ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್‌ನಲ್ಲಿ ಭ್ರಷ್ಟಾಚಾರವನ್ನು ಹತ್ತಿಕ್ಕುವುದಾಗಿ ಭರವಸೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ.

ಚಂಡೀಗಢ (ಮೇ. 24): ಕಮೀಷನ್ ಆರೋಪ ಎದುರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ( health and family welfare minister ) ವಿಜಯ್ ಸಿಂಗ್ಲಾರನ್ನು (Vijay Singla ) ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Punjab CM Bhagwant Mann) ಮಂಗಳವಾರ ಸಚಿವ ಸ್ಥಾನದಿಂದ ವಜಾ ಮಾಡಿದ್ದಾರೆ. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ( aam aadmi party chief arvind kejriwal ) ಪಂಜಾಬ್‌ನಲ್ಲಿ ಭ್ರಷ್ಟಾಚಾರವನ್ನು ಹತ್ತಿಕ್ಕುವುದಾಗಿ ಭರವಸೆ ನೀಡಿದ ಬೆನ್ನಲ್ಲಿಯೇ ಈ ಬೆಳವಣಿಗೆ ನಡೆದಿದೆ.

ಭಗವಂತ್ ಮಾನ್ ಮುಖ್ಯಮಂತ್ರಿ ಆಗಿ ಚುನಾಯಿತರಾದ ಕೂಡಲೇ, ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎಎಪಿ ಸರ್ಕಾರವು ರಾಷ್ಟ್ರ ರಾಜಧಾನಿಯಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿದೆ ಮತ್ತು ಭಗವಂತ್ ಮತ್ತು ಅವರ ಮಂತ್ರಿಮಂಡಲ ಈಗ ಪಂಜಾಬ್‌ನಲ್ಲಿಯೂ ಪ್ರಾಮಾಣಿಕ ಸರ್ಕಾರವನ್ನು ನಡೆಸುತ್ತಾರೆ ಎಂದು ಹೇಳಿದ್ದರು.

“ಮುಂದಿನ ಬಾರಿ ಯಾರಾದರೂ ಲಂಚ ಕೇಳಿದರೆ. ನಿರಾಕರಿಸಬೇಡಿ. ನಿಮ್ಮ ಫೋನ್ ತೆಗೆದುಕೊಂಡು ಘಟನೆಯನ್ನು ರೆಕಾರ್ಡ್ ಮಾಡಿ ಮತ್ತು ಅದನ್ನು ಬಿಡುಗಡೆ ನಾವು ನೀಡುವ ಸಂಖ್ಯೆಯೊಂದಿಗೆ ಹಂಚಿಕೊಳ್ಳಿ. ಅದು ಅವರ (ಮಾನ್‌ನ) ವೈಯಕ್ತಿಕ ವಾಟ್ಸಾಪ್ ನಂಬರ್ ಆಗಿರುತ್ತದೆ. ಆ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದರು.

ಆರೋಗ್ಯ ಇಲಾಖೆಯ ಕೆಲಸಕ್ಕೆ ಶೇ. 1ರಷ್ಟು ಕಮೀಷನ್: ವಿಜಯ್ ಸಿಂಗ್ಲಾ ಆರೋಗ್ಯ ಇಲಾಖೆಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಶೇ.1ರಷ್ಟು ಕಮಿಷನ್ ನೀಡುವಂತೆ ಒತ್ತಾಯಿಸುತ್ತಿದ್ದರು. ಅದರ ದೂರು ಸಿಎಂ ಭಗವಂತ್ ಮಾನ್ ಗೆ ತಲುಪಿತ್ತು. ಅವರು ಅದನ್ನು ರಹಸ್ಯವಾಗಿ ತನಿಖೆಯನ್ನೂ ಮಾಡಿದ್ದರು. ಅಧಿಕಾರಿಗಳನ್ನು ಪ್ರಶ್ನಿಸಿದ ಬಳಿಕ ಸಚಿವರನ್ನು ಕರೆಸಲಾಯಿತು. ಸಚಿವರು ತಪ್ಪನ್ನು ಒಪ್ಪಿಕೊಂಡ ಬೆನ್ನಲ್ಲಿಯೇ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಗಿದೆ.

ರೈತರದ್ದು ಅನಗತ್ಯ ಪ್ರತಿಭಟನೆ ಎಂದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್!

ತನಿಖೆ ನಡೆಸಿ ಕ್ರಮ ತೆಗೆದುಕೊಂಡಿದ್ದೇನೆ:
ಕೆಲ ದಿನಗಳ ಹಿಂದೆ ಈ ಪ್ರಕರಣ ನನ್ನ ಗಮನಕ್ಕೆ ಬಂದಿತ್ತು. ಸರ್ಕಾರದ ಸಚಿವರೊಬ್ಬರು, ಇಲಾಖೆಯ ಪ್ರತಿ ಮಾರಾಟ ಹಾಗೂ ಖರೀದಿಯ ಕುರಿತಾದ ಟೆಂಡರ್ ಗ ಶೇ. 1ರಷ್ಟು ಕಮೀಷನ್ ಕೇಳುತ್ತಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ವಿರೋಧ ಪಕ್ಷಗಳಿಗಾಗಲಿ, ಮಾಧ್ಯಮದವರಿಗಾಗಲಿ ಯಾವುದೇ ಮಾಹಿತಿ ಇದ್ದಿರಲಿಲ್ಲ. ನನಗೆ ಅಗತ್ಯವಿದ್ದಲ್ಲಿ, ಈ ಪ್ರಕರಣವನ್ನು ಇನ್ನಷ್ಟು ಎಳೆಯಬಹುದಿತ್ತು. ಆದರೆ, ಇದು ಜನರ ನಂಬಿಕೆಯನ್ನು ಹಾಳು ಮಾಡುತ್ತದೆ. ಈ ಕಾರಣಕ್ಕಾಗಿ ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಸಂಪುಟದಿಂದ ಅವರನ್ನು ವಜಾ ಮಾಡಲಾಗಿದೆ. ಅವರ ವಿರುದ್ಧ ಪೊಲೀಸ್ ಕೇಸ್ (Police Case ) ಕೂಡ ದಾಖಲಾಗಿದೆ. ಸಚಿವರು ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಭಗವಂತ್ ಮಾನ್ ಹೇಳಿದ್ದಾರೆ.

ತಕ್ಷಣವೇ ಚಂಡೀಗಢವನ್ನು ಪಂಜಾಬ್ ಗೆ ವರ್ಗಾಯಿಸಿ, ವಿಧಾನಸಭೆಯಲ್ಲಿ ಭಗವಂತ್ ಮಾನ್ ನಿರ್ಣಯ ಮಂಡನೆ!

ವಿರೋಧ ಪಕ್ಷಗಳ ಮಾತಿಗೆ ಮಾನ್ ತಿರುಗೇಟು: ಸರ್ಕಾರ ರಚನೆಯಾದ ಎರಡು ತಿಂಗಳ ಒಳಗಾಗಿ ನಮ್ಮಲ್ಲಿ ಸಚಿವರು ಒಬ್ಬರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ವಿರೋಧ ಪಕ್ಷಗಳು ಹೇಳಲು ಆರಂಭಿಸಿವೆ. ಆದರೆ, ಅವರ ಮೇಲಿನ ಆರೋಪದ ಬಗ್ಗೆ ನಾನು ಸೂಕ್ತ ಕ್ರಮವನ್ನೂ ಕೈಗೊಂಡಿದ್ದೇನೆ. ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾದ ಹಳೇ ಸಿಎಂ ಬಗ್ಗೆ ಗೊತ್ತಿದೆಯೇ? ಆದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ನಾನು ಸಚಿವರನ್ನು ವಜಾ ಮಾಡುವುದರ ಜತೆಗೆ ಅವರ ವಿರುದ್ಧವೂ ಪ್ರಕರಣ ದಾಖಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.