Asianet Suvarna News Asianet Suvarna News

Karnataka Politics: ಸಿದ್ದರಾಮಯ್ಯ ಎರಡು ತಲೆ ಹಾವು ಇದ್ದಂತೆ: ಸಚಿವ ಶ್ರೀರಾಮಲು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ತಲೆ ಹಾವು ಇದ್ದಂತೆ. ಯಾವ ಸಂದರ್ಭದಲ್ಲಾದರೂ ಹೇಗಾದರೂ ಮಾತನಾಡುತ್ತಾರೆ. ಸಿದ್ದರಾಮಯ್ಯ ನಮ್ಮ ನಾಯಕರನ್ನು ನಾಯಿಗೆ ಹೋಲಿಸಿದ್ದಾರೆ. ಅದಕ್ಕೆ ಅವರನ್ನು ಎರಡು ತಲೆ ಹಾವು ಎಂದು ಕರೆಯಬೇಕಾಗುತ್ತೆ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.

Siddaramaiah Is 2 Tongue Snake Slams Sriramulu In Koppal District gvd
Author
Bangalore, First Published Jun 10, 2022, 3:00 AM IST | Last Updated Jun 10, 2022, 3:00 AM IST

ಗಂಗಾವತಿ (ಜೂ.10): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ತಲೆ ಹಾವು ಇದ್ದಂತೆ. ಯಾವ ಸಂದರ್ಭದಲ್ಲಾದರೂ ಹೇಗಾದರೂ ಮಾತನಾಡುತ್ತಾರೆ. ಸಿದ್ದರಾಮಯ್ಯ ನಮ್ಮ ನಾಯಕರನ್ನು ನಾಯಿಗೆ ಹೋಲಿಸಿದ್ದಾರೆ. ಅದಕ್ಕೆ ಅವರನ್ನು ಎರಡು ತಲೆ ಹಾವು ಎಂದು ಕರೆಯಬೇಕಾಗುತ್ತೆ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.

ಸಿದ್ದರಾಮಯ್ಯ ಅವರದು ಸೀಳು ನಾಲಿಗೆ ಇರುವುದರಿಂದ ಏನಾದರೂ ಮಾತನಾಡುತ್ತಾರೆ. ಅವರ ಮಾತಿಗೆ ಅವರ ಪಕ್ಷದಲ್ಲೇ ಕಿಮ್ಮತ್ತು ಕೊಡುವುದಿಲ್ಲ. ಹೀಗಿರುವಾಗ ಉಳಿದ ಪಕ್ಷದವರು ಏಕೆ ಕಿಮ್ಮತ್ತು ಕೊಡುತ್ತಾರೆ ? ಎಂದು ಪ್ರಶ್ನಿಸಿದರು. ಮೋದಿ ಮತ್ತು ಆರ್‌ಎಸ್‌ಎಸ್‌ ವಿರುದ್ಧ ಮಾತನಾಡಿದರೆ ತಾವು ದೊಡ್ಡವರಾಗುತ್ತೇವೆಂದು ಸಿದ್ದರಾಮಯ್ಯ ಭಾವಿಸಿದ್ದಾರೆ. ಅವರ ಪಾರ್ಟಿಯಲ್ಲಿ ಚೆಸ್‌ ಆಡುತ್ತಿದ್ದಾರೆ. ಡಿಕೆಶಿಯನ್ನು ಹೇಗೆ ಮುಗಿಸಬೇಕು ಎಂದು ಚೆಸ್‌ ಆಟಕ್ಕೆ ನಿಂತಿದ್ದಾರೆ. ಸಿದ್ದರಾಮಯ್ಯ ಭಸ್ಮಾಸುರ. ಬರುವ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಕ್ಷೇತ್ರ ಸಿಗುತ್ತಿಲ್ಲ ಇದರಿಂದ ಹತಾಶೆಯಾಗಿದ್ದಾರೆ ಎಂದರು.

Koppal; ಭಾರೀ ವಿವಾದದಲ್ಲಿ ಐತಿಹಾಸಿಕ ದೇಗುಲ, ಶಾಸ್ತ್ರೋಕ್ತವಾಗಿ ವಿಗ್ರಹ ಪುನರ್ ಸ್ಥಾಪನೆ

ಸಿದ್ದರಾಮಯ್ಯ ತಲೆ ಕೆಟ್ಟು ಮಾತನಾಡುತ್ತಿದ್ದಾರೆ: ಬಿಜೆಪಿ ನಾಯಕರ ಬಗ್ಗೆ ಸಿದ್ದರಾಮಯ್ಯ ಸೀಳು ನಾಯಿ ಅಂತಾ ಹೇಳಿರುವುದು ಅವರಿಗೆ ಶೋಭೆ ತರುವುದಿಲ್ಲ. ಮಾಜಿ ಮುಖ್ಯಮಂತ್ರಿಯಾಗಿ ಈ ರೀತಿ ಮಾತನಾಡುತ್ತಿರುವುದು ಸರಿ ಅಲ್ಲ. ಸಿದ್ದರಾಮಯ್ಯ ತಲೆಕೆಟ್ಟು ಆ ತರಹ ಮಾತನಾಡುತ್ತಿದ್ದಾರೆ ಎಂದು ಶಾಸಕ ಸೋಮಶೇಖರ ರೆಡ್ಡಿ ಕಿಡಿಕಾರಿದರು. ತಾಲೂಕಿನ ಪಂಪಾ ಸರೋವರದಲ್ಲಿ ವಿಜಯಲಕ್ಷ್ಮೀ ದೇವಸ್ಥಾನದ ವಿಗ್ರಹ ಪುನರ್‌ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾತನಾಡಿ, ಬಿಜೆಪಿ ನಾಯಕರನ್ನು ಸಿದ್ದರಾಮಯ್ಯ ನಾಯಿಗೆ ಹೋಲಿಸಿದ್ದಾರೆ. ನಾಯಿ ವಿಶ್ವಾಸದ ಸಂಕೇತ. ದೇವರ ಸ್ವರೂಪವಾಗಿದೆ ಎಂದರು.

ಆರ್‌ಎಸ್‌ಎಸ್‌ ಬಗ್ಗೆ ಸಿದ್ದರಾಮಯ್ಯ ಮಾತನಾಡುವುದು ತಪ್ಪು. ಅವರಿಗೆ ಒಳ್ಳೆಯ ಬುದ್ಧಿ ಕೊಡಲಿ. ಸಿದ್ದರಾಮಯ್ಯ ಏಕಾಂಗಿಯಾಗಿದ್ದು ಹತಾಶೆಯಿಂದ ಮಾತನಾಡುತ್ತಿದ್ದಾರೆ. ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರವೇ ಇಲ್ಲದಂತಾಗಿದೆ ಎಂದು ಲೇವಡಿ ಮಾಡಿದರು. ಸಚಿವ ಬಿ. ಶ್ರೀರಾಮುಲು ಅವರು ದೇವಾಲಯಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ. ಇದು ಎಲ್ಲರೂ ಮೆಚ್ಚುವಂಥ ಕೆಲಸ ಎಂದು ಶಾಸಕ ಸೋಮಶೇಖರರೆಡ್ಡಿ ಶ್ಲಾಘಿಸಿದರು.

ರಾಜಕೀಯ ತಿರುವು ಪಡೆದ, Koppalaದ ದೇವಸ್ಥಾನ ಜಿರ್ಣೋದ್ಧಾರ ವಿವಾದ

ಅಂಜನಾದ್ರಿಯೇ ಹನುಮನ ಜನ್ಮಸ್ಥಳ: ಅಂಜನಾದ್ರಿಯೇ ಹನುಮನ ಜನಿಸಿದ ಸ್ಥಳವಾಗಿದೆ. ಇದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದರು. ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿರುವ ಕೆಲ ಸ್ಥಳದಲ್ಲಿ ಹನುಮ ಜನಿಸಿದ ಸ್ಥಳ ಎಂದು ಘೋಷಣೆ ಮಾಡಿದ್ದಾರೆ. ಇದು ಸುಳ್ಳು. ಶೀಘ್ರದಲ್ಲಿ ಮುಖ್ಯಮಂತ್ರಿಗಳು ಸಭೆ ಕರೆದು ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ ಎಂದು ಘೋಷಣೆ ಮಾಡುತ್ತಾರೆ ಎಂದರು.

Latest Videos
Follow Us:
Download App:
  • android
  • ios