ರಾಮನಗರ : ರಾಜ್ಯ ರಾಜಕಾರಣದಲ್ಲಿ ಬಿಗ್ ಟ್ವಿಸ್ಟ್ ಎದುರಾಗಿದೆ. ರಾಮನಗರ ಚುನಾವಣಾ ಕಣದಿಂದ ಬಿಜೆಪಿ ಅಭ್ಯರ್ಥಿ ವಾಪಸಾಗಿದ್ದಾರೆ.  

 ರಾಮನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಕಣದಿಂದ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. 

ಈ ಮೂಲಕ ಉಪ ಚುನಾವಣಾ ಕಣಕ್ಕೆ ಮೆಗಾ ಟ್ವಿಸ್ಟ್ ದೊರಕಿದಂತಾಗಿದೆ. ಅಲ್ಲದೇ ಅಭ್ಯರ್ಥಿ ಚಂದ್ರಶೇಖರ್ ತಮ್ಮ ಹಳೆಯ ಪಕ್ಷ ಕಾಂಗ್ರೆಸಿಗೆ ವಾಪಸಾಗಿದ್ದಾರೆ. 

ಇದರಿಂದ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಗೆಲುವು ಖಚಿತವಾಗಿದೆ.