Asianet Suvarna News Asianet Suvarna News

ಸಿದ್ದರಾಮಯ್ಯ ಈ ದೇಶದ ಬೆಸ್ಟ್‌ ಸಿಎಂ: ಶಾಸಕ ಬಸವರಾಜ ರಾಯರೆಡ್ಡಿ

ರಾಜ್ಯದಲ್ಲಿ ಮೂರಲ್ಲ ಆರು ಡಿಸಿಎಂಗಳನ್ನ ಮಾಡಲೂ ನಾನು ಸಲಹೆ ನೀಡುತ್ತೇನೆ. ಹಾಗೆ 6 ಡಿಸಿಎಂ ಸ್ಥಾನ ಸೃಷ್ಟಿ ಮಾಡಿ ಒಂದು ‘ಪ್ರಿನ್ಸಿಪಲ್ ಡಿಸಿಎಂ’ ಸ್ಥಾನ ಸೃಷ್ಟಿ ಮಾಡಿ ಡಿ.ಕೆ.ಶಿವಕುಮಾರ್‌ ಅವರಿಗೆ ನೀಡಲಿ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ವ್ಯಂಗ್ಯವಾಡಿದರು. 

Siddaramaiah is the best CM of this country Says MLA Basavaraj Rayareddy gvd
Author
First Published Sep 23, 2023, 11:44 AM IST

ನವದೆಹಲಿ (ಸೆ.23): ರಾಜ್ಯದಲ್ಲಿ ಮೂರಲ್ಲ ಆರು ಡಿಸಿಎಂಗಳನ್ನ ಮಾಡಲೂ ನಾನು ಸಲಹೆ ನೀಡುತ್ತೇನೆ. ಹಾಗೆ 6 ಡಿಸಿಎಂ ಸ್ಥಾನ ಸೃಷ್ಟಿ ಮಾಡಿ ಒಂದು ‘ಪ್ರಿನ್ಸಿಪಲ್ ಡಿಸಿಎಂ’ ಸ್ಥಾನ ಸೃಷ್ಟಿ ಮಾಡಿ ಡಿ.ಕೆ.ಶಿವಕುಮಾರ್‌ ಅವರಿಗೆ ನೀಡಲಿ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ವ್ಯಂಗ್ಯವಾಡಿದರು. ಅವರು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೂರು ಡಿಸಿಎಂ ಸ್ಥಾನ ಸೃಷ್ಠಿಸುವ ಸಚಿವ ರಾಜಣ್ಣನವರ ಹೇಳಿಕೆ ಹಿಂದೆ ತಮಗೂ ಡಿಸಿಎಂ ಸ್ಥಾನ ಒಲಿಯಬಹುದು ಎಂಬ ಆಶಯವಿದ್ದಿರಬಹುದು. ಎಸ್‌ಟಿಯಿಂದ ರಾಜಣ್ಣ, ಎಸ್ಸಿ ಯಿಂದ ಡಾ.ಪರಮೇಶ್ವರ್ ಡಿಸಿಎಂ ಆಗಬಹುದು ಎಂಬ ಉದ್ದಿಶ್ಯ ರಾಜಣ್ಣರಿಗಿದೆ ಎಂದರು. 

ಹಾಗೆ ಜಾತಿವಾರು ಡಿಸಿಎಂ ಮಾಡುವುದಾದರೆ SC, ST, ಲಿಂಗಾಯತ, ಅಲ್ಪಸಂಖ್ಯಾತರಿಗೆ ತಲಾ ಒಂದೊಂದರಂತೆ ಡಿಸಿಎಂ ಸ್ಥಾನ ನೀಡಲಿ, ಇಲ್ಲವೇ ಪ್ರಾಂತ್ಯವಾರು ಡಿಸಿಎಂಗಳನ್ನು ಸೃಷ್ಟಿ ಮಾಡಲಿ. ಈ ಬಗ್ಗೆ ಸಿಎಂ ಮತ್ತು ಹೈಕಮಾಂಡ್‌ಗೆ ನಾನು ಮನವಿ ಮಾಡುತ್ತೇನೆ ಎಂದೂ ಹೇಳಿದರು. ಇನ್ನು, ಕಾಂಗ್ರೆಸ್‌ನಲ್ಲಿ ಅಸಮಾಧಾನ ಇದೆಯಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿ, ಹಾಗೆ ಅಸಮಾಧಾನ ಇದ್ರೆ ಏನು ಮಾಡುವುದಕ್ಕಾಗುತ್ತದೆ? ಬೇರೆ ಬೇರೆ ಕಾರಣಗಳಿಗೆ ನನಗೂ ಸಚಿವ ಸ್ಥಾನ ಕೈತಪ್ಪಿತು, ನಾನೂ ಎಂಟು ಬಾರಿ ಆಯ್ಕೆಯಾದವನು ಎಂದವರು ಹೇಳಿದರು.

ಬಿಜೆಪಿ ಜತೆ ಮೈತ್ರಿಗೆ ವಿರೋಧ: ಜೆಡಿಎಸ್‌ಗೆ ಮುಸ್ಲಿಂ ನಾಯಕರ ರಾಜೀನಾಮೆ

ಸಿದ್ದು ಬೆಸ್ಟ್‌: ಸಿದ್ದರಾಮಯ್ಯ ಈ ದೇಶದ ಬೆಸ್ಟ್‌ ಸಿಎಂ. ಆದರೆ ಆರ್ಥಿಕ ಸಲಹೆಗಾರರಾಗಿ ಒಳ್ಳೆಯವರನ್ನು ನೇಮಿಸಿಕೊಳ್ಳುವುದು ಉತ್ತಮ ಎಂದು ಇದೇ ವೇಳೆ ಸಲಹೆಯಿತ್ತರು.

ಸನಾತನ ಧರ್ಮದ ಬಗ್ಗೆ ಕೆಲವರಿಗೆ ಸರಿಯಾಗಿ ಗೊತ್ತಿಲ್ಲ: ನಾತನ ಧರ್ಮದ ಬಗ್ಗೆ ಯಾರಿಗೂ ಸರಿಯಾಗಿ ಗೊತ್ತಿಲ್ಲ. ಏನೇನೋ ಮಾತಾಡ್ತಾರೆ. ನಾನು ಎಲ್ಲ ಧರ್ಮಗಳ ಬಗ್ಗೆ ಸಾಕಷ್ಟು ಓದಿಕೊಂಡಿದ್ದೇನೆ. ಯಾರಾದರೂ ಬಂದು ಆಯಾ ಧರ್ಮಗಳ ಬಗ್ಗೆ ಕೇಳಲಿ, ನಿರರ್ಗಳವಾಗಿ ಮಾತನಾಡುವೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು. ಪಟ್ಟಣದ ಬಯಲು ರಂಗಮಂದಿರದಲ್ಲಿ ತಾಲೂಕಾಡಳಿತ, ಯಲಬುರ್ಗಾ ಮತ್ತು ಕುಕನೂರ ಕುಳುವ ಮಹಾಸಂಘಗಳ ತಾಲೂಕು ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸನಾತನ ಧರ್ಮವೆಂದರೆ ಪುರಾತನ, ಶಾಶ್ವತ ಧರ್ಮವೆಂದರ್ಥ. ಇದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಮಾತನಾಡುತ್ತಿರುವುದು ಸರಿಯಲ್ಲ. ಯಾರೋ ಒಬ್ಬ ರಾಜಕಾರಣಿ ಸನಾತನ ಧರ್ಮ ಕುರಿತು ಮಾತನಾಡಿದ ಎನ್ನುವ ವಿಷಯವನ್ನೇ ದೊಡ್ಡದಾಗಿ ಎಲ್ಲೆಡೆ ವ್ಯಾಪಕವಾಗಿ ಅರ್ಥವಿಲ್ಲದ ರೀತಿಯಲ್ಲಿ ಚರ್ಚೆ ನಡೆಸುತ್ತಿರುವುದು ಸರಿಯಲ್ಲ. ನಾನು ಯಾವ ಜಾತಿ, ಧರ್ಮಕ್ಕೆ ಸೇರಿದವನಲ್ಲ; ಮನುಷ್ಯ ಜಾತಿಗೆ ಸೇರಿದ್ದೇನೆ ಎಂದರು. ಕೆಲವರು ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ದೇಶ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಮಾರಕವಾಗಲಿದೆ. 

ಕಾವೇರಿ ವಿಚಾರದಲ್ಲಿ ಸರ್ಕಾರದ ವಿರುದ್ಧ ಜನತಾ ದಂಗೆ ಖಚಿತ: ಮಾಜಿ ಸಿಎಂ ಬೊಮ್ಮಾಯಿ

ಇಂತಹ ಜಾತಿ ವ್ಯವಸ್ಥೆ ನಿಮೂರ್ಲನೆಗೆ ಎಲ್ಲರೂ ಮುಂದಾಗಬೇಕು. ಯಾವ ಬಸವಾದಿ ಶರಣರು ಜಾತಿ ಧರ್ಮದ ಹೆಸರಿನಿಂದ ಬಂದವರಲ್ಲ. ಅವರು ತಮ್ಮ ಕಾಯಕದ ಮೂಲಕ ಸಮಾಜದ ಮೌಢ್ಯ ನಿರ್ಮೂಲನೆ ಮಾಡಿ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಬಸವಾದಿ ಶರಣರು ಜಾತ್ಯಾತೀತ ಸಮಾಜ ಕಟ್ಟಬೇಕೆನ್ನುವ ಕನಸು ಹೊಂದಿದ್ದರು. ಆದರೆ ಎಲ್ಲ ವರ್ಗದವರು ಜಾತಿ, ಧರ್ಮದ ಹೆಸರಿನಲ್ಲಿ ಶರಣರ ಜಯಂತಿಗಳನ್ನು ಮಾಡುತ್ತಿರುವುದು ಸರಿಯಲ್ಲ. ಜಾತಿ ವ್ಯವಸ್ಥೆ ನಿಮೂರ್ಲನೆಗೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಹೇಳಿದರು.

Follow Us:
Download App:
  • android
  • ios