Asianet Suvarna News Asianet Suvarna News

ಸೇಡಿನ ರಾಜಕಾರಣಕ್ಕೆ ಆಸ್ಪದ ನೀಡಲ್ಲ: ಆರ್‌.ವಿ. ದೇಶಪಾಂಡೆ

*  ಸಂವಿಧಾನದ ಅಡಿಯಲ್ಲಿ ಹೋರಾಟ ಮುಂದುವರಿಯಲಿದೆ
*  ಮುಂದಿನ ಚುನಾವಣೆಗೆ ಕಾಂಗ್ರೆಸ್‌ನ ಸಂಕಲ್ಪ ಅಭಿಯಾನವು ಯಶಸ್ವಿಯಾಗಿ ಮುಂದುವರಿದಿದೆ
*  ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲು ಚಿಂತನೆ ನಡೆಸುವುದರ ಜೊತೆಗೆ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತ 
 

RV Deshpande Talks Over BJP Government grg
Author
Bengaluru, First Published Jun 17, 2022, 11:07 PM IST

ಹಳಿಯಾಳ(ಜೂ.17):  ಕಾಂಗ್ರೆಸ್‌ಪಕ್ಷದ ವರಿಷ್ಠ ರಾಹುಲ್‌ಗಾಂಧಿಯನ್ನು ರಾಜಕೀಯ ದುರುದ್ದೇಶದಿಂದಲೇ ಮುಗಿದು ಹೋದ ಪ್ರಕರಣಕ್ಕೆ ಮರುಜೀವ ನೀಡಿ ವಿಚಾರಣೆಗೆ ಕೇಂದ್ರ ಸರ್ಕಾರವು ಮುಂದಾಗಿದೆ. ಸೇಡಿನ ರಾಜಕಾರಣಕ್ಕೆ ಎಂದಿಗೂ ಕಾಂಗ್ರೆಸ್‌ಆಸ್ಪದ ನೀಡುವುದಿಲ್ಲ ಎಂದು ಮಾಜಿ ಸಚಿವ, ಶಾಸಕ ಆರ್‌.ವಿ. ದೇಶಪಾಂಡೆ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಸಂವಿಧಾನದ ಅಡಿಯಲ್ಲಿ ಹೋರಾಟ ಮುಂದುವರಿಯಲಿದೆ. ಮುಂದಿನ ಚುನಾವಣೆಗೆ ಕಾಂಗ್ರೆಸ್‌ನ ಸಂಕಲ್ಪ ಅಭಿಯಾನವು ಯಶಸ್ವಿಯಾಗಿ ಮುಂದುವರಿದಿದೆ. ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲು ಚಿಂತನೆ ನಡೆಸುವುದರ ಜೊತೆಗೆ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತ ಎಂದರು.

ಉತ್ತರ ಕನ್ನಡ: ರಾತ್ರಿಯಿಡೀ ಗಸ್ತು ತಿರುಗಿ ಹುಬ್ಬೇರುವಂತೆ ಮಾಡಿದ ಮಹಿಳಾ ಪೊಲೀಸ್‌ ಪಡೆ..!

ಸೂಪಾ ಅಣೆಕಟ್ಟಿನಲ್ಲಿ ಅಂತರ್ಜಲ ಕುಸಿತ:

ಕ್ಷೇತ್ರದಲ್ಲಿ ಆಗುತ್ತಿರುವ ಅಂತರ್ಜಲ ಮಟ್ಟದ ಭಾರಿ ಕುಸಿತಕ್ಕೆ ಆತಂಕ ವ್ಯಕ್ತಪಡಿಸಿ, ಸೂಪಾ ಅಣೆಕಟ್ಟೆಯಲ್ಲಿ ನೀರು ಕಡಿಮೆಯಾಗಿದ್ದರ ಪರಿಣಾಮ ಅಲ್ಲಿಯ ಅವಶೇಷಗಳು ಬೆಳಕಿಗೆ ಬಂದಿದ್ದು ಅವುಗಳನ್ನು ತಕ್ಷಣ ಗುರುತಿಸಿ ಪ್ರಾಚ್ಯವಸ್ತು ಇಲಾಖೆಯ ಸಹಾಯದಿಂದ ಜೋಯಿಡಾದ ಜಾನಪದ ವಿಸ್ತರಣಾ ಕೇಂದ್ರಕ್ಕೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಶಾಸಕ ಆರ್‌.ವಿ. ದೇಶಪಾಂಡೆ ಹೇಳಿದರು.
 

Follow Us:
Download App:
  • android
  • ios