Belagavi Politics: ಯಮಕನಮರಡಿ ಬಿಟ್ಟರೆ ಸವದತ್ತಿಯಿಂದ ಸ್ಪರ್ಧೆ: ಸತೀಶ ಜಾರಕಿಹೊಳಿ

ಎಲ್ಲ ಪಕ್ಷಗಳ ಟಿಕೆಟ್‌ ಅಂತಿಮವಾದ ಮೇಲೆ ಕೊನೆಯ ಸರ್ವೆ ಮಾಡಿ ನಮ್ಮ ಅಭ್ಯರ್ಥಿ ಫೈನಲ್‌: ಸತೀಶ ಜಾರಕಿಹೊಳಿ

Savadatti Constituency is to be Select After Yamakanmardi Says Satish Jarkiholi grg

ಗೋಕಾಕ(ಸೆ.02): ನಾನು ಯಮಕನಮರಡಿ ಕ್ಷೇತ್ರ ಬಿಟ್ಟರೇ ನಂತರ ಆಯ್ಕೆ ಮಾಡಿಕೊಳ್ಳುವುದೇ ಸವದತ್ತಿ ಕ್ಷೇತ್ರ. ಯಾಕೆಂದರೆ ನಮ್ಮ ಪಕ್ಷ ಗೆಲ್ಲಬೇಕು ಎಂದು ಸವದತ್ತಿಯಲ್ಲಿ ನಾವು ಸಂಘಟನೆ ಮಾಡುತ್ತಿದ್ದೇವೆ. ಸವದತ್ತಿ ಅಷ್ಟೇ ಅಲ್ಲದೇ ಗೋಕಾಕ, ಅಥಣಿಯಲ್ಲಿಯೂ ಪಕ್ಷ ಗೆಲ್ಲಬೇಕು ಎಂದು ಸಂಘಟನೆ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಈ ಕುರಿತು ಗೋಕಾಕನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಅಭ್ಯರ್ಥಿ ಆಯಾ ಕ್ಷೇತ್ರದಲ್ಲಿ ಜನಪ್ರಿಯತೆ, ಆಕಕರ್ಣೀಯ ವ್ಯಕ್ತಿತ್ವ ಹೊಂದಿರಬೇಕು. ಒಳ್ಳೆಯ ಕೆಲಸ ಮಾಡಿರಬೇಕು. ಎಲ್ಲ ಪಕ್ಷಗಳ ಟಿಕೆಟ್‌ ಅಂತಿಮವಾದ ಮೇಲೆ ಕೊನೆಯ ಸರ್ವೆ ಮಾಡಿ ನಮ್ಮ ಅಭ್ಯರ್ಥಿ ಫೈನಲ್‌ ಮಾಡುತ್ತೇವೆ ಎಂದರು.

ಎರಡು ಕ್ಷೇತ್ರಗಳಿಂದ ಸತೀಶ ಜಾರಕಿಹೊಳಿ ಸ್ಪರ್ಧಿಸಬೇಕು ಎಂಬ ಬೆಂಬಲಿಗರ ಒತ್ತಾಯದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ನಗರದಲ್ಲಿ ಉತ್ತರಿಸಿದ ಸತೀಶ ಜಾರಕಿಹೊಳಿ ಅವರು, ಆ ರೀತಿ ಇರಬಹುದು. ಆದರೆ ಅಂತಿಮವಾಗಿ ಒಂದೇ ಕಡೆ ಸ್ಪರ್ಧಿಸಬೇಕಾಗುತ್ತದೆ. ಎರಡು ಕಡೆ ಸ್ಪರ್ಧಿಸುವ ಅನಿವಾರ್ಯತೆ ಇಲ್ಲ. ಆಯಾ ಕ್ಷೇತ್ರಗಳಲ್ಲಿ ಸಾಕಷ್ಟು  ಅಭ್ಯರ್ಥಿಗಳಿದ್ದಾರೆ ಎಂದರು.

PM NARENDRA MODI ಯವರೇ, ನಿಮ್ಮ ಭೇಟಿ ವಿಕಾಸ ದರ್ಶನಕ್ಕೋ, ವಿನಾಶ ದರ್ಶನಕ್ಕೋ? ಸಿದ್ದರಾಮಯ್ಯ ಸರಣಿ ಟ್ವೀಟ್

10-12 ಕ್ಷೇತ್ರಗಳಲ್ಲಿ ಗೆಲವು:

ಈ ಬಾರಿ 10-12 ಸ್ಥಾನಗಳನ್ನು ಬೆಳಗಾವಿ ಜಿಲ್ಲೆಯಲ್ಲಿ ಗೆಲ್ಲಲು ಪ್ರಯತ್ನಿಸುತ್ತಿದ್ದೇವೆ. ಕನಿಷ್ಠ 10, ಗರಿಷ್ಠ 12 ಸ್ಥಾನಗಳನ್ನು ಗೆಲ್ಲುತ್ತೇವೆ. ಆ ಭಾಗದಲ್ಲಿ ಜನಪ್ರಿಯತೆ ಇರಬೇಕು. ಜನ ಅವರನ್ನು ಒಪ್ಪಿಕೊಳ್ಳಬೇಕು. ಅಭ್ಯರ್ಥಿಯನ್ನು ಜನ ಒಪ್ಪಿಕೊಳ್ಳುವುದಿಲ್ಲ ಎಂದರೆ ನಾವು ಟಿಕೆಟ್‌ ಕೊಟ್ಟರೂ ಏನೂ ಪ್ರಯೋಜನ ಆಗುವುದಿಲ್ಲ. ಯಾವುದಾದ್ರೂ ಹುದ್ದೆಯಲ್ಲಿ ಕೆಲಸ ಮಾಡಿರಬೇಕು. ಆ ಭಾಗದಲ್ಲಿ ಆಕಷÜರ್‍ಣಿಯ ವ್ಯಕ್ತಿಯಾಗಿರಬೇಕು. ಇವು ಪ್ರಮುಖವಾದ ಮಾನದಂಡಗಳಾಗಿವೆ. ಮುಂದೆ ಬರುವುದು ಪಕ್ಷ. ಅಭ್ಯರ್ಥಿಯ ಹಿಂದೆ ಪಕ್ಷ ನಿಂತಿರುತ್ತದೆ. ಜಿಲ್ಲೆಯ ಎಲ್ಲ ಮುಖಂಡರು ಇರುತ್ತಾರೆ ಎಂದರು.

ಸರ್ವೆನಲ್ಲಿ ಹೆಸರು ಬಂದವರಿಗೆ ಟಿಕೆಟ್‌:

ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದೆ. ಒಂದು ಕಡೆ ಆರು ಜನ, ಮತ್ತೊಂದು ಕಡೆ ಇಬ್ಬರು ಇದ್ದಾರೆ. ಇನ್ನೊಂದು ನಿಖರವಾಗಿ ಒಬ್ಬರೇ ಇದ್ದಾರೆ. ಹೀಗಾಗಿ ಅವರ ಹೆಸರುಗಳನ್ನು ಶಿಫಾರಸ್ಸು ಮಾಡಿದ್ದೇವೆ. ಸರ್ವೆದಲ್ಲಿ ಯಾರ ಹೆಸರು ಬರುತ್ತದೆ. ಅವರಿಗೆ ಟಿಕೆಟ್‌ ಕೊಡುತ್ತೇವೆ. ಈಗಾಗಲೇ ಒಂದು ಸರ್ವೆ ಮುಗಿದಿದೆ. ಮತ್ತೆ ಬೇರೆ ಬೇರೆ ವಿಷÜಯಗಳ ಮೇಲೆ ಬದಲಾವಣೆ ಆಗುತ್ತಿರುತ್ತದೆ. ಕೊನೆಯವರೆಗೂ ಸರ್ವೆ ಮಾಡಲಾಗುತ್ತದೆ. ಅಂತಿಮವಾಗಿ ಎಲ್ಲ ಪಕ್ಷದವರು ಟಿಕೆಟ್‌ ಕೊಟ್ಟಮೇಲೆ ಅಂತಿಮ ಸರ್ವೆ ಮಾಡಿ ಅಭ್ಯರ್ಥಿಯನ್ನು ಫೈನಲ್‌ ಮಾಡಲಾಗುತ್ತದೆ. ಈಗ ಆಗುತ್ತಿರುವುದು ಎಲ್ಲಾ ಊಹಾಪೋಹ ಅಷ್ಟೇ. ಪಕ್ಷಕ್ಕೆ ಈ ವಿಷಯದ ಮೇಲೆ ಇಷ್ಟಯ ಪರ್ಸೆಂಟ್‌ ವೋಟ್‌ ಬರಬಹುದು ಎಂದು ಅಂದಾಜು ಮಾಡಬಹುದು. ಹೀಗಾಗಿ ವೈಯಕ್ತಿವಾಗಿ ಹೇಳುವುದು ಕಷ್ಟ ಎಂದು ಹೇಳಿದರು.

Karnataka Politics: ಭ್ರಷ್ಟ ಸಚಿವರ ವಿರುದ್ಧ ಕ್ರಮಕ್ಕೆ ಹಿಂದೇಟು ಏಕೆ?: ಭಾಸ್ಕರ್‌ ರಾವ್‌

ಸುವರ್ಣಸೌಧಕ್ಕೆ ಆಡಳಿತ ಸ್ಥಳಾಂತರಿಸಿ:

ಇನ್ನೂ ಬೆಳಗಾವಿಯ ಸುವರ್ಣಸೌಧದಲ್ಲಿ ಯಾವುದೇ ಒಂದು ಕಚೇರಿ ತಂದರೆ ಪ್ರಯೋಜನ ಆಗಲ್ಲ. ಅದಕ್ಕೆ ಸಂಬಂಧಿಸಿದ ಎಲ್ಲ ಆಡಳಿತವನ್ನು ಇಲ್ಲಿಗೆ ಸ್ಥಳಾಂತರಿಸಬೇಕು. ಅಂದಾಗ ಮಾತ್ರ ಈ ಭಾಗದ ಜನತೆಗೆ ಅನುಕೂಲವಾಗಲಿದೆ ಎಂದು ತಿಳಿಸಿದ ಅವರು, ಕಾಂಗ್ರೆಸ್‌ ಪಕ್ಷದಿಂದ ಭಾರತ ಜೋಡೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯಲಿದ್ದು, ಕರ್ನಾಟಕದಲ್ಲಿ 21 ದಿನ ನಡೆಯಲಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

ಬೆಳಗಾವಿಯಲ್ಲಿ ಚಿರತೆ ಬಂದು ಇವತ್ತಿಗೆ 26 ದಿನ ಕಳೆದಿದೆ. ಆದರೆ ಇನ್ನೂ ಚಿರತೆ ಮಾತ್ರ ಹಿಡಿದಿಲ್ಲ. ಜನರು ಆತಂಕಗೊಂಡಿದ್ದಾರೆ. ಆದ್ದರಿಂದ ಅರಣ್ಯ ಸಚಿವರು, ಹಿರಿಯ ಅಧಿಕಾರಿಗಳು ಚಿರತೆಗಳ ಬಗ್ಗೆ ಅಪಾರ ಜ್ಞಾನ ಹೊಂದಿದವರನ್ನು ಕರೆ ತಂದು ಬೇಗ ಚಿರತೆ ಹಿಡಿದು ಜನರ ಆತಂಕ ನಿವಾರಿಸಬೇಕು ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios