Asianet Suvarna News Asianet Suvarna News

ರಮೇಶ್‌ ಜಾರಕಿಹೊಳಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಡಿಕೆಶಿ

ರಮೇಶ್‌ ಜಾರಕಿಹೊಳಿ ಅವರ ಮಾತು-ಕತೆ ಕೇಳಿ ನನಗೆ ಅಯ್ಯೋ ಎನಿಸುತ್ತಿದೆ. ಅವರು ಯಾವ ತನಿಖೆಯಾದರೂ ಮಾಡಿಸಿಕೊಳ್ಳಲಿ. ನಾವು ಯಾರನ್ನೂ ತಡೆದಿಲ್ಲ. ನಾನು ಅವರ ಬಗ್ಗೆ ಹೇಳಿಕೆ ನೀಡುವುದಿಲ್ಲ. ಅವರ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದರಿಂದ ಉತ್ತಮ ಚಿಕಿತ್ಸೆ ಕೊಡಿಸಿ ಎಂದಷ್ಟೇ ಅವರ ಪಕ್ಷದವರಿಗೆ ಹೇಳಬಲ್ಲೆ ಎಂದ ಡಿಕೆಶಿ. 

Ramesh Jarakiholi Lost His Mental Composure says DK Shivakumar grg
Author
First Published Feb 2, 2023, 2:00 AM IST

ಬೆಂಗಳೂರು(ಫೆ.02): ‘ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದು ಅದು ಮತ್ತೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಹತಾಶೆಯಲ್ಲಿ ಮಾತನಾಡುತ್ತಿದ್ದಾರೆ. ಅವರು ಮಾನಸಿಕ ಸ್ಥಿಮಿತವನ್ನು ಸಂಪೂರ್ಣ ಕಳೆದುಕೊಂಡಿದ್ದು, ಅವರ ಪಕ್ಷದವರು ಸೂಕ್ತ ಚಿಕಿತ್ಸೆ ಕೊಡಿಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಮೇಶ್‌ ಜಾರಕಿಹೊಳಿ ಅವರ ಮಾತು-ಕತೆ ಕೇಳಿ ನನಗೆ ಅಯ್ಯೋ ಎನಿಸುತ್ತಿದೆ. ಅವರು ಯಾವ ತನಿಖೆಯಾದರೂ ಮಾಡಿಸಿಕೊಳ್ಳಲಿ. ನಾವು ಯಾರನ್ನೂ ತಡೆದಿಲ್ಲ. ನಾನು ಅವರ ಬಗ್ಗೆ ಹೇಳಿಕೆ ನೀಡುವುದಿಲ್ಲ. ಅವರ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದರಿಂದ ಉತ್ತಮ ಚಿಕಿತ್ಸೆ ಕೊಡಿಸಿ ಎಂದಷ್ಟೇ ಅವರ ಪಕ್ಷದವರಿಗೆ ಹೇಳಬಲ್ಲೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ಅಂದರೆ ಕರ್ನಾಟಕ ಪ್ರದೇಶ ಸಿಡಿ ಕಂಪನಿ ಅಧ್ಯಕ್ಷ: ಲಖನ್‌ ಜಾರಕಿಹೊಳಿ

ಸೀಡಿ ಪ್ರಕರಣ ಸಿಬಿಐಗೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವ ಕುರಿತು ಪ್ರತಿಕ್ರಿಯಿಸಿ, ‘ಅವರು ಏನಾದರೂ ಮಾಡಿಕೊಳ್ಳಲಿ, ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಅದರ ಅವಶ್ಯತಕತೆಯೂ ನನಗಿಲ್ಲ. ರಾಜಕಾರಣದ ರಣರಂಗದಲ್ಲಿ ನಾವು ಹೋರಾಟ ಮಾಡುತ್ತೇವೆ. ಚುನಾವಣೆಯಲ್ಲಿ ಬಂದು ನಿಲ್ಲುತ್ತೇವೆ ಎಂದವರು ಬಂದು ನಿಂತು ಶಕ್ತಿ ಪ್ರದರ್ಶನ ಮಾಡಲಿ. ತಮ್ಮ ಪಟ್ಟುಗಳನ್ನು ಹಾಕಲಿ’ ಎಂದು ಸವಾಲು ಹಾಕಿದರು. ಶಿವಕುಮಾರ್‌ ಅವರ ರಾಜಕೀಯ ಜೀವನ ಮುಗಿಸುತ್ತೇನೆ ಎಂಬ ಸವಾಲಿಗೆ, ‘ನಾನು ಅವರಿಗೆ ಶುಭ ಕೋರುತ್ತೇನೆ. ಅವರಿಗೆ ದೇವರು ಒಳ್ಳೆಯದು ಮಾಡಲಿ’ ಎಂದಷ್ಟೇ ಹೇಳಿದರು.

ಪೂರ್ವದಿಂದ ಪಶ್ಚಿಮಕ್ಕೂ ರಾಗಾ ಯಾತ್ರೆ?: ಇದೇ ವೇಳೆ ಕಾಶ್ಮೀರ ಪ್ರವಾಸದ ಬಗ್ಗೆ ಮಾತನಾಡಿದ ಅವರು, ಭಾರತ ಜೋಡೋ ಯಾತ್ರೆ ಮೂಲಕ ದೇಶ ಒಗ್ಗೂಡಿಸುವ ಪ್ರಯತ್ನವನ್ನು ರಾಹುಲ್‌ಗಾಂಧಿ ಮಾಡಿದ್ದಾರೆ. ಮಹಾತ್ಮಗಾಂಧಿ ರೀತಿ ಅವರು ಹೋರಾಟ ಮಾಡಿದ್ದಾರೆ. ಈ ಯಾತ್ರೆಯನ್ನು ಪೂರ್ವದಿಂದ ಪಶ್ಚಿಮಕ್ಕೂ ಮಾಡಬೇಕೆಂಬ ಒತ್ತಡ ಕೂಡ ಬರುತ್ತಿದೆ. ಮುಂದಿನ ದಿನಗಳಲ್ಲಿ ಅವರು ತೀರ್ಮಾನ ಮಾಡಲಿದ್ದು, ಅವರ ತೀರ್ಮಾನವನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ಹೇಳಿದರು.

ರಮೇಶ್‌ ಜಾರಕಿಹೊಳಿಯಿಂದ ಡಿಕೆಶಿ ವಿರುದ್ಧ ಇಲ್ಲಸಲ್ಲದ ಆರೋಪ : ಲಕ್ಷ್ಮಣ್

ಕಾಶ್ಮೀರದಲ್ಲಿ ಸಮಾರೋಪ ಸಮಾರಂಭ ಬಹಳ ಅತ್ಯುತ್ತಮವಾಗಿ ನಡೆದಿದೆ. ನಾನು ಕನ್ಯಾಕುಮಾರಿ ಕಾರ್ಯಕ್ರಮ ಹಾಗೂ ಕಾಶ್ಮೀರ ಕಾರ್ಯಕ್ರಮ ಎರಡರಲ್ಲೂ ಭಾಗವಹಿಸಿದ್ದೆ. ನಮ್ಮ ರಾಜ್ಯದಲ್ಲೂ ಯಾತ್ರೆ ಬಹಳ ಚೆನ್ನಾಗಿ ನಡೆದಿದ್ದು, ನಮ್ಮ ಆತಿಥ್ಯ ಹಾಗೂ ಉಪಚಾರವನ್ನು ನಾಯಕರು ಸ್ಮರಿಸಿದ್ದಾರೆ. ಕಾಶ್ಮೀರದ ಹಿಮಪಾತ ನನಗೆ ಮೊದಲ ಅನುಭವ. ನಾವು ಇಂಥ ಪ್ರಕೃತಿ ಸೌಂದರ್ಯ ಸವಿಯಲು ವಿದೇಶಕ್ಕೆ ಹೋಗುವುದು ಬೇಡ. ಕಾಶ್ಮೀರಕ್ಕೆ ಪ್ರವಾಸ ಮಾಡಿದರೆ ಸಾಕು ಎಂದು ನಮ್ಮ ರಾಜ್ಯದವರಿಗೆ ಹೇಳುತ್ತೇನೆ ಎಂದರು.

ವಿದೇಶದ ಆಸ್ತಿ ವಿಳಾಸ ಕೊಟ್ಟರೆ ಅವರಿಗೇ ಉಡುಗೊರೆ ಕೊಡೋಣ

ಆಡಿಯೋದಲ್ಲಿನ ತಮ್ಮ ವಿದೇಶಿ ಆಸ್ತಿಗಳ ಆರೋಪ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ‘ಅದರಲ್ಲಿ ಶೇ.10ರಷ್ಟಾದರೂ ನನಗೆ ಸಿಗಲಿ. ಎಲ್ಲೆಲ್ಲಿ ಆ ಮನೆಗಳಿವೆ ಎಂದು ವಿಳಾಸ ಕೊಟ್ಟರೆ ಹೋಗಿ ಒಂದೊಂದು ದಿನ ಇದ್ದು ಬರಬಹುದು. ಬೇಕಾದರೆ ಅವರಿಗೆ ಉಡುಗೊರೆಯಾಗಿ ನೀಡೋಣ’ ಎಂದು ವ್ಯಂಗ್ಯವಾಡಿದರು.

Follow Us:
Download App:
  • android
  • ios