ಚುನಾವಣೆಯಲ್ಲಿ ರಮೇಶ್ ಕುಮಾರ್ ಪ್ರಚಾರ ಮಾಡುತ್ತಾರೆ: ಡಿ.ಕೆ. ಶಿವಕುಮಾರ್
ಮೊನ್ನೆಯಷ್ಟೇ ನಾವು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಪ್ರಚಾರ ಮಾಡಿದ್ದೇವೆ. ವೇದಿಕೆ ಮೇಲೆ ಭಾಷಣ ಮಾಡಿದರೆ ಮಾತ್ರ ಪ್ರಚಾರವೇ? ರಾಜಕೀಯದಲ್ಲಿ ಒಂದು ಪಕ್ಷದ ಸಿದ್ಧಾಂತ ಇದ್ದರೆ ಸಾಯುವವರೆಗೂ ಸೇವೆ ಮಾಡುತ್ತಲೇ ಇರುತ್ತಾರೆ. ಚುನಾವಣಾ ರಾಜಕೀಯಕ್ಕೂ ಸಕ್ರಿಯ ರಾಜಕೀಯಕ್ಕೂ ವ್ಯತ್ಯಾಸವಿದೆ’ ಎಂದು ಹೇಳಿದ ಡಿ.ಕೆ. ಶಿವಕುಮಾರ್
ಬೆಂಗಳೂರು(ಏ.09): ಮಾಜಿ ಸ್ಪೀಕರ್ ಕೆ. ರಮೇಶ್ ಕುಮಾರ್ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಷ್ಟೇ ಹೇಳಿದ್ದಾರೆ ಹೊರತು ಸಕ್ರಿಯ ರಾಜಕಾರಣದಲ್ಲಿ ಇರುವುದಿಲ್ಲ ಎಂದು ಹೇಳಿಲ್ಲ. ಅವರು ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ರಮೇಶ್ ಕುಮಾರ್ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡಿದ್ದು, ಮತ್ತೊಂದೆಡೆ ಮುನಿಯಪ್ಪ ಅವರು ಪ್ರಚಾರಕ್ಕೆ ಬರುತ್ತಿಲ್ಲ ಎಂಬ ಪ್ರಶ್ನೆಗೆ, ‘ಮೊನ್ನೆಯಷ್ಟೇ ನಾವು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಪ್ರಚಾರ ಮಾಡಿದ್ದೇವೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ ರಾಜಕೀಯ ನಿವೃತ್ತಿ ಘೋಷಣೆ? ಹೇಳಿದ್ದೇನು?
ವೇದಿಕೆ ಮೇಲೆ ಭಾಷಣ ಮಾಡಿದರೆ ಮಾತ್ರ ಪ್ರಚಾರವೇ? ರಾಜಕೀಯದಲ್ಲಿ ಒಂದು ಪಕ್ಷದ ಸಿದ್ಧಾಂತ ಇದ್ದರೆ ಸಾಯುವವರೆಗೂ ಸೇವೆ ಮಾಡುತ್ತಲೇ ಇರುತ್ತಾರೆ. ಚುನಾವಣಾ ರಾಜಕೀಯಕ್ಕೂ ಸಕ್ರಿಯ ರಾಜಕೀಯಕ್ಕೂ ವ್ಯತ್ಯಾಸವಿದೆ’ ಎಂದು ಹೇಳಿದರು.