Asianet Suvarna News Asianet Suvarna News

ಹಾಸನದಲ್ಲಿ ಎನ್‌ಡಿಎ ಅಭ್ಯರ್ಥಿಯ ಅಪ್ಪನಿಗಿಂದ ಒಂದು ವೋಟು ಜಾಸ್ತಿನೇ ಲೀಡ್ ಕೊಡಿಸ್ತೇನೆ: ಪ್ರೀತಂ ಗೌಡ ವಾಗ್ದಾನ

ಹಾಸನ ಲೋಕಸಭೆಯ ಎನ್‌ಡಿಎ ಒಕ್ಕೂಟದ ಅಭ್ಯರ್ಥಿಗೆ ಅವರ ತಂದೆ ರೇವಣ್ಣ ಹೊಳೆ ನರಸೀಪುರದಲ್ಲಿ ಕೊಡಿಸುವ ಮತಗಳಿಗಿಂತ ಹಾಸನದಲ್ಲಿ ಒಂದು ಮತ ಹೆಚ್ಚಾಗಿಯೇ ಲೀಡ್ ಕೊಡಿಸುತ್ತೇನೆ ಎಂದು ಪ್ರೀತಂಗೌಡ ಹೇಳಿದರು.

Pritam Gowda promises I will give more than one vote lead from NDA candidate father in Hassan sat
Author
First Published Apr 8, 2024, 1:16 PM IST

ಮೈಸೂರು/ಹಾಸನ (ಏ.08): ಹಾಸನ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಒಕ್ಕೂಟದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಅವರ ತಂದೆ ರೇವಣ್ಣ ಅವರು ಹೊಳೆ ನರಸೀಪುರ ಕ್ಷೇತ್ರದಲ್ಲಿ ಕೊಡಿಸುವ ಮತಗಳಿಗಿಂತ ಹಾಸನದಲ್ಲಿ ಒಂದು ಮತ ಹೆಚ್ಚಾಗಿಯೇ ಲೀಡ್ ಕೊಡಿಸುತ್ತೇನೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ವಾಗ್ದಾನ ಮಾಡಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೂ ಪ್ರಜ್ವಲ್ ನಡುವೆ ಯಾವುದೇ ಕಿತ್ತಾಟವಿಲ್ಲ. ನಾನು ಎನ್‌ಡಿಎ ಒಕ್ಕೂಟದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಕಾರ್ಯಕರ್ತರೂ ಕೂಡ ಕೆಲಸ ಮಾಡುತ್ತಿದ್ದಾರೆ. ಹಾಸನ ಲೋಕಸಭಾ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಅವರ ಅಪ್ಪನ ವಿಧಾನಸಭಾ ಕ್ಷೇತ್ರವಾದ ಹೊಳೆನರಸೀಪುರ ಕ್ಷೇತ್ರಕ್ಕಿಂದ ನನ್ನ ಕ್ಷೇತ್ರ ಹಾಸನದಿಂದ ಒಂದು ಮತವನ್ನು ಹೆಚ್ಚಾಗಿಯೇ ಲೀಡ್‌ ಕೊಡಿಸುತ್ತೇನೆ. ಇದಕ್ಕಿಂತ ಇನೇನ್ನು ಹೇಳಬೇಕು ಹೇಳಿ ಎಂದು ಹೇಳಿದರು.

ಲೋಕಸಭಾ ಚುನಾವಣೆ: ಶಿಕಾರಿಪುರದಲ್ಲಿ ರಾಘವೇಂದ್ರ ಪರ ವಿಜಯೇಂದ್ರ ಭರ್ಜರಿ ಪ್ರಚಾರ!

ನಾನು ಇಂದು ರಾತ್ರಿ ಹಬ್ಬಕ್ಕೆ ಹಾಸನಕ್ಕೆ ಹೋಗುತ್ತೇನೆ. ನಮ್ಮ ಯಾವ ಬೆಂಬಲಿಗರು ಕಾಂಗ್ರೆಸ್ ಜೊತೆ ಹೋಗಿಲ್ಲ. ಈಗ ಯಾರೊ ಹೋಗಿರುವ ಒಬ್ಬ ಬೂತ್ ಅಧ್ಯಕ್ಷ ಕೂಡ ಹೋಗಿಲ್ಲ. ಯಾರೋ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಟೀ ಕೂಡಿದ ಕೂಡಲೇ ಪ್ರಚಾರ ಪತ್ರ ಕೊಟ್ಟ ಕೂಡಲೇ ಅವರು ಕಾಂಗ್ರೆಸ್ ಕಾರ್ಯಕರ್ತ ಅಥವಾ ಮುಖಂಡ ಆಗುವುದಿಲ್ಲ. ನಾವೇ ಕಾಂಗ್ರೆಸ್ ನವರನ್ನ ಇಲ್ಲಿಗೆ ಕರೆದುಕೊಂಡು ಬರುವ ಪ್ರಯತ್ನ ಮಾಡುತ್ತಿದ್ದೇನೆ. ಇಲ್ಲಿಂದ ಅಲ್ಲಿಗೆ ಹೋಗೊ ಪ್ರಶ್ನೆ ಯಾರಿಗೆ ಬರುತ್ತದೆ? ನಮ್ಮ ಕಾರ್ಯಕರ್ತರ ಪ್ರತ್ಯೇಕ ಸಭೆಯ ಅಗತ್ಯ ಏನು ಇಲ್ಲ ಎಂದು ಹೇಳಿದರು.

ಈಗಾಗಲೇ ಏ.2ನೇ ತಾರೀಖು ಸಭೆ ಮಾಡಿ ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಲು ಹೇಳಿದ್ದೇನೆ. ಎಲ್ಲರೂ ಎನ್ ಡಿ ಎ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಸುಮ್ಮನೆ ಪದೆ ಪದೆ ಎಲ್ಲಾ ಊಹಾಪೋಹಗಳಿಗೆ ಉತ್ತರ ಕೊಡಲು ಆಗುವುದಿಲ್ಲ. ಎನ್‌ಡಿಎ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ. ಅವರೊಂದಿಗೆ ಎಲ್ಲ ಮೈತ್ರಿ ಅಭ್ಯರ್ಥಿಗಳನ್ನೂ ಕೂಡ ಗೆಲ್ಲಿಸುತ್ತೇವೆ.ಇನ್ನು ಮತದಾರರು ಹಾಸನ ಸೇರಿದಂತೆ ಇಡೀ ರಾಜ್ಯದಲ್ಲಿ ನಮ್ಮ ಮುಖ ನೋಡಿ ಮತ ಹಾಕುವುದಿಲ್ಲ. ನಮ್ಮ ಮನೆಯಲ್ಲಿಯೂ ಕೂಡ ಪ್ರಧಾನಿ ನರೇಂದರ ಮೋದಿ ಅವರ ಮುಖ ನೋಡಿಕೊಂಡೇ ಮತ ಹಾಕುತ್ತಾರೆ ಎಂದು ಮಾಜಿ ಶಾಸಕ ಪ್ರೀತಂ ಗೌಡ ತಿಳಿಸಿದರು.

ಕರ್ನಾಟಕಕ್ಕೆ ಬರ ಪರಿಹಾರ ನಿರ್ಲಕ್ಷ್ಯ, ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌

ಹಣಕಾಸು ಮಂತ್ರಿ ಶ್ವೇತಪತ್ರ ಹೊರಡಿಸಿದರೂ ಕಾಂಗ್ರೆಸ್‌ ಕೋರ್ಟ್ ಮೊರೆ ಹೋಗಿದೆ:  ಮಾಜಿ ಸಚಿವ ಸಿ.ಟಿ.ರವಿ ಅವರು ಬರ ಪರಿಹಾರ ವಿತರಣೆಯ ಕುರಿತು ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಸಂಸತ್ತಿಗಿಂತ ದೊಡ್ಡ ವೇದಿಕೆ ಯಾವುದೂ ಇಲ್ಲ. ಸಂಸತ್‌ನಲ್ಲೇ ಹಣಕಾಸು ಮಂತ್ರಿ ಶ್ವೇತಪತ್ರ ಹೊರಡಿಸಿದ್ದಾರೆ. ಹೀಗಿದ್ದರೂ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ದೂರು ಸಲ್ಲಿಸಿದೆ. ನಾವು ಸಮರ್ಪಕವಾಗಿ ದಾಖಲೆ ಸಲ್ಲಿಸುತ್ತೇವೆ. ಕೇರಳವೂ ಕೋರ್ಟ್‌ಗೆ ಹೋಗಿದೆ. ಬರ ಪರಿಹಾರ ಕೇವಲ ಕರ್ನಾಟಕಕ್ಕೆ ನಿಂತಿಲ್ಲ. ಜೊತೆಗೆ, ರಾಜ್ಯದಲ್ಲಿ ಒಕ್ಕಲಿಗರಿಗೆ ಅನ್ಯಾಯಾಗಲು ಬಿಡಲ್ಲ. ಒಂದು ಅವಕಾಶ ತಪ್ಪಿದ್ದರೆ ಮುಂದೆ 10 ಅವಕಾಶಗಳು ಸಿಗುತ್ತದೆ. ಒಕ್ಕಲಿಗರು ರಾಷ್ಟ್ರ ವಾದಿಗಳು, ರಾಷ್ಟ್ರ ವಾದಿಗಳಿಗೆ ಮತ ಹಾಕುತ್ತಾರೆ. ಒಕ್ಕಲಿಗರ ರಾಷ್ಟ್ರವಾದಿಗಳು ಎಂದು ಅಜೆಂಡಾನವನ್ನ ಸೆಟ್ ಮಾಡೊರು ನಾವೇ. ಅದೇ ರೀತಿ ನಾವು ಕೆಲಸ ಮಾಡುತ್ತೇವೆ. ಯಾರೇ ಬಂದರೂ ಹಿಂದುತ್ವದ ಅಜೆಂಡಾದ ಅಡಿಯಲ್ಲೇ ಕೆಲಸ ಮಾಡಬೇಕು ಎಂದು ಹೇಳಿದರು.

Follow Us:
Download App:
  • android
  • ios