ಬೆಂಗಳೂರು, (ಸೆ.11): ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್  ಸುರ್ಜೆವಾಲಾ ಅವರನ್ನು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಿಸಲಾಗಿದೆ.

ಕೆ.ಸಿ ವೇಣುಗೋಪಾಲ್ ಅವರ ಸ್ಥಾನಕ್ಕೆ ರಣದೀಪ್ ಸಿಂಗ್  ಸುರ್ಜೆವಾಲಾ ಅವರನ್ನು ನೇಮಿಸಿ ಇಂದು (ಶುಕ್ರವಾರ) ಎಐಸಿಸಿ ಆದೇಶ ಹೊರಡಿಸಿದೆ. ಇನ್ನು ಮಹಾರಾಷ್ಟ್ರ ಉಸ್ತುವಾರಿಯಾಗಿ ಕರ್ನಾಟಕ ಕಾಂಗ್ರೆಸ್ ನಾಯಕ ಎಚ್‌. ಕೆ. ಪಾಟೀಲ್ ಅವರನ್ನ ನೇಮಿಸಿದ್ರೆ, ತಮಿಳುನಾಡು ಮತ್ತು ಗೋವಾ ರಾಜ್ಯದ ಉಸ್ತುವಾರಿಯನ್ನು ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ವಹಿಸಲಾಗಿದೆ.

ಅತ್ತ ಬಿಎಸ್‌ವೈ-ಎಚ್‌ಡಿಕೆ ಭೇಟಿ, ಇತ್ತ ಸಿದ್ದು ಮನೆಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ಎರಡರಲ್ಲೂ ಪಕ್ಷ ಸೋತ ಬಳಿಕ ಕೆಲ ನಾಯಕರು ವೇಣುಗೋಪಾಲ್ ಅವರನ್ನ ಬದಲಿಸಬೇಕೆಂಬ ಕೂಗು ಕೇಳಿಬಂದಿದ್ದವು.

ಅಷ್ಟೇ ಅಲ್ಲದೇ ವೇಣುಗೋಪಾಲ್, ಸಿದ್ದರಾಮಯ್ಯ ಆ್ಯಂಡ್ ಟೀಮ್ ಜೊತೆ ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆಲ ಹಿರಿಯ ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದರು.