ಇಳಕಲ್ಲ[ಫೆ.23]: ನಾನು ಹಿಂದು ಅಲ್ಲ, ನಾನು ವೀರಶೈವ. ದೊಡ್ಡನಗೌಡ ನೀನು ನಿಜವಾದ ಹಿಂದುವಾದರೆ ನಿನ್ನ ಪುರಾವೆಗಳನ್ನು ತೋರಿಸು, ಅಂದಿನಿಂದ ನಾನು ಮಾತನಾಡುವದನ್ನೇ ಬಿಟ್ಟು ಬಿಡುತ್ತೇನೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸವಾಲು ಹಾಕಿದರು.

ವಿಜಯಪುರದಲ್ಲಿ ಫೆ.24 ರಂದು ಅವಳಿ ಜಿಲ್ಲೆಗಳ ಸಿಎಎ ಹಾಗೂ ಎನ್‌ಆರ್‌ಪಿ ವಿರೋಧಿ ಸಮಾವೇಶದಲ್ಲಿ ಭಾಗವಹಿಸಲು ಹೊರಟ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಶಾಸಕ ದೊಡ್ಡನಗೌಡ ಪಾಟೀಲ್‌ ನನ್ನ ಬಗ್ಗೆ ಇಲ್ಲದನ್ನು ಮಾತನಾಡಿದ್ದಾರೆ.

ಆದಷ್ಟುಶೀಘ್ರದಲ್ಲಿಯೆ ಅದಕ್ಕೆ ಉತ್ತರ ಕೊಡುತ್ತೇನೆ. ಮೋದಿ ಸರ್ಕಾರ ದೇಶವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಅದಕ್ಕೆ ನಾನು ಸಿಎಎ ಹಾಗೂ ಎನ್‌ಆರ್‌ಪಿ ವಿರೋಧಿಸುತ್ತೇನೆ. ಭಾರತಿಯ ಜನತಾ ಪಕ್ಷ ದೇಶದಲ್ಲಿ ಅಶಾಂತಿಯನ್ನು ಮಾಡುತ್ತಿದೆ. ಇದು ಜನವಿರೋಧಿ ನೀತಿಯಾಗಿದೆ. ಕಾರಣ ಇದನ್ನು ಪ್ರತಿಯೊಬ್ಬ ಭಾರತೀಯನು ವಿರೋಧಿಸಬೇಕು ಎಂದರು.