Asianet Suvarna News Asianet Suvarna News

ಯಡಿಯೂರಪ್ಪ ಆಪ್ತರಿಗೆ ಬೊಮ್ಮಾಯಿ ಸರ್ಕಾರದಲ್ಲಿ ಬಂಪರ್ ಹುದ್ದೆ

  • ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಪ್ತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಮಹತ್ವದ ಸ್ಥಾನ 
  • ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮತ್ತು ಮಾಜಿ ಶಾಸಕ ಡಿ ಎನ್ ಜೀವರಾಜ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ 
Renukacharya Jeevraj appointed as CM Basavaraj Bommai political secretaries snr
Author
Bengaluru, First Published Sep 30, 2021, 11:59 AM IST
  • Facebook
  • Twitter
  • Whatsapp

ಬೆಂಗಳೂರು (ಸೆ.30): ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (BS Yediyurappa) ಆಪ್ತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರದಲ್ಲಿ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. 

ಹೊನ್ನಾಳಿ ಶಾಸಕ ರೇಣುಕಾಚಾರ್ಯ (Renukacharya) ಮತ್ತು ಮಾಜಿ ಶಾಸಕ ಡಿ ಎನ್ ಜೀವರಾಜ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

 

ಹಿಂದಿನ ಸರ್ಕಾರದ ಅವಧಿಯಲ್ಲಿ ಇದ್ದ ಸ್ಥಾನಮಾನಗಳನ್ನು ಮತ್ತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‌ಮರಳಿ ನೀಡಿದ್ದಾರೆ.  ಹೊನ್ನಾಳಿ ಶಾಸಕರಾಗಿರುವ ಎಂ ಪಿ ರೇಣುಕಾಚಾರ್ಯ. ಶೃಂಗೇರಿ ಮಾಜಿ ಶಾಸಕರಾಗಿರುವ ಡಿ ಎನ್ ಜೀವರಾಜ್ ಮಹತ್ವದ ಹುದ್ದೆಗಳು ದೊರೆತಿವೆ.

ರಾಜ್ಯ ರಾಜಕಾರಣದಲ್ಲಿ ಸಂಚಲಚನ ಮೂಡಿಸಿದ ಬಿಜೆಪಿ ಶಾಸಕ ರೇಣುಕಾಚಾರ್ಯ

ಹಿಂದಿನ ಸರ್ಕಾರದ ಅವಧಿಯಲ್ಲಿಯು ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಅವರಿಗೆ ರೇಣುಕಾಚಾರ್ಯ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಮತ್ತೊಮ್ಮೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಅಧಿಕೃತ ಆದೇಶ ನೀಡಲಾಗಿದೆ.

 

ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಪಡೆಯಲು ರೇಣುಕಾಚಾರ್ಯ ಯತ್ನಿಸಿದ್ದು ಅನೇಕ ಹೊಸಬರಿಗೆ ಮಣೆ ಹಾಕಲಾಗಿದ್ದು,  ರಾಜಕೀಯ ಕಾರ್ಯದರ್ಶಿ ಸ್ಥಾನ ಇದೀಗ ಮತ್ತೊಮ್ಮೆ ರೇಣುಕಾಚಾರ್ಯ ಅವರ ಪಾಲಿಗೆ ಒಲಿದಿದೆ. 

ಯಡಿಯೂರಪ್ಪ ಅವರ ಸೂಚನೆಯಂತೆ ಸಿಎಂ ಬೊಮ್ಮಾಯಿ ಅಧಿಕಾರ ನಡೆಸುತ್ತಿದ್ದಾರೆ ಎನ್ನುವ ಅನೇಕ ರೀತಿಯ ಆರೋಪಗಳ ನಡುವೆಯೂ ಇದೀಗ ಅವರ ಆಪ್ತರಿಗೆ ಸ್ಥಾನ ದೊರೆತಿದೆ. 

ಹೊಸಬರಿಗೆ ಮಣೆ ಹಾಕಲು ಕೋರಿದ್ದ ರೇಣು

ಗುಜರಾತ್‌ನಲ್ಲಿ ಹಳಬರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗಿದೆ. ಅದೇ ಮಾದರಿಯಲ್ಲೇ ಸಚಿವ ಸಂಪುಟ ಆಗಬೇಕು ಎಂಬುದು ಅನೇಕ ಶಾಸಕರ ಅಪೇಕ್ಷೆಯಾಗಿದೆ ಎಂದು ಹೊನ್ನಾಳಿ ಶಾಸಕ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದ್ದರು. ಈ ಬಗ್ಗೆ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಮಾತನಾಡುವಷ್ಟು ದೊಡ್ಡವನು ನಾನಲ್ಲ. ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕೆಂಬುದು ನಾನೂ ಸೇರಿದಂತೆ ನಮ್ಮ ಜಿಲ್ಲೆಯ ಎಲ್ಲಾ ಶಾಸಕರ ಅಭಿಪ್ರಾಯವಾಗಿದೆ. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು, ಯಾರನ್ನು ಬಿಡಬೇಕೆಂಬುದು ಪಕ್ಷದ ವರಿಷ್ಟರಿಗೆ ಬಿಟ್ಟವಿಚಾರ. ನಮ್ಮ ಜಿಲ್ಲೆಗೊಂದು ಸಚಿವ ಸ್ಥಾನ ಸಿಗಲೆಂಬುದು ನಮ್ಮೆಲ್ಲರ ಆಸೆ, ಬೇಡಿಕೆಯಾಗಿದೆ ಎಂದಿದ್ದರು. ಆದರೆ ಅವರ ಬೇಡಿಕೆಯಂತೆ ಕೆಲವಷ್ಟೆ ಹೊಸ ಮುಖಗಳು ಬೊಮ್ಮಾಯಿ ಸಂಪುಟಕ್ಕೆ ಸೇರಿದ್ದವು. 

Follow Us:
Download App:
  • android
  • ios