ಸಚಿವ ಶರಣ ಪ್ರಕಾಶರಿಗೆ ಜಿಲ್ಲಾ ಉಸ್ತುವಾರಿ ಬೇಡ, ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯರಿಗೆ ನೀಡಿ: ಕರವೇ
ಜಿಲ್ಲೆ ಉಸ್ತುವಾರಿ ಸಚಿವ ಸ್ಥಾನದಿಂದ ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಿ ಹಿಂದುಳಿದ ಜಿಲ್ಲೆ ಅಭಿವೃದ್ಧಿ ಹಿತದೃಷ್ಠಿಯಿಂದ ಸ್ಥಳೀಯರಿಗೆ ನೀಡಬೇಕೆಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಹಾಯಕ ಆಯುಕ್ತ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಲಿಂಗಸುಗೂರು (ಜೂ.16) ಜಿಲ್ಲೆ ಉಸ್ತುವಾರಿ ಸಚಿವ ಸ್ಥಾನದಿಂದ ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಿ ಹಿಂದುಳಿದ ಜಿಲ್ಲೆ ಅಭಿವೃದ್ಧಿ ಹಿತದೃಷ್ಠಿಯಿಂದ ಸ್ಥಳೀಯರಿಗೆ ನೀಡಬೇಕೆಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಹಾಯಕ ಆಯುಕ್ತ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಆಡಳಿತ ನಡೆಸಿದ ಸರ್ಕಾರಗಳ ಮಲತಾಯಿ ಧೋರಣೆಯಿಂದ ರಾಯಚೂರು ಜಿಲ್ಲೆ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದೆ. ಇದಕ್ಕೆ ಇದುವರೆಗೂ ಆಡಳಿತ ನಡೆಸಿದ ಪಕ್ಷಗಳ ನಿರ್ಲಕ್ಷ್ಯ ಧೋರಣೆ ಕಾರಣವಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅಧಿಕಾರದ ಸಂದರ್ಭದಲ್ಲಿ ಸ್ಥಳೀಯರಿಗೆ ಸಚಿವ ಸ್ಥಾನ ನೀಡದೆ ವಂಚನೆ ಮಾಡಿವೆ. ಯಾರೋ ಬಂದು ಉಸ್ತುವಾರಿ ಆಡಳಿತ ಮಾಡಿದ್ದರಿಂದ ಸರ್ಕಾರದ ಯೋಜನೆಗಳು ಜಿಲ್ಲೆಗೆ ದಕ್ಕದೆ ಇಲ್ಲಿಯ ಜನರು ಸಂಕಷ್ಟದ ಬದುಕು ದೂಡುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.
ರಾಯಚೂರು: ಸಚಿವ ಶರಣ ಪ್ರಕಾಶ ಪಾಟೀಲ್ ವಿರುದ್ಧ 'ಗೋ ಬ್ಯಾಕ್' ಪ್ರತಿಭಟನೆ
ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಡಾ.ಶರಣ ಪ್ರಕಾಶ ಪಾಟೀಲ್ ರವರನನ್ನು ನೇಮಕ ಮಾಡುವ ಮೂಲಕ ಸ್ಥಳೀಯರನ್ನು ಅಧಿಕಾರದಿಂದ ದೂರ ಇಟ್ಟಿದೆ. ಇದು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ತೊಡಕಾಗಲಿದೆ. ಕೂಡಲೆ ಉಸ್ತುವಾರಿ ಸಚಿವ ಸ್ಥಾನದಿಂದ ಶರಣ ಪ್ರಕಾಶ ಪಾಟೀಲ್‌ರನ್ನು ತೆಗೆದು ಹಾಕಿ ಸ್ಥಳೀಯರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡೇಕೆಂದು ಆಗ್ರಹಿಸಿದರು.
ಈ ವೇಳೆ ನಮ್ಮ ಕರ್ನಾಟಕ ರಕ್ಷಣಾ ವೇಧಿಕೆ ಆಧ್ಯಕ್ಷ ತಿಮ್ಮಾರೆಡ್ಡಿ ಮುನ್ನೂರು, ರಮೇಶ ಗುತ್ತೆದಾರ, ರವಿ ಕುಮಾರ ಗೊರೇಬಾಳ, ಬಸರಾಜ ಕಕ್ಕೇರಿ, ಅಶೋಕ ಗಸ್ತಿ, ಮೌನೇಶ ರಡ್ಡಿ, ಪ್ರವೀಣ ಕುಮಾರ, ಅಭಿಷೇಕ, ನವೀನ ಕುಮಾರ, ಶಿವುಕುಮಾರ ಸಜ್ಜನ್, ಆಕಾಶ ಕುಮಾರ ಸೇರಿದಂತೆ ಇದ್ದರು.
Karnataka Politics: ಕಲಬುರಗಿ ಸಂಸದ ಜಾಧವ್ ವಿರುದ್ಧ ಶರಣಪ್ರಕಾಶ ವಾಗ್ದಾಳಿ