Asianet Suvarna News Asianet Suvarna News

ಮಾಯಾವತಿಗೆ ಯುಪಿ ಮುಖ್ಯಮಂತ್ರಿಯಾಗುವ ಅಫರ್ ನೀಡಿದ್ದೆವು, ಆಕೆ ಕನಿಷ್ಠ ಮಾತನ್ನೂ ಆಡಲಿಲ್ಲ!

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರಕ್ಕೆ ಸಂಪೂರ್ಣ ಬಹುಮತ ಸಿಗಲು ಮಾಯಾವತಿಯೇ ಕಾರಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳುವ ಆಫರ್ ಅನ್ನೂ ಆಕೆಗೆ ನೀಡಿದ್ದೆವು ಎಂದು ತಿಳಿಸಿದ್ದಾರೆ.

Rahul Gandhi says Congress offered Uttar Pradesh CM post to Mayawati but she did not even talk to us san
Author
Bengaluru, First Published Apr 9, 2022, 10:29 PM IST

ನವದೆಹಲಿ (ಏ.9): ಇತ್ತೀಚೆಗೆ ಮುಕ್ತಾಯಗೊಂಡ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ( Uttar Pradesh Assembly elections) ಒಟ್ಟಾಗಿ ಹೋರಾಡಲು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ (Mayawati) ಅವರಿಗೆ ತಮ್ಮ ಪಕ್ಷವು ಪ್ರಸ್ತಾಪಿಸಿತ್ತು, ಮೈತ್ರಿಯ ಆಫರ್ ಅನ್ನು ನೀಡಿದ್ದೆವು. ಹಾಗೇನಾದರೂ ಮೈತ್ರಿಕೂಟ ಬಹುಮತ ಪಡೆದುಕೊಂಡಲ್ಲಿ ಮುಖ್ಯಮಂತ್ರಿ ಸ್ಥಾನದ ಆಫರ್ ಅನ್ನೂ ಅವರಿಗೆ ನೀಡಿದ್ದೆವು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.

ಇಷ್ಟೆಲ್ಲವನ್ನೂ ಹೇಳಿದ ಹೊರತಾಗಿಯೂ ಆಕೆ ನಮ್ಮೊಂದಿಗೆ ಕನಿಷ್ಠ ಪಕ್ಷ ಮಾತನಾಡಲೂ ಇಲ್ಲ ಎಂದು ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ. ಮಾಯಾವತಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದ  ರಾಹುಲ್ ಗಾಂಧಿ ಅವರು ಯುಪಿಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) "ಸಿಬಿಐ, ಇಡಿ ಮತ್ತು ಪೆಗಾಸಸ್" ಕಾರಣದಿಂದ ಸ್ಪಷ್ಟವಾದ ಬಹುಮತವನ್ನು ನೀಡಲು ಸಹಾಯ ಮಾಡಿದರು ಎಂದು ಆರೋಪಿಸಿದ್ದಾರೆ.

"ನಾವು ಮಾಯಾವತಿ ಅವರಿಗೆ ಮೈತ್ರಿ ಮಾಡಿಕೊಳ್ಳುವಂತೆ ಸಂದೇಶ ನೀಡಿದ್ದೆವು ಮತ್ತು ಹಾಗೇನಾದರೂ ಬಹುಮತ ಬಂದಲ್ಲಿ, ನೀವೇ ಮುಖ್ಯಮಂತ್ರಿಯಾಗಿ ಎಂದೂ ಹೇಳಿದ್ದೆವು. ಇಷ್ಟೆಲ್ಲ ಹೇಳಿದ ಹೊರತಾಗಿಯೂ ಅವರು ಕನಿಷ್ಠ ಪಕ್ಷ ನಮ್ಮೊಂದಿಗೆ ಮಾತನ್ನೂ ಅಡಲಿಲ್ಲ' ಎಂದು ರಾಹುಲ್ ಗಾಂಧಿ ಹೇಳಿದ್ದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಆ ಹಂತದಲ್ಲಿ ಕಾಂಗ್ರೆಸ್‌ನ ಮೇಲೆ ಪರಿಣಾಮ ಬೀರಿದ್ದರೂ, ಉತ್ತರ ಪ್ರದೇಶದ ದಲಿತ ಧ್ವನಿಯನ್ನು (Dalit voice ) ವ್ಯಕ್ತಪಡಿಸಿದ್ದಕ್ಕಾಗಿ ಬಿಎಸ್‌ಪಿ ಅಗ್ರ ನಾಯಕ ಕಾಂಶಿರಾಮ್ (Kanshi Ram ) ಅವರನ್ನು ಗೌರವಿಸುತ್ತೇನೆ ಎಂದು ವಯ್ನಾಡ್ ಸಂಸದ ಹೇಳಿದ್ದಾರೆ. "ಆದರೆ ನಾನು ಅದಕ್ಕಾಗಿ ಹೋರಾಡುವುದಿಲ್ಲ ಎಂದು ಮಾಯಾವತಿಜಿ ಹೇಳುತ್ತಿದ್ದಾರೆ. ಅವರು ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸ್ಪಷ್ಟವಾದ ಮಾರ್ಗವನ್ನು ನೀಡಿದರು. ಯಾಕೆಂದರೆ, ಸಿಬಿಐ, ಇಡಿ ಮತ್ತು ಪೆಗಾಸಸ್ ಕಾರಣದಿಂದಾಗಿ ಅವರು ಈ ಬೆಂಬಲವನ್ನು ನೀಡಿದರು' ಎಂದು ರಾಹುಲ್ ಆರೋಪಿಸಿದ್ದಾರೆ.

ಅಧಿಕಾರದ ಕೇಂದ್ರದಲ್ಲಿ ಹುಟ್ಟಿದ್ದರೂ  ನನಗೆ ಅದರಲ್ಲಿ ಆಸಕ್ತಿ ಇಲ್ಲ ಎಂದೂ ರಾಹುಲ್ ಗಾಂಧಿ ಹೇಳಿದ್ದಾರೆ.  'ಅವರು ಅಧಿಕಾರದ ಅನ್ವೇಷಣೆಯಲ್ಲಿರುವ ರಾಜಕಾರಣಿಗಳು. ಅವರು ಪೂರ್ತಿಯಾಗಿ ಅಧಿಕಾರವನ್ನು ಪಡೆಯುವ ಬಗ್ಗೆ ಯೋಚಿಸುತ್ತಾರೆ. ಆದರೆ, ನಾನು ಅಧಿಕಾರದ ಕೇಂದ್ರದಲ್ಲಿ ಹುಟ್ಟಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೆ ಅದರಲ್ಲಿ ಆಸಕ್ತಿಯೇ ಇಲ್ಲ. ಬದಲಾಗಿ, ನಾನು ದೇಶವನ್ನು ಅರ್ಥಮಾಡಿಕೊಳ್ಳಲು ಬಯಸಿದ್ದೇನೆ' ಎಂದು ಹೇಳಿದ್ದಾರೆ.

ಕೊನೆಗೂ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಪ್ರಕಟ, 3 ವರ್ಷಗಳ ಬಳಿಕ ಡಿಕೆಶಿ ಲಿಸ್ಟ್‌ಗೆ AICC ಮುದ್ರೆ

ದೆಹಲಿಯಲ್ಲಿ ನಡೆದ 'ದಲಿತ ಸತ್ಯ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿ ಆರ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರು ತೋರಿಸಿದ ಹಾದಿಯಲ್ಲಿ ನಡೆಯುವ ಮೂಲಕ ದಲಿತರು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು ಎಂದು ಸಲಹೆ ನೀಡಿದರು. 'ಇದು ಭಾರತದ ವಾಸ್ತವ. ಮತ್ತು ಸಂವಿಧಾನವು (constitution) ನಿಷ್ಕ್ರೀಯವಾದಾಗ ದುರ್ಬಲರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು, ನಿರುದ್ಯೋಗಿಗಳು, ಸಣ್ಣ ರೈತರು ಮತ್ತು ಬಡವರು ಇದರ ಪರಿಣಾಮ ಎದುರಿಸುತ್ತಾರೆ' ಎಂದು ಅವರು ಹೇಳಿದರು.

ಬಿಜೆಪಿ ಸೇರುವ ಬಗ್ಗೆ ಸ್ಪಷ್ಟ ನಿರ್ಧಾರ ಮಾಡಿಲ್ಲ ಎಂದ ಹೊರಟ್ಟಿ

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳ್ಲಿ ಕಾಂಗ್ರೆಸ್ ಕೇವಲ ಎರಡು ಸ್ಥಾನಗಳನ್ನು ಗೆದ್ದಿದ್ದರೆ, ಶೇ. 2.5 ಕ್ಕಿಂತ ಕಡಿಮೆ ಮತಗಳನ್ನು ಗಳಿಸಿತು, ಇನ್ನೊಂದೆಡೆ ಆಡಳಿತಾರೂಢ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಶೇ.97 ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ಭದ್ರತಾ ಠೇವಣಿಯನ್ನೂ ಸಹ ಕಳೆದುಕೊಂಡಿದ್ದಾರೆ. ಇನ್ನೊಂದೆಡೆ ಬಿಎಸ್ ಪಿ ಕೇವಲ ಒಂದು ಸ್ಥಾನವನ್ನು ಗೆದ್ದಿದ್ದರೆ, ಶೇ. 13 ಮತಗಳನ್ನು ಗಳಿಸಿತು. ಚುನಾವಣೆಯಲ್ಲಿ ಅದರ ಸುಮಾರು ಶೇ. 72 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು. ಈ ಬಾರಿಯ ಉತ್ತರ ಪ್ರದೇಶ ಚುನಾವಣೆ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವಿನ ಮುಖಾಮುಖಿಯಾಗಿ ಮಾತ್ರವೇ ಏರ್ಪಟ್ಟಿತ್ತು.

Follow Us:
Download App:
  • android
  • ios