ಕೈ ಹಿಡಿಯಲು ಕಮಲ, ದಳ ನಾಯ​ಕರ ಸಿದ್ಧತೆ!  ಪಕ್ಷಾಂತರದ ಕಾವು ಹೆಚ್ಚಿ​ಸಿದ ಪರಿ​ಷತ್‌ ಫಲಿ​ತಾಂಶ ಪ್ರಮುಖ ನಾಯ​ಕ​ರನ್ನು ಸೆಳೆ​ಯಲು ಕೈ ಕಸ​ರತ್ತು ಸಿಪಿವೈ ಮತ್ತು ಪಿ.ನಾ​ಗ​ರಾಜು ಪಕ್ಷಾಂತ​ರದ ಚರ್ಚೆ

ವರದಿ: ಎಂ.ಅ​ಫ್ರೋಜ್ ಖಾನ್‌

 ರಾಮ​ನ​ಗರ (ಡಿ.17): ವಿಧಾನ ಪರಿ​ಷತ್‌ ಚುನಾ​ವಣೆ (MLC Election Result ) ಫಲಿ​ತಾಂಶದ ಬೆನ್ನ ಹಿಂದೆಯೇ ಜಿಲ್ಲೆ​ಯಲ್ಲಿ ಪಕ್ಷಾಂತ​ರದ ಚರ್ಚೆ ಜೋರಾಗಿದ್ದು, ಬಿಜೆಪಿ (BJP) ಹಾಗೂ ಜೆಡಿ​ಎಸ್‌ (JDS) ಪಕ್ಷ​ಗ​ಳ ಪ್ರಮುಖ ನಾಯ​ಕರು ಕಾಂಗ್ರೆಸ್‌ (Congress) ​ಗೂ​ಡಿಗೆ ​ಹಾ​ರಲು ಸಿದ್ಧತೆ ನಡೆ​ಸಿ​ದ್ದಾರೆ. ಪರಿಷತ್‌ ಚುನಾವಣೆಯಲ್ಲಿ ಬಹಿರಂಗವಾಗಿ ಪ್ರಚಾರಕ್ಕಿಳಿದು ಕಾರ್ಯತಂತ್ರ ರೂಪಿಸಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy) ತಮ್ಮ ಕರ್ಮ ಭೂಮಿಯಲ್ಲಿಯೇ ಹಿನ್ನಡೆ ಅನುಭವಿಸಿದರೆ, ಆಡ​ಳಿತರೂಡ ಬಿಜೆಪಿ (BJP) ಮಕಾಡೆ ಮಲ​ಗಿದೆ. ಇದರಿಂದ ಹೊಸ ಉಮೇ​ದಿ​ನ​ಲ್ಲಿ​ರುವ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಮತ್ತು ಅವರ ಸಹೋದರ ಸಂಸದ ಡಿ.ಕೆ.​ಸು​ರೇಶ್‌ (DK Suresh) ವಿಧಾ​ನ​ಸಭೆ ಚುನಾ​ವಣೆ ವೇಳೆಗೆ ಕಾಂಗ್ರೆಸ್‌ ಪಕ್ಷ​ವನ್ನು ಮತ್ತಷ್ಟುಬಲಪಡಿ​ಸಿ ಪಾರಮ್ಯ ಮೆರೆ​ಯಲು ಮುಂದಾ​ಗಿ​ದ್ದಾರೆ.

ಕಳೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಹೊಸಕೋಟೆ (Hosakote) ಕ್ಷೇತ್ರದಿಂದ ಪಕ್ಷೇತರಾಗಿ ಆಯ್ಕೆಯಾದ ಶರತ್‌ ಬಚ್ಚೇಗೌಡ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಕಾಂಗ್ರೆಸ್‌ (Congress), ಬೆಂಗ​ಳೂರು ಗ್ರಾಮಾಂತರ (Bengaluru Rural) ಮತ್ತು ರಾಮ​ನ​ಗ​ರ (Ramanagar)​ ಜಿಲ್ಲೆ​ಗ​ಳ ಮತ್ತಷ್ಟು ಕ್ಷೇತ್ರಗಳಲ್ಲಿ ಬಿಜೆಪಿ (BJP) ಮತ್ತು ಜೆಡಿಎಸ್‌ನಿಂದ (JDS) ಮತ್ತಷ್ಟು ನಾಯ​ಕ​ರನ್ನು ತನ್ನತ್ತ ಸೆಳೆದುಕೊಳ್ಳಲು ಹವಣಿಸುತ್ತಿದೆ.

ಈಗ ಬಿಜೆಪಿ (BJP) ನಾಯಕ ಮಾಜಿ ಸಚಿವ ಸಿ.ಪಿ.​ಯೋ​ಗೇಶ್ವರ್‌ (CP Yogeshwar) ಹಾಗೂ ಕೆಎಂಎಫ್‌ (KMF) ಮಾಜಿ ಅಧ್ಯ​ಕ್ಷ​ರಾದ ಜೆಡಿ​ಎಸ್‌ (JDS) ಮುಖಂಡ ಪಿ.ನಾ​ಗ​ರಾಜು ಸೇರಿ​ದಂತೆ ಕೆಲ ಪ್ರಮು​ಖರು ಕಾಂಗ್ರೆಸ್‌ ಸೇರ್ಪ​ಡೆ​ಯಾ​ಗುವ ಚರ್ಚೆ​ಗಳು ನಡೆ​ಯು​ತ್ತಿದೆ. ಈ ಇಬ್ಬರು ನಾಯ​ಕ​ರಿಗೆ ಪಕ್ಷಾಂತರ ಹೊಸ​ದೇ​ನಲ್ಲ. ಆದರೂ, ಸೂಕ್ತ ಸಮ​ಯ​ಕ್ಕಾಗಿ ಕಾದು ಕುಳಿ​ತಿ​ದ್ದಾ​ರೆ.

ಕಳೆದ ವಿಧಾನಸಭಾ ಚುನಾ​ವಣೆ ವೇಳೆಗೆ ಪಿ.ನಾ​ಗ​ರಾಜು ಕಾಂಗ್ರೆಸ್‌ ತೆರೆದು ಜೆಡಿ​ಎಸ್‌ ಸೇರ್ಪ​ಡೆ​ಯಾ​ಗಿದ್ದರು. ಪ್ರತಿ ಚುನಾ​ವಣೆ ಸಂದ​ರ್ಭ​ದ​ಲ್ಲಿಯೂ ತಮ್ಮ ಅನು​ಕೂ​ಲಕ್ಕೆ ತಕ್ಕಂತೆ ಪಕ್ಷಾಂತರ ಮಾಡು​ವು​ದನ್ನು ಹವ್ಯಾಸ ಮಾಡಿಕೊಂಡಿ​ದ್ದಾರೆ. ಮೂರು ಪಕ್ಷ​ಗಳಲ್ಲು ತಿರು​ಗಾಡಿ ಬಂದಿ​ರುವ ಪಿ.ನಾ​ಗ​ರಾಜು ಸದ್ಯಕ್ಕೆ ಕೈ ಪಾಳಯ ಸೇರಲು ತುದಿ​ಗಾ​ಲಲ್ಲಿ ನಿಂತಿ​ದ್ದಾ​ರೆ.

ಸಿಪಿವೈ ಕೈ ಸೇರ್ಪಡೆ ಸುಳಿವು:

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಚುನಾಯಿತರಾದ ವಿಧಾನ ಪರಿಷತ್‌ (Council) ಸದಸ್ಯ ಎಸ್‌ .ರವಿರವರು ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್‌ (DK Shivakumar) ನೇತೃತ್ವದಲ್ಲಿ ಬೀದರ್‌ನಿಂದ ಮಡಿಕೇರಿವರೆಗೂ ಸಾಕಷ್ಟುಮಂದಿ ಕಾಂಗ್ರೆಸ್‌ ಪಕ್ಷಕ್ಕೆ ಬರಲಿದ್ದಾರೆ ಎನ್ನುವ ಸುಳಿವು ನೀಡಿದರು. ಈ ವೇಳೆ ಹಾಲಿ ವಿಧಾನ ಪರಿಷತ್‌ ಸದಸ್ಯ, ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್‌ ಜೆಡಿಎಸ್‌ಗೆ (JDS) ವಿರೋಧಿಯಾಗಿರುವುದರಿಂದ ನಮಗೆ ಬೆಂಬಲ ನೀಡಿರಬಹುದು ಎನ್ನುವ ರವಿಯವರ ತೇಲಿಕೆ ಮಾತು ಈಗ ಯೋಗೇಶ್ವರ್‌ ಕಾಂಗ್ರೆಸ್ಸಿನತ್ತ ಮುಖ ಮಾಡಿದ್ದಾರೆಯೇ ಎನ್ನುವ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ಇದಕ್ಕೆ ಕಾರಣವಾಗಿರುವುದು ಚನ್ನಪಟ್ಟಣದಲ್ಲಿ 150ಕ್ಕೂ ಹೆಚ್ಚು ಮಂದಿ ಸ್ಥಳೀಯ ಸಂಸ್ಥೆಗಳಿಂದ ಬಿಜೆಪಿ ಬೆಂಬಲಿತರಾಗಿ ಆಯ್ಕೆಯಾಗಿದ್ದರೂ ಒಟ್ಟಾರೆ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿಗೆ ಇಡೀ ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಬಿದ್ದಿರುವ ಮತಗಳ ಸಂಖ್ಯೆ 54 ಮಾತ್ರ. ಬದಲಿಗೆ ಈ ಮತಗಳು ಕಾಂಗ್ರೆಸ್‌ ಗೆ ವರ್ಗಾವಣೆಯಾಗಿವೆ. ಸ್ವತಃ ರವಿಯಯವರೇ ನನಗೆ ಚನ್ನಪಟ್ಟಣದಲ್ಲಿ ಬೆಜೆಪಿ ಸದಸ್ಯರು ಮತ ಹಾಕಿದ್ದಾರೆ ಎಂದು ಹೇಳಿರುವುದು ಇದಕ್ಕೆ ಮತ್ತಷ್ಟುಪುರಾವೆ ಒದಗಿಸಿದಂತಾಗಿದೆ.

ಸೈನಿಕನ ಜಾಣ ಮೌನ: ಬದಲಾದ ರಾಜಕೀಯ ಸನ್ನಿವೇಶದಲ್ಲಿ ಯಡಿಯೂರಪ್ಪ (Yediyurappa) ಅಧಿಕಾರದಿಂದ ಕೆಳಕ್ಕಿಳಿದು ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರ ಅಸ್ತಿತ್ವಕ್ಕೆ ಬಂ​ದಿತು. ಆದರೆ, ಯಡಿಯೂರಪ್ಪ ಅವರ ಅವಕೃಪೆಗೆ ಒಳಗಾದ ಯೋಗೇಶ್ವರ್‌ ಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ. ಅಲ್ಲಿಯವರೆಗೂ ಕುಮಾರಸ್ವಾಮಿ ಮತ್ತು ಡಿಕೆಶಿ ಬ್ರದರ್ಸ್‌ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದರು. ಆದ​ರೀಗ ಯೋಗೇ​ಶ್ವರ್‌ ರವರು ಕುಮಾರಸ್ವಾಮಿ ಮೇಲೆ ವಾಗ್ದಾಳಿ ಮುಂದೂವರೆಸಿದರು ಡಿಕೆ ಸಹೋ​ದ​ರರ ವಿರುದ್ಧ ಮಾತನಾಡುವಾಗ ಮೆದುವಾಗಿದ್ದಾರೆ ಎನ್ನುವ ಮಾತುಗಳು ಕ್ಷೇತ್ರ ವ್ಯಾಪ್ತಿಯಲ್ಲಿ ಕೇಳಿ ಬರುತ್ತಿದೆ.