ಬೆಂಗಳೂರು (ನ.26):  ಸಂಪುಟದಲ್ಲಿ ನಾನು ಏಕೈಕ ಮಹಿಳಾ ಸಚಿವೆ. ಜವಾಬ್ದಾರಿಯನ್ನು ಪ್ರಮಾಣಿಕವಾಗಿ  ನಿಭಾಯಿಸುತ್ತಿದ್ದೇನೆ ಎಂದು ಶಶಿಕಲಾ ಜೊಲ್ಲೆ ಹೇಳಿದರು. 

ಪ್ರತೀ ಬಾರಿ ಸಂಪುಟ ವಿಸ್ತರಣೆ ಮಾಡುವ ವೇಳೆಯೂ ನನ್ನನ್ನು ಕೈ ಬಿಡಲಾಗುತ್ತದೆ ಎಂದು ಸುದ್ದಿಯಾಗುತ್ತದೆ. ಆದರೆ ನನ್ನ ಬಳಿ ಯಾವ ವಿಚಾರವೂ ಪ್ರಸ್ತಾವಾಗಿಲ್ಲ ಎಂದು ಅವರು ಹೇಳಿದರು. 

'ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವುದು ಖಚಿತ' ..

ಯಾವ ನಾಯಕರು ನನ್ನನ್ನು ಕೈ ಬಿಡುವ ಬಗ್ಗೆ ಹೇಳಿಲ್ಲ. ಆದ್ದರಿಂದ ಈ ಸಾಧ್ಯತೆ ಕಡಿಮೆ ಎಂದು ಶಶಿಕಲಾ ಜೊಲ್ಲೆ ಹೇಳಿದರು. 

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಚರ್ಚೆ ಜೋರಾಗಿದ್ದು ಹಲವು ನಾಯಕರು ವಿವಿಧ ನಾಯಕರು ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ.