ಸಿದ್ದರಾಮೋತ್ಸವಕ್ಕೆ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಗೈರು, ಕಾರಣ ಕೊಟ್ಟ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಅಮೃತೋತ್ಸವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಭಾವಹಿಸುತ್ತಿಲ್ಲ. ಇದಕ್ಕೆ ಸಿದ್ದು ಕಾರಣವನ್ನು ಕೊಟ್ಟಿದ್ದಾರೆ.
ಹುಬ್ಬಳ್ಳಿ, (ಆಗಸ್ಟ್.02): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಅಮೃತ ಮಹೋತ್ಸವಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ದಾವಣಗೆರೆಯತ್ತ ಹೊರಟಿದ್ದಾರೆ.
ಇನ್ನು ಈ ಸಿದ್ದರಾಮಯ್ಯನವರ ಅಮೃತೋತ್ಸವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ನಾಯಕಾರದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುನಿಯಪ್ಪ ಪಾಲ್ಗೊಳ್ಳುತ್ತಿಲ್ಲ. ಮೊದಲೇ ಈ ಸಿದ್ದರಾಮೋತ್ಸವಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಖರ್ಗೆ ಹಾಗೂ ಮುನಿಯಪ್ಪ ಗೈರು ಹಲವು ಚರ್ಚೆಗ ಕಾರಣವಾಗಿದೆ. ಇನ್ನು ಇಬ್ಬರು ಹಿರಿಯ ನಾಯಕರ ಗೈರಿಗೆ ಸ್ವತಃ ಸಿದ್ದರಾಮಯ್ಯನವರೇ ಕಾರಣ ಕೊಟ್ಟಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿ ಇಂದು(ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ,ಕೆ.ಎಚ್.ಮುನಿಯಪ್ಪ ಬರುತ್ತಿಲ್ಲ. ರಾಹುಲ್ ಗಾಂಧಿ ಜೊತೆ ಖರ್ಗೆ ಬರಬೇಕಿತ್ತು. ಆದ್ರೆ, ಹೆರಾಲ್ಡ್ ಪತ್ರಿಕೆ ದಾಳಿ ಕಾರಣಕ್ಕೆ ದೆಹಲಿಯಲ್ಲಿ ಬ್ಯೂಸಿ ಇದ್ದಾರೆ. ಇನ್ನು ಮುನಿಯಪ್ಪ ಹುಷಾರಿಲ್ಲ, ಅರಿಗೆ ಡೆಂಗ್ಯೂ ಜ್ವರ ಬಂದಿದೆ ಕರೆ ಮಾಡಿ ತಿಳಿಸಿದ್ದಾರೆ ಎಂದು ಹೇಳಿದರು. ಜನ ಚುನಾವಣೆಗಾಗಿ ಕಾಯುತ್ತಿದ್ದಾರೆ. ನಾಳೆಯೇ ಚುನಾವಣೆ ನಡೆದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜಕೀಯ ವ್ಯವಹಾರ ಸಮಿತಿ ಸಭೆ ನಡೆಯಲಿದೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆಯಾಗಲಿದೆ ಎಂದರು.
ಡಿ.ಕೆ ಶಿವಕುಮಾರ್ ರೆಗ್ಯೂಲರ್ ಬೆಲ್ ಸಿಕ್ಕಿದ್ದು ನಿರೀಕ್ಷಿತ. ಇದು ಸಿದ್ದರಾಮೋತ್ಸವ ಅಲ್ಲ, ಇದು ಅಮೃತ ಮಹೋತ್ಸವ. 75 ವರ್ಷ ತುಂಬಿದಾಗ ಏನಂತ ಕರೆಯೋದು? ನಮ್ಮ ಸ್ನೇಹಿತರು, ಹಿತೈಷಿಗಳು ಸೇರಿಕೊಂಡು ಆಚರಿಸುತ್ತಿದ್ದಾರೆ. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ- ಎಂಬುದು ಮಾಧ್ಯಮಗಳ ಸೃಷ್ಟಿ.ಅಭಿಮಾನಿಗಳ ಸೃಷ್ಟಿ ಅಲ್ಬಂ ಸಾಂಗ್ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮದು ಯಾವುದೇ ಬಣ ಇಲ್ಲ, ನಮ್ಮದು ಒಂದೇ ಬಣ, ಅದು ಸೋನಿಯಾ ಗಾಂಧಿ ರಾಹುಲ್ ಗಾಂಧಿ ಬಣ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮೋತ್ಸವ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ
ಮುನಿಸಿಕೊಂಡಿರುವ ಮುನಿಯಪ್ಪ
ಹೌದು....ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಒಬ್ಬರಾಗಿರುವ ಮುನಿಯಪ್ಪ ಅವರು ಸಿದ್ದರಾಮಯ್ಯನವರ ಮೇಲೆ ಮುನಿಸಿಕೊಂಡಿದ್ದಾರೆ. ಮುನಿಯಪ್ಪ ವಿರೋಧಿಗಳನ್ನ ಇತ್ತೀಚೆಗೆ ರಮೇಶ್ ಕುಮಾರ್ ಅವರು ಕಾಂಗ್ರೆಸ್‌ಗೆ ಕರೆತಂದಿದ್ದು, ಅವರನ್ನ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಸೇರಿಸಿಕೊಂಡಿದ್ದಾರೆ. ಇದರಿಂದ ಮುನಿಯಪ್ಪ ಅವರು ಸಿದ್ದರಾಮಯ್ಯನವರ ವಿರುದ್ಧ ಅಸಮಾಧಾನ ವ್ಯಕ್ತಪಸಿದ್ದರು. ಈ ಕಾರಣಕ್ಕೆ ಅವರು ಈ ಸಿದ್ದರಾಮೋತ್ಸದ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ.
ಜೆಡಿಎಸ್‌ನತ್ತ ಮುನಿಯಪ್ಪ ಚಿತ್ತ
ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಕೈ ಕೊಟ್ಟು ಜೆಡಿಎಸ್ ಸೇರುತ್ತಾರೆ ಎಂಬ ಮಾತುಗಳು ರಾಜಕೀಯ ಅಂಗಳದಲ್ಲಿ ಜೋರಾಗಿ ಕೇಳಿ ಬರುತ್ತಿವೆ. ಜೆಡಿಎಸ್ ಸೇರ್ಪಡೆ ಬಗ್ಗೆ ದೇವೇಗೌಡರ ಜೊತೆ ನಡೆದಿದೆಯಾ ಮಾತುಕತೆ ಎಂಬ ಅನುಮಾನ ಶುರುವಾಗಿದೆ. ಸತತ ಏಳು ಬಾರಿ ಕಾಂಗ್ರೆಸ್‌ನಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಮುನಿಯಪ್ಪ ಅವರು ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.