Asianet Suvarna News Asianet Suvarna News

ಕನ್ನಡಕ, ಟೋಪಿ, ಸಫಾರಿ ಹಾಕಿದ್ದಾರೆ ಇದು ಸುಪಾರಿಯೋ, ಸಫಾರಿನೋ: ಮೋದಿ ಭೇಟಿಗೆ ಎಚ್ಡಿಕೆ ವ್ಯಂಗ್ಯ

 ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಭೇಟಿ ನೀಡಿದಾಗ ಕನ್ನಡಕ, ಟೋಪಿ, ಸಫಾರಿ ಹಾಕಿಕೊಂಡಿದ್ದಾರೆ. ಇದೇನು ಸಫಾರಿನೋ, ಸುಪಾರಿಯೋ ಎಂದು ಹೆಚ್‌.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.

Prime Minister Narendra Modi's visit to Bandipur: HD Kumaraswamy statement at challakere rav
Author
First Published Apr 10, 2023, 10:36 PM IST

ಚಿತ್ರದುರ್ಗ (ಏ.10) : ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಭೇಟಿ ನೀಡಿದಾಗ ಕನ್ನಡಕ, ಟೋಪಿ, ಸಫಾರಿ ಹಾಕಿಕೊಂಡಿದ್ದಾರೆ. ಇದೇನು ಸಫಾರಿನೋ, ಸುಪಾರಿಯೋ ಎಂದು ಹೆಚ್‌.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಚಳ್ಳಕೆರೆ ಪಂಚರತ್ನ ಯಾತ್ರೆ(Pancharatna rathayatre challakere) ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಪ ಹುಲಿ ಬೇಟೆಯಾಡಲು ಹೋಗಿದ್ದಾರೆಂದು ವ್ಯಂಗ್ಯವಾಡಿದ ಅವರು, ನಂತರ ಹುಲಿ ನೊಡೋಕೆ, ವೀಕ್ಷಣೆಗೆ ಹೋಗಿದ್ದಾರೆಂದು ಮಾತಿನ ವರಸೆ ಬದಲಾಯಿಸಿದರು.

ಅಧಿಕಾರಕ್ಕೆ ಬಂದರೆ ಪರಶುರಾಮಪುರ ತಾಲೂಕು ಘೋಷಣೆ, ಭರವಸೆ ಈಡೇರಿಸದಿದ್ರೆ ಜೆಡಿಎಸ್ ಪಕ್ಷ ವಿಸರ್ಜನೆ: ಎಚ್‌ಡಿಕೆ

ಹುಲಿ, ಚಿರತೆ ದಾಳಿಗೆ ಬಲಿಯಾದ ಕುಟುಂಬದ ಭೇಟಿ ಇಲ್ಲ. ಹುಲಿ ಸಂರಕ್ಷಣೆ ಮಾಡಲು ಬಂದಿದ್ದಾರೆ. ವನ್ಯಜೀವಿ ದಾಳಿಗೊಳಗಾದವರ ಬಗ್ಗೆ ಈವರೆಗೂ ಸಿಎಂ ಆಗಲಿ, ಪಿಎಂ ಆಗಲೀ ಅನುಕಂಪದ ಮಾತಾಡಿಲ್ಲವೆಂದ ಅವರು, ಉತ್ತರ ಕರ್ನಾಟಕದಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟದ ಪರಿಸ್ಥಿತಿ ಇದೆ. ಈ ಬಗ್ಗೆ ಎಲ್ಲೂ ಚರ್ಚೆ ಮಾಡದ ಪ್ರಧಾನಿ, ಹುಲಿ ಸಂರಕ್ಷಣೆ, ಅಭಯಾರಣ್ಯ ವಿಸ್ತರಣೆ ಕುರಿತು ಮಾತಾಡ್ತಾರೆ ಎಂದರು.

13ರಂದು ರಾಣಿಬೆನ್ನೂರಿಗೆ ಮಾಜಿ ಸಿಎಂ ಎಚ್‌ಡಿಕೆ

 ರಾಣಿಬೆನ್ನೂರು: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ಏ. 13ರಂದು ನಗರಕ್ಕೆ ಆಗಮಿಸಲಿದ್ದು ಪಕ್ಷದ ಪಂಚರತ್ನ ಯೋಜನೆ ಕುರಿತು ಪ್ರಚಾರ ನಡೆಸಲಿದ್ದಾರೆ ಎಂದು ಸ್ಥಳೀಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 4 ಗಂಟೆಗೆ ನಗರದ ಮುನ್ಸಿಪಲ್‌ ಮೈದಾನದಲ್ಲಿ ಬಹಿರಂಗ ಸಭೆ ಜರುಗಲಿದೆ. ಇದಕ್ಕೂ ಮುನ್ನ ಅವರನ್ನು ಕೆಇಬಿ ಗಣೇಶ ದೇವಸ್ಥಾನದಿಂದ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಗುವುದು. ಅವರ ಜತೆಗೆ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮತ್ತಿತರರು ಆಗಮಿಲಿದ್ದಾರೆ ಎಂದರು.

ರಾಣಿಬೆನ್ನೂರಿನಲ್ಲಿ ಬದಲಾವಣೆ ಕೂಗು ಜೋರಾಗಿ ಕೇಳಿ ಬರುತ್ತಿದೆ. ಬಿಜೆಪಿ, ಕಾಂಗ್ರೆಸ್‌ ಎರಡೂ ರಾಷ್ಟ್ರೀಯ ಪಕ್ಷ ಬೇಡ ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಜನತೆ ಹೇಳಿದ್ದಾರೆ. ರೈತರಿಗೆ ಪ್ರತಿ ವರ್ಷ ಎಕರೆಗೆ . 10 ಸಾವಿರ ಸಹಾಯಧನ ಕೊಡುವ ವ್ಯವಸ್ಥೆಯನ್ನು ಈಗಾಗಲೇ ಕುಮಾರಸ್ವಾಮಿ ಅವರು ಘೋಷಿಸಿದ್ದಾರೆ. ಇಂತಹ ಹಲವಾರು ವಿಷಯಗಳನ್ನು ಮೆಚ್ಚಿ ಜನತೆ ನಮಗೆ ಬೆಂಬಲ ನೀಡುತ್ತಿದ್ದಾರೆ. ಈಗಿರುವ ಶಾಸಕರು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಜನತೆ ಆರೋಪಿಸಿದ್ದಾರೆ. ನಗರ ಹಾಗೂ ತಾಲೂಕಿನಲ್ಲಿ ಏನು ಸಮಸ್ಯೆಗಳಿವೆ ಎಂಬುದನ್ನು ತಿಳಿಯಬೇಕು. ಆದ್ದರಿಂದ ನಾನು ಪಾದಯಾತ್ರೆ ಮಾಡಿ ಜನರ ಸಮಸ್ಯೆ ತಿಳಿದಿದ್ದೇನೆ. ಅವುಗಳನ್ನು ಕುಮಾರಸ್ವಾಮಿ ಅವರಿಗೆ ಮತ್ತೊಂದು ಬಾರಿಗೆ ಪಟ್ಟಿಮಾಡಿ ಸಲ್ಲಿಸುವೆ ಎಂದು ತಿಳಿಸಿದರು.

ಜೆಡಿಎಸ್‌ ಅಧಿಕಾರಕ್ಕೆ ಬಂದಲ್ಲಿ ನವ ಕರ್ನಾಟಕ ನಿರ್ಮಾಣ: ಎಚ್‌.ಡಿ.ಕುಮಾರಸ್ವಾಮಿ

ಪಕ್ಷದ ರಾಜ್ಯ ವಕ್ತಾರ ಮಹೇಶಗೌಡ, ಪ್ರಮುಖರಾದ ಮಹೇಶ ಹೊನ್ನಜ್ಜನವರ, ಸಿದ್ದಪ್ಪ ಗುಡಿಮುಂದ್ಲರ, ಸೈಯದ್‌ ಸೌದಾಗರ, ಸೈಯದ್‌ ಹರಿಹರ, ಅಶ್ಪಕ್‌ ಪೌಜಗಾರ, ಸುನ್ನಾಖಾನ್‌ ಮುಲ್ಲಾ, ಬಸವರಾಜ ಕೊಪ್ಪದ, ಮಲ್ಲಿಕಾರ್ಜುನ ಹಲಗೇರಿ, ಚಂದ್ರು ಭರಮಗೌಡ್ರ ಸುದ್ದಿಗೋಷ್ಠಿಯಲ್ಲಿದ್ದರು.

Follow Us:
Download App:
  • android
  • ios