Asianet Suvarna News Asianet Suvarna News

ಅಭಿವೃದ್ಧಿ ವಿಚಾರದಲ್ಲೂ ರಾಜಕೀಯ: ಸಮಸ್ಯೆಯ ಬಗ್ಗೆ ಕೇಳೋರಿಲ್ಲ ಎಂದು ಸಚಿವರು ವಾಗ್ದಾಳಿ!

ಜಿಲ್ಲೆಯಲ್ಲಿ ರಾಜಕೀಯ ಕೆಸರೆರೆಚಾಟ ಶುರುವಾಗಿದೆ.ಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆಗ್ತಿದ್ದು, ರಾಜಕೀಯ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

Politics in Kolar development gvd
Author
Bangalore, First Published Jul 31, 2022, 11:59 PM IST

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಜು.31): ಜಿಲ್ಲೆಯಲ್ಲಿ ರಾಜಕೀಯ ಕೆಸರೆರೆಚಾಟ ಶುರುವಾಗಿದೆ.ಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆಗ್ತಿದ್ದು, ರಾಜಕೀಯ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದೀಗ ಅಭಿವೃದ್ಧಿ ವಿಚಾರದಲ್ಲೂ ರಾಜಕೀಯ ಶುರುವಾಗಿದ್ದು, ಬೇಕಾದರೆ ಏನ್ ಕೆಲಸ ಮಾಡ್ಬೇಕು ಅಂತ ನಮ್ಮ ಬಳಿ ಬಂದು ಕೇಳಲಿ ಅಂತ ಅಭಿವೃದ್ಧಿ ಕಾರ್ಯದಲ್ಲೂ ಸ್ವಾರ್ಥ ರಾಜಕಾರಣ ಮಾಡ್ತಿದ್ದಾರೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ನೋಡಿ. ಧೂಳಿನ ಜೊತೆ ಕಿತ್ತೊಗಿರೋ ರಸ್ತೆಯ ಮೇಲೆ ವಾಹನ ಸವಾರರ ಸರ್ಕಸ್. 

ಸ್ವಿಮ್ಮಿಂಗ್ ಫುಲ್ ರೀತಿಯಲ್ಲಿರುವ ರಸ್ತೆ ಗುಂಡಿಗಳು. ಕುಡಿಯುವ ನೀರಿಗೂ ಸಮಸ್ಯೆ, ಅಭಿವೃದ್ಧಿ ಕಾಣದೆ ಸೊರಗುತ್ತಿರುವ ಗ್ರಾಮಗಳು. ಅಂದಹಾಗೆ ಇವೆಲ್ಲಾ ದೃಶ್ಯಗಳು ನಮಗೆ ಕಂಡು ಬರುತ್ತಿರೋದು ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ಕೋಲಾರ ಜಿಲ್ಲೆಯಲ್ಲಿ. ಈ ಭಾಗದ ಎಲ್ಲಾ ಶಾಸಕರಿಗೆ, ಪರಿಷತ್ ಸದಸ್ಯರಿಗೆ ಕ್ಷೇತ್ರದ ಅಭಿವೃದ್ಧಿಗಿಂತ್ತ ತಮ್ಮ ರಾಜಕೀಯ ಪ್ರತಿಷ್ಠೆಯೇ ಹೆಚ್ಚಾದಂತೆ ಕಾಣ್ತಿದೆ, ಹೀಗಾಗಿ ನಾವೇಕೆ ಹೋಗಿ ಅಭಿವೃದ್ಧಿ ವಿಚಾರವಾಗಿ ಉಸ್ತುವಾರಿ ಸಚಿವರ ಬಳಿ ಗೋಳಾಡಬೇಕು ಅಂತ ತೀರ್ಮಾನ ಮಾಡಿಕೊಂಡಿದ್ದಾರೆ. 

ಮುರಾರ್ಜಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ 'ವಿಕ್ರಾಂತ್‌ ರೋಣ' ತೋರಿಸಿದ ವಾರ್ಡನ್, ಕಿಚ್ಚ ಫ್ಯಾನ್ಸ್ ಗರಂ

ಹೌದು! ಕೋಲಾರ ಜಿಲ್ಲೆಯಲ್ಲಿ ಬಹುತೇಕ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರೇ ಶಾಸಕರು ಇರೋದ್ರಿಂದ ನಾವೇಕೆ ಬಿಜೆಪಿಯಿಂದ ಗೆದ್ದಿರುವ ಉಸ್ತುವಾರಿ ಸಚಿವ ಮುನಿರತ್ನ ಬಳಿ ಹೋಗಿ ಅಭಿವೃದ್ಧಿ ಕೆಲಸವನ್ನು ಕೇಳಿಕೊಳ್ಳಬೇಕು ಎಂದು ತೀರ್ಮಾನ ಮಾಡಿಕೊಂಡಂತೆ ಕಾಣ್ತಿದೆ. ಇದರಿಂದ ಕೋಲಾರ ಜಿಲ್ಲೆ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಹಿಂದೆ ಉಳಿದಿದ್ದು, ಜಿಲ್ಲೆಯ ಬಹುತೇಕ ರಸ್ತೆಗಳು ಕಿತ್ತು ಹೋಗಿ ಸ್ವಿಮ್ಮಿಂಗ್ ಫುಲ್‌ನಂತೆ ಆಗಿದೆ, ಎಲ್ಲಿ ಹೋಗಿದ್ರು ಸಂಪೂರ್ಣ ಧೂಳಿನಿಂದ ಕೂಡಿದ್ದು, ವಾಹನ ಸವಾರರು ಪಡಬಾರದ ಪಾಡು ಪಡ್ತಿದ್ದಾರೆ. 

ಇತ್ತ ಕುಡಿಯುವ ನೀರಿನ ಸಮಸ್ಯೆ ಸಹ ಜಿಲ್ಲೆಯಲ್ಲಿ ಉಲ್ಭಣವಾಗಿದ್ದು, ಅಕಾಲಿಕ ಮಳೆಯಿಂದಾಗಿ ಈ ಬಾರಿ ಜಿಲ್ಲೆಯಲ್ಲಿ ರೈತರಿಗೆ ಮಾವು, ಟೊಮೊಟೊ ಸೇರಿದಂತೆ ಹಲವಾರು ಬೆಳೆಗಳು ಕೈಕೊಟ್ರು ಸಹ ಯಾವೊಬ್ಬ ನಾಯಕರು ಸರ್ಕಾರದ ಜೊತೆ ಗುದ್ದಾಡಿ ಪರಿಹಾರ ಕೊಡಿಸುವ ಕೆಲಸ ಮಾಡಿಲ್ಲ. ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ಅವರನ್ನು ಕೇಳಿದಕ್ಕೆ ನಾವು ಸದಾ ಅಭಿವೃದ್ಧಿ ಕೆಲಸದ ಬಗ್ಗೆ ಚಿಂತನೆ ಇರೋರು, ಜಿಲ್ಲೆಯಲ್ಲಿರುವ ಜನಪ್ರತಿನಿಧಿಗಳು ಮೊದಲಿನಿಂದಲೂ ಹೊಂದಾಣಿಕೆಯ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಯಾವೊಬ್ಬ ನಾಯಕರು ನನ್ನ ಬಳಿ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು. 

ಒಂದು ಕಡೆ ಸ್ಥಳೀಯ ಶಾಸಕರು, ಪರಿಷತ್ ಸದಸ್ಯರು ಸ್ವಾರ್ಥ ಹಾಗೂ ಪ್ರತಿಷ್ಠೆ ರಾಜಕಾರಣ ಮಾಡ್ತಿದ್ರೆ, ಇತ್ತ ಉಸ್ತುವಾರಿ ಸಚಿವರಾದ ಮುನಿರತ್ನ ಅವರು ಸಹ ಜಿಲ್ಲೆಯ ಬಗ್ಗೆ ಅಷ್ಟೊಂದು ಕಾಳಜಿ ಇಟ್ಟುಕೊಂಡತೆ ಕಾಣ್ತಿಲ್ಲ. ಉಸ್ತುವಾರಿ ವಹಿಸಿಕೊಂಡಾಗಿಂದಲೂ ಕೇವಲ ಒಮ್ಮೆ ಮಾತ್ರ ಅಧಿಕಾರಿಗಳ ಜೊತೆ ಕೆಡಿಪಿ ಸಭೆ  ಮಾಡಿದ್ದು, ಜಿಲ್ಲೆಯ ಅನೇಕ ಜ್ವಲಂತ ಸಮಸ್ಯೆಗಳ ಪರಿಹಾರ ಇದುವರೆಗೂ ಮುಂದಾಗಿಲ್ಲ. ಕೇವಲ ರಾಜಕೀಯ ಕಾರ್ಯಕ್ರಮ, ಪಕ್ಷ ಸೇರ್ಪಡೆ ಕಾರ್ಯಕ್ರಮಗಳಿಗೆ ಬಂದು ಭೇಟಿ ಕೊಟ್ಟು ಹೋಗ್ತಿದ್ದಾರೆ. ಉಸ್ತುವಾರಿ ವಹಿಸಿಕೊಂಡಿದ್ದಾಗ ಹಲವಾರು ಅಭಿವೃದ್ಧಿ ಕೆಲಸಗಳ ವಿಚಾರವಾಗಿ ಮುನಿರತ್ನ ಅವರು ಮಾತು ಕೊಟ್ಟಿದ್ದಾರೆ ಆದ್ರು ಅದ್ಯಾವುದು ಬಗೆಹರಿದಿಲ್ಲ. 

Kolar: ಬಂಗಾರಪೇಟೆ ತಾಲ್ಲೂಕು ಕಚೇರಿಯಲ್ಲಿ ಕನ್ನಡವೇ ಸಾರ್ವಭೌಮ

ಇನ್ನು ನೀವುಗಳು ಅಭಿವೃದ್ಧಿ ವಿಚಾರವಾಗಿ ಇದುವರೆಗೂ ಉಸ್ತುವಾರಿ ಸಚಿವರ ಬಳಿ ಹೋಗಿ ಚರ್ಚೆ ಮಾಡಿಲ್ವಂತೆ ಅಂತ ಕೇಳಿದ್ರೆ ಕಾಂಗ್ರೆಸ್ ಪಕ್ಷದ ಪರಿಷತ್ ಸದಸ್ಯ ಅನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ. ಅವರು ನಮ್ಮ ಜಿಲ್ಲೆಗೆ ಬಂದಿದ್ದಾರೆ, ನಾವೇಕೆ ಅವರು ಇರುವ ಬಳಿ ಹೋಗಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕು, ಬೇಕಾದ್ರೆ ಕೋಲಾರ ಜಿಲ್ಲೆಗೆ ಬಂದು ನಮ್ಮ ಜೊತೆ ಚರ್ಚೆ ಮಾಡಲಿ ಎಂದು ಉಸ್ತುವಾರಿ ಸಚಿವರ ಹೇಳಿಕೆಗೆ ತಿರುಗೇಟು ನೀಡಿದರು. ಒಟ್ಟಿನಲ್ಲಿ ಇಬ್ಬರ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ, ಇವರುಗಳ ರಾಜಕೀಯ ಪ್ರತಿಷ್ಠೆಗೆ ಕೋಲಾರ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗದೆ ಹಿಂದೆ ಉಳಿದಿದೆ. ಇನ್ನಾದ್ರೂ ಇವರ ರಾಜಕೀಯ ಕೆಸರೆರೆಚಾಟ ಬಿಟ್ಟು ಜನಸಾಮಾನ್ಯರ ನೋವಿಗೆ ಸ್ಪಂದಿಸಲಿ ಅನ್ನೋದು ನಮ್ಮ ಆಶಯ ಕೂಡ.

Follow Us:
Download App:
  • android
  • ios