Asianet Suvarna News Asianet Suvarna News

ಸ್ವಾಮೀಜಿ ಹೆಗಲ ಮೇಲೆ ಆರ್.ಅಶೋಕ್ ಕೈ; ಕಾಂಗ್ರೆಸ್-ಬಿಜೆಪಿ ನಡುವೆ ಟ್ವೀಟ್‌ ವಾರ್!

ಕೆಂಪೇಗೌಡರ ಪ್ರತಿಮೆ ಅನಾವರಣ ಸಮಯದಲ್ಲಿ ಫೋಟೊ ತೆಗೆಯುವ ವೇಳೆ ನಿರ್ಮಲಾನಂದ ಶ್ರೀಗಳ ಹೆಗಲ ಮೇಲೆ ಕೈ ಹಾಕಿ ಫೋಟೊಗೆ ಪೋಸ್ ಕೊಟ್ಟಿರುವ ಕಂದಾಯ ಆರ್.ಅಶೋಕ್. ಈ ಫೋಟೊ ಎಲ್ಲೆಡೆ ವೈರಲ್ ಆಗಿದೆ.  ಈ ಫೋಟೊವನ್ನು ಬಳಸಿಕೊಂಡು ಟ್ವಿಟ್ ಮಾಡುವ ಮೂಲಕ ಆರ್.ಅಶೋಕ್ ವಿರುದ್ಧ ಕರ್ನಾಟಕ ಕಾಂಗ್ರೆಸ್ ಹರಿಹಾಯ್ದಿದಿದ್ದಾರೆ.

R Ashoks hand on Swamijis shoulder Tweet war between Congress-BJP rav
Author
First Published Nov 11, 2022, 10:56 PM IST

ಬೆಂಗಳೂರು (ನ.11) : ಮಠಾಧೀಶರು ಸ್ವಾಮೀಜಿಗಳಿಗೆ ಅವರದ್ದೇ ಆದ ಗೌರವವಿರುತ್ತದೆ. ಘನತೆ ಇರುತ್ತದೆ. ಹೆಗಲ ಮೇಲೆ ಕೈ ಹಾಕುವಷ್ಟು ಆದಿಚುಂಚನಗಿರಿ ಶ್ರೀಗಳು ಸಚಿವ ಆರ್.ಅಶೋಕ್ ಅವರಿಗೆ ಸದರ ಎನಿಸಿದ್ದಾರೆಯೇ? ಇದೇ ರೀತಿ ಮೋದಿ ಹೆಗಲಿಗೆ ಕೈ ಹಾಕುವ ಧೈರ್ಯವಿದೆಯೇ? ನಿರ್ಮಾಲಾನಂದಶ್ರೀಗಳ ಹೆಗಲ ಮೇಲೆ ಕೈಹಾಕಿ ಅವಮಾನ ಮಾಡಿರುವ ಹಿನ್ನೆಲೆ ಸಚಿವ ಆರ್.ಅಶೋಕ್ ವಿರುದ್ಧ ಕಾಂಗ್ರೆಸ್ ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದೆ.

ಧರ್ಮ, ಸಂಸ್ಕೃತಿ ಬಗ್ಗೆ ಮಾತಾಡುವ ಬಿಜೆಪಿ ನಾಯಕರಿಗೆ ಕನಿಷ್ಠ ಸಂಸ್ಕಾರದ ಜ್ಞಾನವಿಲ್ಲ. ಬರೀ ಮಾತಿನಲ್ಲೇ ದೇಶ, ಸಂಸ್ಕೃತಿ ಬಗ್ಗೆ ಮಾತನಾಡುವ ಇವರು. ವಾಸ್ತವವಾಗಿ ಅದ್ಯಾವುದನ್ನೂ ಪಾಲಿಸುವುದಿಲ್ಲ ಎಂಬುದು ಈ ಘಟನೆ ಸಾಕ್ಷಿ ಎಂದು ಕಿಡಿ ಕಾರಿದ್ದಾರೆ.

ಕೆಂಪೇಗೌಡರ ಪ್ರತಿಮೆ ಅನಾವರಣ ಸಮಯದಲ್ಲಿ ಫೋಟೊ ತೆಗೆಯುವ ವೇಳೆ ನಿರ್ಮಲಾನಂದ ಶ್ರೀಗಳ ಹೆಗಲ ಮೇಲೆ ಕೈ ಹಾಕಿ ಫೋಟೊಗೆ ಪೋಸ್ ಕೊಟ್ಟಿರುವ ಕಂದಾಯ ಆರ್.ಅಶೋಕ್. ಈ ಫೋಟೊ ಎಲ್ಲೆಡೆ ವೈರಲ್ ಆಗಿದೆ.  ಈ ಫೋಟೊವನ್ನು ಬಳಸಿಕೊಂಡು ಟ್ವಿಟ್ ಮಾಡುವ ಮೂಲಕ ಆರ್.ಅಶೋಕ್ ವಿರುದ್ಧ ಕರ್ನಾಟಕ ಕಾಂಗ್ರೆಸ್ ಹಾರಿಹಾಯ್ದಿದೆ.

ಬಿಜೆಪಿ ಕಾಂಗ್ರೆಸ್ ನಡುವೆ ಟ್ವಿಟ್ ವಾರ್: 

ಕರ್ನಾಟಕ ಕಾಂಗ್ರೆಸ್ ಆರ್.ಅಶೋಕ್ ವಿರುದ್ಧ ಟ್ವೀಟ್ ಮಾಡ್ತಿದ್ದಂತೆ, ರಾಹುಲ್ ಗಾಂಧಿ, ಉಗ್ರಪ್ಪನ ಫೋಟೋ ವೈರಲ್ ಮಾಡಿ ಬಿಜೆಪಿ ತಿರುಗೇಟು ನೀಡಿದೆ.

ಆರ್‌.ಅಶೋಕ್ ಫೋಟೊ ವೈರಲ್ ಬೆನ್ನಲ್ಲೇ ಕಾಂಗ್ರೆಸ್ ನ ಮಾಜಿ ಸಂಸದ ಉಗ್ರಪ್ಪ ಈ ಹಿಂದೆ ಮೀಸಲಾತಿ ಹೋರಾಟ ಕಾರ್ಯಕ್ರಮದಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೆಗಲ ಮೇಲೆ ಕೈ ಇಟ್ಟು ಮಾತನಾಡುತ್ತಿರುವ ಫೋಟೊ ಹಾಕಿ ಬಿಜೆಪಿ ತಿರುಗೇಟು ನೀಡಿದೆ.

ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ ಚಿತ್ರದುರ್ಗ ಮಠಾಧೀಶರೊಂದಿಗೆ ಕುರ್ಚಿಯಲ್ಲಿ ಕುಳಿತಿದ್ದ ಫೋಟೊ ಕೂಡ ವೈರಲ್ ಮಾಡಿರುವ ಬಿಜೆಪಿ ಬೆಂಬಲಿಗರು, ಆ ಫೋಟೊದಲ್ಲಿ ಕೆಲವು ಸ್ವಾಮೀಜಿಗಳು ರಾಹುಲ್ ಗಾಂಧಿಯ ಕಾಲಿನ ಕೆಳಗೆ ಕುಳಿತಿದ್ದಾರೆ. "ಇದು ನಿಮ್ಮ ಯುವಕ ರಾಹುಲ್ ಗಾಂಧಿ ಸ್ವಾಮೀಜಿಗಳಿಗೆ ಮಾಡಿದ ಅವಮಾನ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ. 

ಕಾಂಗ್ರೆಸ್‌ಗೆ ಮಾಡುವುದಕ್ಕೆ ಏನೂ ಕೆಲಸವಿಲ್ಲದೆ ಖಾಲಿ ಕುಳಿತಿದೆ. ಹೀಗಾಗಿ ಇಂಥ ಕ್ಷುಲ್ಲಕ ವಿಚಾರಗಳನ್ನಿಟ್ಟುಕೊಂಡು ರಾಜಕೀಯ ಮಾಡ್ತಿದೆ ಎಂದಿರುವ ಬಿಜೆಪಿ ಬೆಂಬಲಿಗರು, ಸ್ವಲ್ಪ ತಾಳಿ ಮುಂದೆಯೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ ಕಾಂಗ್ರೆಸಿಗರೇ ಎಂದು ಕಿಚಾಯಿಸಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಟ್ವಿಟ್ ವಾರ್ ಇಲ್ಲಿಗೆ ನಿಲ್ಲುವಂತೆ ಕಾಣುತ್ತಿಲ್ಲ.

 

Follow Us:
Download App:
  • android
  • ios