ರಾಷ್ಟ್ರಪತಿ ಭವನ ಅನುದಾನ 10 ಕೋಟಿ ರೂ ಕಡಿತ : ಸಂಸದರ ಸಂಬಳಕ್ಕೆ 1,258 ಕೋಟಿ ಮೀಸಲು

 ರಾಷ್ಟ್ರಪತಿಗಳಿಗೆ ನೀಡುವ ಅನುದಾನವು ಕಳೆದ ವರ್ಷಕ್ಕಿಂತ ಈ ಬಾರಿ 10 ಕೋಟಿ ರು. ಕಡಿಮೆಯಾಗಿದೆ. ಇದರಲ್ಲಿ ರಾಷ್ಟ್ರಪತಿಗಳ ಸಿಬ್ಬಂದಿ ವೇತನ, ಗೃಹ ಬಳಕೆ ಖರ್ಚುವೆಚ್ಚಗಳು ಹಾಗೂ ರಾಷ್ಟ್ರಪತಿಗಳ ಮನೋರಂಜನಾ ವೆಚ್ಚವು ಕಳೆದ ವರ್ಷಕ್ಕಿಂತ ಶೇ.27 ರಷ್ಟು ಇಳಿಕೆಯಾಗಿದೆ.

Rs 10 crore reduction in Rashtrapati Bhavan grant,  Rs 1,258 crore reserve for MPs salary and other Allowance akb

ನವದೆಹಲಿ:  ರಾಷ್ಟ್ರಪತಿಗಳಿಗೆ ನೀಡುವ ಅನುದಾನವು ಕಳೆದ ವರ್ಷಕ್ಕಿಂತ ಈ ಬಾರಿ 10 ಕೋಟಿ ರು. ಕಡಿಮೆಯಾಗಿದೆ. ಇದರಲ್ಲಿ ರಾಷ್ಟ್ರಪತಿಗಳ ಸಿಬ್ಬಂದಿ ವೇತನ, ಗೃಹ ಬಳಕೆ ಖರ್ಚುವೆಚ್ಚಗಳು ಹಾಗೂ ರಾಷ್ಟ್ರಪತಿಗಳ ಮನೋರಂಜನಾ ವೆಚ್ಚವು ಕಳೆದ ವರ್ಷಕ್ಕಿಂತ ಶೇ.27 ರಷ್ಟು ಇಳಿಕೆಯಾಗಿದೆ. ಬುಧವಾರ 2023-24 ಸಾಲಿನ ಅಯವ್ಯಯ ಪಟ್ಟಿಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಈ ಹಣಕಾಸು ವರ್ಷದಲ್ಲಿ ರಾಷ್ಟ್ರಪತಿಗಳಿಗೆ ಒಟ್ಟು 90.14 ಕೋಟಿ ರು. ಅನುದಾನ ಘೋಷಣೆ ಮಾಡಿದ್ದಾರೆ. ಇದರಲ್ಲಿ ರಾಷ್ಟ್ರಪತಿಗಳ ವೇತನಕ್ಕೆಂದು 60 ಲಕ್ಷ ರು. ಸೇರಿದ್ದು, ರಾಷ್ಟ್ರಪತಿಗಳ ಸಿಬ್ಬಂದಿಗೆ ನೀಡುವ ವೇತನ, ರಾಷ್ಟ್ರಪತಿಗಳಿಗೆ ದೈನಂದಿನ ಚಟುವಟಿಕೆಗಳಿಗೆ ತಗುಲುವ ವೆಚ್ಚ, ಮನೋರಂಜನೆ, ಪ್ರವಾಸ, ರಾಷ್ಟ್ರಪತಿ ಭವನದ ನಿರ್ವಹನೆ ಸೇರಿ ಇತರೆ ವೆಚ್ಚಗಳಿಗೆಂದು 36.22 ಕೋಟಿ ರು.ಗಳನ್ನು ವಿಂಗಡಿಸಲಾಗಿದೆ.

ರಾಷ್ಟ್ರಪತಿಗಳ ಕಾರ್ಯಾಲಯಕ್ಕೆಂದು 53.32 ಕೋಟಿ ರು. ಅನುದಾನವನ್ನು ಘೋಷಿಸಿದ್ದಾರೆ. ಇದರಲ್ಲಿ ಬರುವ ಅತಿಥಿಗಳ ಸತ್ಕಾರ, ವಿದೇಶಿ ಅಧಿಕಾರಿಗಳ ಸಭೆ, ಮಾತುಕತೆ ಅವರಿಗೆ ನೀಡುವ ಸ್ಮರಣಿಕೆಗಳು ಸೇರಿ ಇತರೆ ಖರ್ಚುಗಳು ಇದರಲ್ಲಿ ಬರುತ್ತದೆ. ಕಳೆದ ವರ್ಷ ರಾಷ್ಟ್ರಪತಿ ವೆಚ್ಚಕ್ಕೆ ಎಂದು 84.8 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಅದರಲ್ಲಿ ಸಿಬ್ಬಂದಿ ವೇತನ ಹಾಗೂ ಇತರೆ ಖರ್ಚುಗಳಿಗೆಂದು 46 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದರು. 2021ರ ಬಜೆಟ್‌ನಲ್ಲಿ 41.68 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಇದಕ್ಕೆ ಹೋಲಿಸಿದರೆ ಈ ವರ್ಷದ ಅನುದಾನವು ಶೇ.27 ರಷ್ಟುಕಡಿತವಾಗಿ 36 ಕೋಟಿಗೆ ಇಳಿದಿದೆ. ಆದರೆ, ರಾಷ್ಟ್ರಪತಿಗಳ ಕಾರ್ಯಾಲಯಕ್ಕೆ ಘೋಷಣೆಯಾಗಿರುವ ಆಯವ್ಯಯ 15.39 ಕೋಟಿ ರು. ಹೆಚ್ಚಳವಾಗಿದೆ.

ಸಂಸದರ ಸಂಬಳಕ್ಕೆ 1,258 ಕೋಟಿ ಮೀಸಲು

ಕೇಂದ್ರ ಸರ್ಕಾರವು ಮಂತ್ರಿಗಳು, ಜನಪ್ರತಿನಿಧಿಗಳ ಸಂಬಳ, ಪ್ರವಾಸ ವೆಚ್ಚಕ್ಕಾಗಿ ಭಾರಿ ಮೊತ್ತವನ್ನೇ ಮೀಸಲಿಟ್ಟಿದೆ. ಸಂಸದರು ಮತ್ತು ವಿದೇಶಿ ಗಣ್ಯರ ವೆಚ್ಚಕ್ಕಾಗಿ .1,258 ಕೋಟಿ ವ್ಯಯಿಸಲಿದೆ. ಇದರಲ್ಲಿ ಪ್ರಧಾನ ಮಂತ್ರಿಗಳ ಕಚೇರಿಯ ವೆಚ್ಚ, ರಾಷ್ಟ್ರೀಯ ರಕ್ಷಣಾ ಕೌನ್ಸಿಲ್‌ ಕಾರ್ಯದರ್ಶಿಗಳು, ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ, ಮಾಜಿ ರಾಜ್ಯಪಾಲರ ಕಾರ್ಯದರ್ಶಿಗಳ ವೆಚ್ಚ ಸೇರಿದೆ. .832 ಕೋಟಿಯನ್ನು ಕೌನ್ಸಿಲ್‌ ಮಂತ್ರಿಗಳಿಗೆ ಮೀಸಲಿಸಲಾಗಿದೆ. ಮಂತ್ರಿಗಳು, ಸಂಸದರು, ಮಾಜಿ ಪ್ರಧಾನಿಗಳ ಸಂಬಳ, ವೆಚ್ಚ. ಪ್ರವಾಸ, ಭತ್ಯೆ ಸೇರಿದೆ. ಅಲ್ಲದೆ ಗಣ್ಯಾತಿಗಣ್ಯರ ವೆಚ್ಚವೂ ಇದರಲ್ಲೇ ಸೇರಿಸಲಾಗಿದೆ.

ಆಡಳಿತಾತ್ಮಕ ವೆಚ್ಚಕ್ಕಾಗಿ 185 ಕೋಟಿಯನ್ನು ರಾಷ್ಟ್ರೀಯ ರಕ್ಷಣಾ ಕೌನ್ಸಿಲ್‌ ಕಾರ್ಯದರ್ಶಿಗೆ ನೀಡಲಾಗುತ್ತದೆ. 96 ಕೋಟಿಯನ್ನು ವೈಜ್ಞಾನಿಕ ಸಲಹೆಗಾರರ ಕಚೇರಿಗೆ, 71 ಕೋಟಿಯನ್ನು ಕ್ಯಾಬಿನೆಟ್‌ ಕಾರ್ಯದರ್ಶಿ, 62 ಕೋಟಿಯನ್ನು ಪ್ರಧಾನಿಗಳ ಕಚೇರಿಗೆ ನೀಡಲಾಗುತ್ತದೆ. ರಾಷ್ಟ್ರೀಯ ಹಬ್ಬಗಳಲ್ಲಿ ವಿದೇಶಿ ಗಣ್ಯರ ಆತಿಥ್ಯ, ರಾಷ್ಟ್ರಪತಿ ಭವನದ ಉಪ ರಾಷ್ಟ್ರಪತಿಗಳು ಮತ್ತು ಪ್ರಧಾನಿಗಳ ಮನರಂಜನೆಗಾಗಿ ವೆಚ್ಚಕ್ಕೆ ಹಣ ಮೀಸಲಿರಿಸಲಾಗಿದೆ. ಇನ್ನು 1.8 ಕೋಟಿಯನ್ನು ಮಾಜಿ ರಾಜ್ಯಪಾಲರ ಕಾರ್ಯದರ್ಶಿಗಳಿಗೆ ವ್ಯಯಿಸಲಾಗುತ್ತದೆ.

Latest Videos
Follow Us:
Download App:
  • android
  • ios