ನವದೆಹಲಿ (ಸೆ. 18): ಏಪ್ರಿಲ್‌ನಲ್ಲಿ ಶಾಸಕರ ಜೊತೆಗಿನ ರೊಟ್ಟಿಊಟದ ನಂತರ ಏಕಾಏಕಿ ಯತ್ನಾಳ್‌ ಸಾಹೇಬರು ಮೌನವಾಗಿದ್ದಾರೆ. ಬಿಜೆಪಿ ಪಾಲಿಟಿಕ್ಸ್‌ ಬಗ್ಗೆ ಏನೇ ಕೇಳಿದರೂ ಯತ್ನಾಳ್‌ ಗೌಡರು, ‘ಬೇಡ ಬಿಡ್ರಿ.. ನಾನೇನೂ ಮಾತಾಡಂಗಿಲ್ಲ. ನಾವ್‌ ಮಾತಾಡೋದು ಕೆಟ್ಟಆಗೋದು ಯಾಕ್ರೀ..’ ಎನ್ನುತ್ತಾರೆ.

ಸಂಪುಟ ವಿಸ್ತರಣೆಗೆ ಬಿಎಸ್‌ವೈ ದೆಹಲಿಗೆ ದೌಡು; ಆದರೆ ಬಿಹಾರ್‌ ಎಲೆಕ್ಷನ್ ಅಡ್ಡಿ..!

ಯತ್ನಾಳ್‌ ಗೌಡರಿಗೆ ದಿಲ್ಲಿ ನಾಯಕರೊಬ್ಬರು, ‘ಜಾಸ್ತಿ ಹೇಳಿಕೆ ಕೊಡಬೇಡಿ’ ಎಂದು ಹೇಳಿರುವುದರಿಂದ ಗೌಡರು ಸುಮ್ಮನಾಗಿದ್ದಾರೆ. ಸ್ಥಳೀಯ ಸಂಘದ ಜೊತೆ ಯತ್ನಾಳ್‌ ಸಂಬಂಧ ಚೆನ್ನಾಗಿಲ್ಲ. ಆದರೆ ಎಬಿವಿಪಿ ಕಾರಣದಿಂದ ದತ್ತಾತ್ರೇಯ ಹೊಸಬಾಳೆ ಜೊತೆ ಅವರಿಗೆ ಆತ್ಮೀಯತೆ ಇದೆ. ಅಂದಹಾಗೆ ದಿಲ್ಲಿ ಬಿಜೆಪಿ ನಾಯಕರ ಪ್ರಕಾರ, ಯಡಿಯೂರಪ್ಪ ಬಿಟ್ಟರೆ ಬಸನಗೌಡರು ಲಿಂಗಾಯತರಲ್ಲಿ ಅತ್ಯಂತ ಜನಪ್ರಿಯರು. ಜೊತೆಗೆ ಪಂಚಮಸಾಲಿ. ಆದರೆ ವಾಚಾಳಿತನದಿಂದಾಗಿ ಶತ್ರುಗಳು ಬಹಳ, ಮಿತ್ರರು ವಿರಳ.

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

'ಇಂಡಿಯಾ ಗೇಟ್' ದೆಹಲಿಯಿಂದ ಕಂಡ ರಾಜಕಾರಣ