Asianet Suvarna News Asianet Suvarna News

ರಣಾಂಗಣವಾದ ರಾಮನಗರ: ನಿಖಿಲ್‌ ಕುಮಾರಸ್ವಾಮಿಗೆ ಠಕ್ಕರ್‌ ಕೊಡಲು ಡಿ.ಕೆ. ಸುರೇಶ್ ಕಣಕ್ಕೆ?

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡುತ್ತಿರುವ ನಿಖಿಲ್ ಕುಮಾರಸ್ವಾಮಿಗೆ ಠಕ್ಕರ್‌ ಕೊಡಲು ಮುಂದಾಗಿರುವ ಕಾಂಗ್ರೆಸ್‌ ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸಂಸದ ಡಿ.ಕೆ. ಸುರೇಶ್‌ ಕಣಕ್ಕಿಳಿಸಲು ಸಿದ್ಧತೆ ಮಾಡುತ್ತಿದೆ.

Ramanagara turn as battleground Nikhil Kumaraswamy opposite contest DK Suresh sat
Author
First Published Mar 14, 2023, 1:46 PM IST

ರಾಮನಗರ (ಮಾ.14): ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ತವರು ಕ್ಷೇತ್ರ ರಾಮನಗರದಲ್ಲಿ ಗೌಡರ ಕುಟುಂಬದ ಮೂರನೇ ತಲೆಮಾರು ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಆದರೆ, ಇದಕ್ಕೆ ಠಕ್ಕರ್‌ ಕೊಡಲು ಮುಂದಾಗಿರುವ ಕಾಂಗ್ರೆಸ್‌ ರಾಮನಗರ ಕ್ಷೇತ್ರದಿಂದ ಸಂಸದ ಡಿ.ಕೆ. ಸುರೇಶ್‌ ಕಣಕ್ಕಿಳಿಸಲು ಸಿದ್ಧತೆ ಮಾಡುತ್ತಿದೆ.

ಈ ಬಗ್ಗೆ ಸ್ವತಃ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ರಾಮನಗರದಿಂದ ಡಿ.ಕೆ. ಸುರೇಶ್ ಸ್ಪರ್ಧೆಗೆ ಹೈ ಕಮಾಂಡ್ ಸೂಚನೆ ವಿಚಾರವನ್ನು ತಳ್ಳಿ ಹಾಕುವುದಕ್ಕೆ ಆಗುವುದಿಲ್ಲ. ಈ ಬಗ್ಗೆ ಈಗಾಗಲೇ ಪ್ರಪೋಸಲ್ ಕೂಡ ಇದೆ. ಅವರನ್ನು ನಿಲ್ಲಿಸಬೇಕು ಎಂಬ ಸಣ್ಣ ಸಂದೇಶ ಇದೆ. ಆದರೆ, ಈ ಬಗ್ಗೆ ನಾನು ಯಾರ ಬಳಿಯು ಮಾತನಾಡಿಲ್ಲ. ಸುರೇಶ್ ಬಳಿ ಸೇರಿ ಕಾರ್ಯಕರ್ತರ ಬಳಿಯೂ ಈ ಬಗ್ಗೆ ಮಾತನಾಡಿಲ್ಲ. ಇದು ಮೇಜರ್ ಡಿಸಿಷನ್ ಆಲೋಚನೆ ಮಾಡುತ್ತೇವೆ. ನಾನೇ ಪಿಸಿಸಿ ಪ್ರೆಸಿಡೆಂಟ್ ಕೆಲ ಪ್ರಪೋಸಲ್ ಇದೆ. ನಾನು ಇಲ್ಲ ಎನ್ನುವುದಿಲ್ಲ ಎಂದು ಹೇಳಿದ್ದಾರೆ. 

Karnataka election: ರಾಮನಗರದಲ್ಲಿ ನಿಖಿಲ್‌ ವಿರುದ್ಧ ಡಿಕೆಸು ಸ್ಪರ್ಧೆ: ಎಚ್‌ಡಿಕೆಗೆ ಹೊಸ ತಲೆನೋವು ತಂದಿಟ್ಟ ಡಿಕೆಶಿ

ರಾಮನಗರದ ಸ್ಥಳೀಯ ಕಾರ್ಯಕರ್ತರು ಹಾಗೂ ಮುಖಂಡರು ಬಹಳ ದಿನದಿಂದ ಒತ್ತಾಯ ಮಾಡುತ್ತಿದ್ದಾರೆ. ನನಗೆ ಬೈ ಎಲೆಕ್ಷನ್ ಮಾಡುವುದು ಇಷ್ಟ ಇಲ್ಲ. ಈಗ ಪಾರ್ಟಿ ಕೂಡ ಈ ವಿಚಾರವನ್ನು ಹೇಳುತ್ತಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಈ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ಜೊತೆಗೆ ಸಂಸದ ಡಿ.ಕೆ. ಸುರೇಶ್‌ ಕೂಡ ರಾಮನಗರದಿಂದ ಸ್ಪರ್ಧೆ ಮಾಡುವುದಕ್ಕೆ ಇನ್ನೂ ಅರ್ಜಿಯನ್ನು ಹಾಕಿಲ್ಲ ಎಂದು ಮಾಹಿತಿ ನೀಡಿದ್ದಾರೆ. 

ನಿಖಿಲ್‌ ಕುಮಾರಸ್ವಾಮಿಗೆ ಸಂಕಷ್ಟ: ಇನ್ನು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸಂಸದ ಡಿಕೆ ಸುರೇಶ್ ಅವರು ಸ್ಪರ್ಧೆ ಮಾಡಿದರೆ, ನಿಖಿಲ್ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗುವುದು ಖಚಿತವಾಗಲಿದೆ. ಭಾರಿ ಪ್ರಮಾಣದ ಪೈಪೋಟಿ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ಇನ್ನು ರಾಮನಗರದಲ್ಲಿ ಡಿ.ಕೆ. ಸುರೇಶ್ ಸ್ಪರ್ಧೆ ಮಾಡಿದರೆ ನೇರವಾಗಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿಯ ಅಶ್ವಥ್ ನಾರಾಯಣಗೂ ಕೌಂಟರ್ ನೀಡಬಹುದು ಎಂಬುದು ಲೆಕ್ಕಾಚಾರವಾಗಿದೆ. ಒಟ್ಟಾರೆ ಒಕ್ಕಲಿಗ ನಾಯಕತ್ವದ ಮೇಲೆ ಡಿಕೆ ಬ್ರದರ್ಸ್ ಮತ್ತಷ್ಟು ಹಿಡಿತ ಸಾಧಿಸಬಹುದು. ಮುಂದೆ ಸರ್ಕಾರ ರಚನೆ ಸಂದರ್ಭದಲ್ಲಿ ಡಿಕೆ ಸುರೇಶ್ ಗೆ ಸಚಿವ ಸ್ಥಾನದ ಡಿಮ್ಯಾಂಡ್ ಕೂಡ ಇಡಬಹುದು.

ಸೀಡಿ ತೋರಿಸಿ ಕಾಂಗ್ರೆಸ್‌ ಸೇರುವಂತೆ ಡಿಕೆಶಿ ಬೆದರಿಕೆ : ರಮೇಶ್ ಜಾರಕಿಹೊಳಿ

Follow Us:
Download App:
  • android
  • ios