Asianet Suvarna News Asianet Suvarna News

P Chidambaram : ಗೋವಾ ವಿಚಾರದಲ್ಲಿ ಸರ್ಕಾರದಿಂದ ಇತಿಹಾಸ ತಿರುಚುವ ಯತ್ನ

ಕೇಂದ್ರ ಸರ್ಕಾರದಿಂದ ಇತಿಹಾಸ ತಿರುಚುವ ಯತ್ನ
ಸರಿಯಾದ ಸಮಯದಲ್ಲಿ ಗೋವಾ ವಿಚಾರವಾಗಿ ನೆಹರು ಮಧ್ಯಪ್ರವೇಶ ಮಾಡಿದ್ದರು
ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಹೇಳಿಕೆ
 

Prime Minister Narendra Modi Attempt to distort history Nehru intervened in Goa at right time says p Chidambaram san
Author
Bengaluru, First Published Feb 11, 2022, 11:38 PM IST | Last Updated Feb 11, 2022, 11:38 PM IST

ನವದೆಹಲಿ (ಫೆ. 11): ಪಂಡಿತ್ ಜವಾಹರಲಾಲ್ ನೆಹರೂ (Pandit Jawaharlal Nehru) ಅವರ ಕಾರಣದಿಂದಾಗಿ ಗೋವಾ ವಿಮೋಚನೆ (Goa liberation ) ವಿಳಂಬವಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ (Prime Minister Narendra Modi) ಟೀಕೆಯು ಇತಿಹಾಸವನ್ನು ತಿರುಚುವ ಹತಾಶ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ (Senior Congress leader P Chidambaram) ಶುಕ್ರವಾರ ಹೇಳಿದ್ದಾರೆ. ಗೋವಾವನ್ನು ವಿದೇಶಿಗರಿಂದ ಮುಕ್ತಗೊಳಿಸಲು ಭಾರತದ ಮೊದಲ ಪ್ರಧಾನಿ ಸರಿಯಾದ ಸಮಯದಲ್ಲಿ ಮಧ್ಯಪ್ರವೇಶಿಸಿದರು ಎಂದು ತಿಳಿಸಿದ್ದಾರೆ.

ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಚಿದಂಬರಂ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚುನಾಯಿತರಾದ ಯಾವುದೇ ಕಾಂಗ್ರೆಸ್ ಶಾಸಕರನ್ನು ಈ ಬಾರಿ ಗೋವಾದಲ್ಲಿ ಬಿಜೆಪಿಯಿಂದ ಸೆಳೆಯಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು. ನಮ್ಮ ಮನೆಗಳಿಗೆ ಈಗ ಉತ್ತಮ ಕಾವಲು ವ್ಯವಸ್ಥೆ ಇದೆ. ಕಳ್ಳ ಹೊರಗಡೆ ನಿಂತಿದ್ದರೆ ಜನರು ಅವರಿಗೆ ಪಾಠ ಕಲಿಸುತ್ತಾರೆ ಎಂದ ಮಾರ್ಮಿಕವಾಗಿ ನುಡಿದರು. ಪ್ರತಿ ದಿನ ಕಳೆದಂತೆ ಮತದಾರರಿಗೆ ಬಿಜೆಪಿ ಅಥವಾ ಕಾಂಗ್ರೆಸ್ ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಸ್ಪಷ್ಟವಾಗುತ್ತಿದೆ. ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಂತಹ “ಸಣ್ಣ ಪಕ್ಷಗಳು” ಬಿಜೆಪಿಯೇತರ ಮತಗಳನ್ನು ವಿಭಜನೆ ಮಾಡಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು. ಈ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದು ಯಾವುದೇ ರೀತಿಯ ಪ್ರಮುಖ ಅಂಶವಲ್ಲ ಎಂದು ಚಿದಂಬರಂ ಹೇಳಿದರು.

ನೆಹರೂ ಅವರಿಂದಾಗಿ ಗೋವಾ ವಿಮೋಚನೆ ವಿಳಂಬವಾಯಿತು ಎಂಬ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರ ಇತ್ತೀಚಿನ ಟೀಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ, ಇದು ಇತಿಹಾಸವನ್ನು ತಿರುಚುವ ಮತ್ತು ಮರು ಬರೆಯುವ ಮತ್ತೊಂದು ಹತಾಶ ಪ್ರಯತ್ನವಾಗಿದೆ ಎಂದು ಹೇಳಿದರು.

UP Elections: ಚಿದಂಬರಂ ವಿರುದ್ಧ ತನಿಖೆ ನಡೆಸಿದ್ದ ಮಾಜಿ ಇಡಿ ಅಧಿಕಾರಿಗೆ ಬಿಜೆಪಿ ಟಿಕೆಟ್!
"ಮೋದಿ ಮತ್ತು ಅಮಿತ್ ಶಾ ಅವರಿಗೆ ಎರಡನೇ ಮಹಾಯುದ್ಧದ ನಂತರದ ಪ್ರಪಂಚದ ಇತಿಹಾಸ ತಿಳಿದಿಲ್ಲ. ಅವರಿಗೆ ಸ್ವಾತಂತ್ರ್ಯೋತ್ತರ ಭಾರತದ ಅದರಲ್ಲೂ ವಿಶೇಷವಾಗಿ 1947-1960 ರ ಆರಂಭದ ವರ್ಷಗಳ ಇತಿಹಾಸ ತಿಳಿದಿಲ್ಲ. ಜವಾಹರಲಾಲ್ ನೆಹರು ಅವರು ಭಾರತವನ್ನು ಎಷ್ಟು ಕುಶಲವಾಗಿ ಮುನ್ನಡೆಸಿದರು ಎನ್ನುವುದು ಅವರಿಗೆ ಗೊತ್ತಿಲ್ಲ. ಭಾರತವು ಶಾಂತಿಯ ಚಾಂಪಿಯನ್ ಮತ್ತು ಅಲಿಪ್ತ ಚಳವಳಿಯ ಮಾನ್ಯತೆ ಪಡೆದ ನಾಯಕನಾಗಿ ಹೊರಹೊಮ್ಮಿದ ಸಾಧನೆ ನೆಹರು ಅವರಿಗೆ ಸಲ್ಲಬೇಕು' ಎಂದರು. ಗೋವಾವನ್ನು ಮುಕ್ತಗೊಳಿಸಲು ನೆಹರೂ ಸರಿಯಾದ ಸಮಯದಲ್ಲಿ ಮಧ್ಯಪ್ರವೇಶಿಸಿದರು ಮತ್ತು ಆದ್ದರಿಂದಲೇ ಮಿಲಿಟರಿ ಕ್ರಮದ ವಿರುದ್ಧ ಒಂದೇ ಒಂದು ಧ್ವನಿ ಎತ್ತಲಿಲ್ಲ ಎಂದು ಅವರು ಹೇಳಿದರು. ನೆಹರೂ ಅವರು ತಮ್ಮ ಭವಿಷ್ಯವನ್ನು ನಿರ್ಧರಿಸಲು ಗೋವಾದ ಜನರಿಗೆ ಅಭಿಪ್ರಾಯ ಸಂಗ್ರಹವನ್ನು ನೀಡುವ ಮೂಲಕ ವಿಮೋಚನೆಯನ್ನು ಅನುಸರಿಸಿದರು ಎಂದು ಅವರು ಹೇಳಿದರು.

P Chidambaram : ಬಿಜೆಪಿಯನ್ನು ಸೋಲಿಸುವ ಶಕ್ತಿ ಇರುವುದು ಕಾಂಗ್ರೆಸ್ ಗೆ ಮಾತ್ರ!
"ನೆಹರು ಮತ್ತು ಅಭಿಪ್ರಾಯ ಸಂಗ್ರಹದಿಂದಾಗಿಯೇ ಇಂದು ಗೋವಾ ಸ್ವತಂತ್ರ್ಯ ರಾಜ್ಯವಾಗಿದೆ. ಮೋದಿ ಹಾಗೂ ಅಮಿತ್ ಷಾ ಏನೇ ಹೇಳಲಿ, ಇತಿಹಾಸವನ್ನು ತಿರುಚಲು ಪ್ರಯತ್ನಿಸಿದರೂ, ಗೋವಾದ ಜನರು ಎಂದಿಗೂ ನೆಹರು ಹಾಗೂ ಅವರ ಮಹಾನ್ ಕೊಡುಗೆಯನ್ನು ನೆನಪಿಸಿಕೊಳ್ಳುತ್ತಾರೆ ಎಂದು ಚಿದಂಬರಂ ಹೇಳಿದರು. ಗುರುವಾರ ಗೋವಾದಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಮೋದಿ, ನೆಹರು ಬಯಸಿದ್ದರೆ, 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಗೋವಾವನ್ನು "ಗಂಟೆಗಳಲ್ಲಿ" ಮುಕ್ತಗೊಳಿಸಬಹುದಿತ್ತು, ಆದರೆ ರಾಜ್ಯವನ್ನು ಪೋರ್ಚುಗೀಸ್ ಆಳ್ವಿಕೆಯಿಂದ ಮುಕ್ತಗೊಳಿಸಲು 15 ವರ್ಷಗಳು ಬೇಕಾಯಿತು. ಇತ್ತೀಚೆಗಷ್ಟೇ ಅಮಿತ್ ಷಾ ಕೂಡ ಇದೇ ಆರೋಪ ಮಾಡಿದ್ದರು.

Latest Videos
Follow Us:
Download App:
  • android
  • ios