* ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ವಿಚಾರವಾಗಿ ಮತ್ತೆ ಶುರುವಾಯ್ತು ಚರ್ಚೆ* ರಾಜ್ಯ ಕಾಂಗ್ರೆಸ್ ಯುವ ಘಟಕದಲ್ಲೂ ಶುರುವಾಯ್ತು ಅಂತರ್ ಯುದ್ಧ* ನಲಪಾಡ್ ಹೇಳಿಕೆಗೆ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ ತಿರುಗೇಟು

ಮೈಸೂರು, (ಜುಲೈ.07): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ 'ನಮ್ಮ ಮುಂದಿನ ಮುಖ್ಯಮಂತ್ರಿ' ಎಂದು ಹೇಳಿರುವ ಕಾಂಗ್ರೆಸ್​ನ ಯುವ ನಾಯಕ ಮೊಹಮ್ಮದ್ ನಲಪಾಡ್​​ಗೆ ಯೂತ್ ಕಾಂಗ್ರೆಸ್​ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ ತಿರುಗೇಟು ನೀಡಿದ್ದಾರೆ.

ಮೈಸೂರುನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಕ್ಷಾ ರಾಮಯ್ಯ.. ಯೂತ್​ ಕಾಂಗ್ರೆಸ್​ ಕೆಲಸ ಯಾರು ಪಿಎಂ ಆಗ್ತಾರೆ? ಯಾರು ಸಿಎಂ ಆಗ್ತಾರೆ ಎಂದು ಹೇಳೋದಲ್ಲ. ಬ್ಲಾಕ್ ಮಟ್ಟದಿಂದ ಪಕ್ಷವನ್ನ ಸಂಘಟಿಸೊದು ನಮ್ಮ ಕೆಲಸ. ಮೊದಲು ಅದನ್ನ ಸರಿಯಾಗಿ ಮಾಡೋಣ. ಈ ರೀತಿ ಮುಂದಿನ ಸಿಎಂ ವಿಚಾರವಾಗಿ ಹೇಳಿಕೆ ನೀಡುವವರ ವಿರುದ್ಧ ಪಕ್ಷದ ಹಿರಿಯರು ಕ್ರಮ ತೆಗೆದುಕೊಳ್ಳುತ್ತಾರೆ ನಲಪಾಡ್‌ಗೆ ಟಾಂಗ್ ಕೊಟ್ಟರು.

ಮೇಲಿಂದ ಬಂತು ಆದೇಶ: ಕೊನೆಗೂ ಬಗೆಹರಿದ ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ

ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ಅಂತರ್ ಯುದ್ಧವೇ ನಡೆಯುತ್ತಿದೆ. 

ಇದರ ಮಧ್ಯೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಯು ಘಟಕದಲ್ಲೂ ಭುಗಿಲೆದ್ದಿದ್ದು, ಅಧ್ಯಕ್ಷ ರಕ್ಷಾ ರಾಮಯ್ಯ ಹಾಗೂ ನಲಪಾಡ್ ನಡುವೆ ಶೀತಲ ಸಮರ ಶುರುವಾಗಿದೆ.