Asianet Suvarna News Asianet Suvarna News

ಧರ್ಮವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಬಾರದು: ಡಿ.ಕೆ.ಶಿವಕುಮಾರ್

ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. 
 

Politics should not be done by keeping religion in front Says DK Shivakumar gvd
Author
First Published Mar 3, 2024, 3:30 AM IST

ಹಾಸನ (ಮಾ.03): ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರ್ಚಕರು ಯಾರು? ಅವರು ಒಂದು ಪಾರ್ಟಿಯವರಾ? ಬಿಜೆಪಿಯವರಿಗೆ ಸೇರಿದವರೇ? ಅವರಿಗೆ ಅನುಕೂಲ ಮಾಡಲು, ಸಣ್ಣ ಸಣ್ಣ ದೇವಾಲಯಗಳನ್ನು ಅಭಿವೃದ್ಧಿ ಮಾಡಲು ಮಸೂದೆ ತಂದೆವು ಅದನ್ನೂ ವಿರೋಧಿಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು.

ಧರ್ಮವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಬಾರದು. ಪಾಪ ರೇವಣ್ಣ ಯಾವಾಗಲೂ ದೇವಸ್ಥಾನ, ದೇವಸ್ಥಾನ ಅಂತ ಹೋಗ್ತಾರೆ, ಇದನ್ನು ರೇವಣ್ಣ ಅವರಿಗೆ ಹೇಳಬೇಕು ಎಂದರು. ದೇವರು ವರನೂ ಕೊಡಲ್ಲ ಶಾಪನೂ ಕೊಡಲ್ಲ. ವರ್ಷಕ್ಕೆ ಒಂದು ಸಾರಿ ಬಾಗಿಲು ತೆರೆದಾಗ ಹಾಸನಾಂಬೆಗೆ ನಮಸ್ಕಾರ ಮಾಡಿ ಹೋಗ್ತಿನಿ ಎಂದರು. ನನಗೆ ಹಾಸನ ಜಿಲ್ಲೆಯ ಜನತೆ ಬಗ್ಗೆ ಬಹಳ ವಿಶ್ವಾಸ ಇದೆ. ಹಾಗಾಗಿ ಹಿಮಾಚಲ ಪ್ರದೇಶದಿಂದ ರಾತ್ರೋ ರಾತ್ರಿ ಪ್ರಯಾಣ ಮಾಡಿ ನಿಮ್ಮನ್ನೆಲ್ಲಾ ಭೇಟಿ ಮಾಡಲು ಹಾಸನಕ್ಕೆ ಬಂದಿದ್ದೇನೆ. ಕಳೆದ ಚುನಾವಣೆಯಲ್ಲಿ ಶಕ್ತಿ ಕೊಡ್ತಿರಾ ಅನ್ಕೊಂಡಿದ್ದೆ. ಕೊಟ್ಟಿದ್ದಾರೆ ಕೆಲವರೆಲ್ಲ ಹತ್ತಿರ ಹತ್ತಿರಕ್ಕೆ ಬಂದು ಸೋತರು, ಆ ರೀತಿ ಶಕ್ತಿ ಕೊಟ್ಟಿದ್ದೀರಿ. ನೀವು ಕೊಟ್ಟ ಮತ ಐದು ಗ್ಯಾರಂಟಿಗಳನ್ನು ತರಲು ಶಕ್ತಿ ಆಯ್ತು ಎಂದರು.

ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕುರಿತ ಎಫ್‌ಎಸ್‌ಎಲ್‌ ವರದಿ ಬಂದಿಲ್ಲ: ಪರಮೇಶ್ವರ್‌

ಬಿಜೆಪಿ, ಜೆಡಿಎಸ್‌ ಕೇಳಿದಂತೆ ಆತ್ಮಸಾಕ್ಷಿಯ ಮತ: ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ಆತ್ಮಸಾಕ್ಷಿ ಮತಗಳನ್ನು ಕೇಳುತ್ತಿದ್ದರು. ಇದೀಗ ಬಿಜೆಪಿಯವರೇ ಆತ್ಮಸಾಕ್ಷಿ ಮತ ಕೊಟ್ಟಿದ್ದಾರೆ. ಕಾಂಗ್ರೆಸ್ ಶಾಸಕರ ಒಗ್ಗಟ್ಟಿನ ಪ್ರದರ್ಶನದಿಂದ ಪಕ್ಷದ ಮೂರೂ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಮುಖ್ಯಮಂತ್ರಿಗಳಿಗೆ ಸೇರಿ ಎಲ್ಲಾ ಶಾಸಕರಿಗೂ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಮತ ಎಣಿಕೆ ಪ್ರಕ್ರಿಯೆ ಮುಕ್ತಾಯವಾದ ನಂತರ ವಿಧಾನಸೌಧ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಅಭ್ಯರ್ಥಿಗಳಾದ ಜಿ.ಸಿ ಚಂದ್ರಶೇಖರ್ (45 ಮತ), ನಾಸಿರ್ ಹುಸೇನ್ (47 ಮತ), ಅಜಯ್ ಮಾಕನ್‌ (47 ಮತ) ಪಡೆದು ಮೊದಲ ಸುತ್ತಿನಲ್ಲೇ ಗೆಲುವು ಸಾಧಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಐಕ್ಯತೆ ಹಾಗೂ ಒಗ್ಗಟ್ಟಿನ ಫಲಿತಾಂಶ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸರ್ಜೇವಾಲ, ವೇಣುಗೋಪಾಲ್ ಅವರು ನಮ್ಮ ಜತೆ ಚರ್ಚೆ ಮಾಡಿ ಮಾರ್ಗದರ್ಶನ ನೀಡುತ್ತಿದ್ದರು. ಅವರನ್ನೂ ಅಭಿನಂದಿಸುತ್ತೇನೆ ಎಂದು ಹೇಳಿದರು.

ಬಿಜೆಪಿಯವರು ಭಾವನೆಯ ಮೇಲೆ ರಾಜಕೀಯ ಮಾಡುತ್ತಾರೆ: ಡಿ.ಕೆ.ಶಿವಕುಮಾರ್

ಅಡ್ಡಮತದಾನದ ಬಗ್ಗೆ ಗೊತ್ತಿಲ್ಲ: ಸೋಮಶೇಖರ್ ಅವರು ಅಡ್ಡಮತದಾನ ಮಾಡಿರುವ ಬಗ್ಗೆ ಕೇಳಿದಾಗ, ಅಡ್ಡಮತದಾನದ ಬಗ್ಗೆ ನನಗೆ ಗೊತ್ತಿಲ್ಲ. ನಾನು ನನ್ನ ಮತವನ್ನಷ್ಟೇ ನೋಡಿದ್ದೇನೆ. ಪಕ್ಷೇತರರ ಮತವನ್ನು ನಾನು ನೋಡಿಲ್ಲ. ಹೀಗಿರುವಾಗ ಅಡ್ಡಮತದಾನದ ಬಗ್ಗೆ ನನಗೇನು ಗೊತ್ತು? ಬಿಜೆಪಿಯವರನ್ನೇ ಕೇಳಿ. ಅವರೇ ಅಲ್ಲವೇ ಆತ್ಮಸಾಕ್ಷಿ ಮತ ಕೇಳಿದ್ದು ಎಂದು ಲೇವಡಿ ಮಾಡಿದರು.

Follow Us:
Download App:
  • android
  • ios