ರಕ್ಷಣಾ ಸಚಿವರ ಬಾಯಲ್ಲಿ ಪುಷ್ಪಾ ಚಿತ್ರದ ಡೈಲಾಗ್ಪುಷ್ಕರ್ ಸಿಂಗ್ ಧಾಮಿಗೆ ಪುಷ್ಪಾ ಚಿತ್ರದ ಡೈಲಾಗ್ ನ ಟ್ವಿಸ್ಟ್ ಮಾಡಿದ ರಾಜನಾಥ್ ಸಿಂಗ್ಉತ್ತರಾಂಖಡದಲ್ಲಿ ಬಿಜೆಪಿಯ ಬಿರುಸಿನ ಪ್ರಚಾರ

ಡೆಹ್ರಾಡೂನ್ (ಫೆ. 8): ದಕ್ಷಿಣ ಭಾರತದ ಖ್ಯಾತ ನಟ ಅಲ್ಲು ಅರ್ಜುನ್ (Allu Arjun) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಚಿತ್ರ ಪುಷ್ಪಾ (Pushpa) ಈಗಾಗಲೇ ಚಿತ್ರಮಂದಿರಗಳ್ಲಿ ಕ್ರೇಜ್ ಹುಟ್ಟಿಸಿಯಾಗಿದೆ. ಅಲ್ಲು ಅರ್ಜುನ್ ಅವರ ಯಶಸ್ವಿ ಚಿತ್ರಗಳ ಸಾಲಿಗೆ ಸೇರಿರುವ ಪುಷ್ಪಾ ಚಿತ್ರದ ಡೈಲಾಗ್ ಗಳು ಈಗಾಗಲೇ ಜನಪ್ರಿಯಗೊಂಡಿವೆ. ಅದರಲ್ಲೂ, ಅಲ್ಲು ಅರ್ಜುನ್ ಹೇಳುವ, "ಪುಷ್ಪಾ ಅಂದ್ರೆ ಫ್ಲವರ್ ಅಂದುಕೊಂಡ್ರಾ, ಫೈರ್" ಎನ್ನುವ ಡೈಲಾಗ್ ಗೆ ಡೇವಿಡ್ ವಾರ್ನರ್, ರವೀಂದ್ರ ಜಡೇಜಾ ಸೇರಿದಂತೆ ಹಲವರು ಇನ್ಸ್ ಟಾಗ್ರಾಮ್ ರೀಲ್ ಕೂಡ ಮಾಡಿದ್ದಾರೆ. ಇಂಥ ಕ್ರೇಜ್ ಹುಟ್ಟಿಸಿರುವ ಡೈಲಾಗ್ ಮಂಗಳವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರಿಂದಲೂ ಬಂದಿದೆ. ಆದರೆ, ಇದನ್ನು ಸಖತ್ ಟ್ವಿಸ್ಟ್ ಮಾಡಿ ಹೇಳಿದ ಅವರ ಜಾಣ್ಮೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಉತ್ತರಾಂಖಡದ ವಿಧಾನಸಭೆ ಚುನಾವಣೆಗೆ (Uttarakhand Election) ಪ್ರಚಾರದಲ್ಲಿರುವ ರಾಜನಾಥ್ ಸಿಂಗ್ ಮಂಗಳವಾರ ಗಂಗೊಳ್ಳಿಹತ್ ನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಪುಷ್ಪಾ ಚಿತ್ರದ ಜನಪ್ರಿಯ ಡೈಲಾಗ್ ಅನ್ನು ಉತ್ತಾರಂಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಗೆ (Uttarakhand CM Pushkar Singh Dhami) ಕನೆಕ್ಟ್ ಮಾಡಿ ವಿಶೇಷ ರೀತಿಯಲ್ಲಿ ಹೇಳಿದರು.

"ಇತ್ತೀಚಿನ ದಿನಗಳಲ್ಲಿ ಪುಷ್ಪಾ ಚಿತ್ರದ ಹೆಸರು ಸುದ್ದಿಯಲ್ಲಿದೆ ಮತ್ತು ನಮ್ಮ ಮುಖ್ಯಮಂತ್ರಿ ಹೆಸರು ಪುಷ್ಕರ್, ಆದರೆ ಈ ಪುಷ್ಕರ್ ಹೆಸರು ಕೇಳಿದಾಗ ಕಾಂಗ್ರೆಸ್ಸಿಗರಿಗೆ ಈ ಪುಷ್ಕರ್ ಹೂವು ಎಂದು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ನಾನು ಅವರಿಗೆ ಹೇಳಲು ಬಯಸುತ್ತೇನೆ ನಮ್ಮ ಪುಷ್ಕರವೂ ಒಂದು ಹೂವು ಕೂಡ ಹೌದು ಬೆಂಕಿ ಕೂಡ ಹೌದು. ನಮ್ಮ ಪುಷ್ಕರ್ ಎಂದಿಗೂ ತಲೆಬಾಗುವುದಿಲ್ಲ, ಎಂದಿಗೂ ನಿಲ್ಲುವುದಿಲ್ಲ" ಎಂದು ಹೇಳಿದ್ದಾರೆ.

5 States Election: ಉತ್ತರಾಖಂಡದಲ್ಲಿ ಬಿಜೆಪಿ 60 ಕ್ಕೂ ಹೆಚ್ಚು ಸ್ಥಾನ: ಪ್ರಹ್ಲಾದ್‌ ಜೋಶಿ ವಿಶ್ವಾಸ
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ''ಈ ಹಂತದಲ್ಲಿ ನಾನು ಕಾಂಗ್ರೆಸ್ ಬಗ್ಗೆ ಮಾತನಾಡಲು ಇಷ್ಟಪಡುತ್ತೇನೆ. ಅವರಿಗೆ ಯಾವುದೇ ಪಾಲಿಸಿಗಳಿಲ್ಲ. ಯಾವುದರಲ್ಲೂ ನಂಬಿಕೆಯಿಲ್ಲ. ಒಂದು ಅಭಿವೃದ್ಧಿ ಕೆಲಸವನ್ನು ಗಡಿಯೊಳಗೆ ಮುಗಿಸುವಂಥ ಇರಾದೆಗಳು ಅವರಲ್ಲಿಲ್ಲ. ರಾಜ್ಯ ಹಾಗೂ ದೇಶವನ್ನು ಲೂಟಿ ಮಾಡಿದ್ದು ಕಾಂಗ್ರೆಸ್ ನ ಸಾಧನೆ. ಅವರಿಗೆ ಉತ್ತರಾಖಂಡ ಇನ್ನು ಮುಂದೆ ತಲೆಬಾಗಬೇಕಿಲ್ಲ. ಉತ್ತರಾಖಂಡದಲ್ಲಿ ಕಾಂಗ್ರೆಸ್ ನ ಸ್ಥಿತಿ ಹೇಗಿದೆಯೆಂದರೆ, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡುವ ಸ್ಥಿತಿಯಲ್ಲಿಲ್ಲ. ಮುಂದೇನಾಗುವುದೋ ಎನ್ನುವ ಭಯದಲ್ಲಿ ನಾಯಕನನ್ನು ಘೋಷಣೆ ಮಾಡಿಲ್ಲ' ಎಂದ ರಾಜನಾಥ ಸಿಂಗ್, ಇಂದು ಅವರ ಮನೆಗಳಿಗೆ ಬೆಂಕಿ ಬಿದ್ದಿದೆ ಎಂದು ಹೇಳಿದ್ದಾರೆ.

Uttarakhand Politics: ಸಂಚಲನ ಮೂಡಿಸಿದೆ ಕೈ ನಾಯಕ ಹರೀಶ್ ರಾವತ್ ಹೇಳಿಕೆ!
ಜನಸಂಘದಿಂದ ಬಿಜೆಪಿಗೆ ಪ್ರಯಾಣದ ಕುರಿತು ಮಾತನಾಡಿದ ರಾಜನಾಥ್ ಸಿಂಗ್, ಬಹುಮತದೊಂದಿಗೆ ಸರ್ಕಾರ ರಚನೆಯಾದ ತಕ್ಷಣ ನಾವು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕುತ್ತೇವೆ ಮತ್ತು ರಾಮಮಂದಿರವನ್ನು ನಿರ್ಮಿಸುತ್ತೇವೆ ಎಂದು ದೇಶದ ಜನರಿಗೆ ಭರವಸೆ ನೀಡಿದ್ದೆವು. ಇಂದು 370 ನೇ ವಿಧಿಯನ್ನು ತೆಗೆದುಹಾಕಲಾಗಿದೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿ ಸಂಪೂರ್ಣವಾಗಿ ಭ್ರಷ್ಟಾಚಾರ ಬೇರು ಬಿಟ್ಟಿತ್ತು ಎಂದ ಅವರು, ಈಗ ಭ್ರಷ್ಟಾಚಾರ ಮುಗಿದಿದೆ. ರೈತರಿಗೆ ಸಮ್ಮಾನ್ ನಿಧಿ ಸಿಗುತ್ತಿದೆ. ನೀವು ದೆಹಲಿಯಿಂದ 100 ಪೈಸೆಯನ್ನು ಸ್ಥಳಾಂತರಿಸಿದರೆ, ಅದು ನೇರವಾಗಿ ನಿಮ್ಮ ಖಾತೆಯನ್ನು ತಲುಪುತ್ತದೆ. ಇಂದಿನ ಭಾರತ ಬಲಿಷ್ಠ ಭಾರತವಾಗಿದೆ ಎಂದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಒಂದು ವರ್ಷದೊಳಗೆ ಕೇಂದ್ರದ ಮೋದಿ ಸರ್ಕಾರ ಉತ್ತರಾಖಂಡದಲ್ಲಿ ರಾಜ್ಯಕ್ಕಾಗಿ ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿದೆ ಎಂದು ಹೇಳಿದರು. ಉತ್ತರಾಖಂಡದ ಜನರ ನಂಬಿಕೆಯನ್ನು ಬಿಜೆಪಿ ಎಂದಿಗೂ ಮುರಿಯಲು ಬಿಡುವುದಿಲ್ಲ. ತಮ್ಮ ಭಾಷಣದಲ್ಲಿ ಹರೀಶ್ ರಾವತ್ ವಿರುದ್ಧವೂ ರಾಜನಾಥ್ ಸಿಂಗ್ ಕಿಡಿಕಾರಿದರು. ನಮ್ಮ ಯಾವೊಬ್ಬ ಸಚಿವರೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದರು.