮಾಡುತ್ತಿದ್ರೆ, ಇನ್ನೂ ಕೆಲವರು ಪರೋಕ್ಷವಾಗಿ ಬಿಎಸ್‌ವೈ ವಿರುದ್ಧ ಧ್ವನಿಗೂಡಿಸುತ್ತಿದ್ದಾರೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.

ನಾಯಕತ್ವ ಬದಲಾವಣೆ: ಹೈಕಮಾಂಡ್‌ನಿಂದ ಬಂತು ಖಡಕ್ ಸಂದೇಶ

ಬಿಜೆಪಿಗೆ ಯಡಿಯೂರಪ್ಪ ಬೇಡವಾದ ಕೂಸಾಗಿದ್ದಾರೆ. ಅವರನ್ನು ಕಿತ್ತು ಹಾಕಲು ಹೈಕಮಾಂಡ್ ಸಿದ್ಧವಾಗಿದೆ. ರಾಜ್ಯ ಬಿಜೆಪಿ ನಾಯಕರು ಕೂಡ ಕೊಡವಿಕೊಳ್ಳಲು ಸಿದ್ದವಿದ್ದಾರೆ. ಯಡಿಯೂರಪ್ಪ ನಿರ್ಗಮನದ ನಂತರ ಪಕ್ಷದ ಸ್ಥಿತಿ ಏನಾಗಬಹುದು ಎಂಬ ಚಿಂತೆ ಅವರಿಗೆ. ಪರ್ಯಾಯ ನಾಯಕರು ಆ ಪಕ್ಷದಲ್ಲಿ ಇಲ್ಲ. ನಾಯಕತ್ವ ದಿವಾಳಿಯಾಗಿದೆ. ಅದಕ್ಕೆ ಒದ್ದಾಡುತ್ತಿದ್ದಾರೆ ಎಂದು ಸಿದ್ದು ಟ್ವೀಟ್ ಮಾಡಿದ್ದಾರೆ.

 ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಬಗೆಬಗೆಯ ಕಸರತ್ತು ನಡೆಸುತ್ತಿದ್ದಾರೆ. ಒಂದೆಡೆ ಹೈಕಮಾಂಡ್ ಹೇಳಿದ ಕೂಡಲೇ ರಾಜೀನಾಮೆ ಕೊಡುತ್ತೇನೆ ಎನ್ನುತ್ತಾರೆ. ಇನ್ನೊಂದು ಕಡೆ ತಮ್ಮ ರಾಜಕೀಯ ಕಾರ್ಯದರ್ಶಿ ಮೂಲಕ ಶಾಸಕರ ಸಹಿ ಸಂಗ್ರಹಿಸುತ್ತಿದ್ದಾರೆ. ಅವರಿಗೆ ರಾಜ್ಯದ ಚಿಂತೆಯಿಲ್ಲ, ಕುರ್ಚಿ ಉಳಿಸಿಕೊಳ್ಳುವುದೇ ಚಿಂತೆಯಾಗಿದೆ ಎಂದು ಟೀಕಿಸಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ಈವರೆಗೆ ಸರಿಯಾಗಿ 1000 ಕೋಟಿ ರೂ. ಪರಿಹಾರ ನೀಡಿಲ್ಲ. ಕೇವಲ ತೋರಿಕೆಗಾಗಿ ಕೆಲವರಿಗೆ ಪರಿಹಾರ ನೀಡಲಾಗಿದೆ. ಎಲ್ಲಾ ಬಿಪಿಎಲ್ ಕಾರ್ಡ್ ದಾರರಿಗೆ ತಲಾ 10 ಕೆಜಿ ಅಕ್ಕಿ ಮತ್ತು 10 ಸಾವಿರ ರೂಪಾಯಿ ಪರಿಹಾರ ನೀಡಿದ್ದರೆ ನಿಜವಾದ ಪರಿಹಾರವಾಗುತ್ತಿತ್ತು. ರಾಜ್ಯದ ಜನರ ಹಿತ ಕಾಪಾಡಲು ವಿಫಲವಾಗಿರುವ ಯಡಿಯೂರಪ್ಪ ಅವರು ಒಬ್ಬ ಅಸಮರ್ಥ, ವಿಫಲ ಮುಖ್ಯಮಂತ್ರಿಯಾಗಿದ್ದಾರೆ. ಅವರನ್ನು ಬದಲಾವಣೆ ಮಾಡುವುದರಿಂದ ಪಾಪ ತೊಳೆದುಕೊಳ್ಳಬಹುದು ಎಂದು ಬಿಜೆಪಿ ಹೈಕಮಾಂಡ್ ತಿಳಿದುಕೊಂಡಿದೆ. ಆದರೆ ಪೂರ್ತಿ ಬಸ್ ಕೆಟ್ಟು ಹೋಗಿರುವ ಕಾರಣ ಡ್ರೈವರ್ ಬದಲಾಯಿಸಿದರೆ ಏನೂ ಪ್ರಯೋಜನವಾಗುವುದಿಲ್ಲ ಎಂದು ಸಿದ್ಧರಾಮಯ್ಯ ಟ್ವಿಟ್ಟರ್‌ ಕಿಡಿಕಾರಿದ್ದಾರೆ.
 

Follow Us:
Download App:
  • android
  • ios