ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಈ ಬಾರಿಯಾದರೂ ಗೆಲ್ಲಿಸಿ ಎಂದು ಕಣ್ಣೀರಿಡುತ್ತಾ ಸೆರಗೊಡ್ಡಿ ಬೇಡಿಕೊಂಡ ಶ್ರೇಯಸ್ ಪಟೇಲ್ ತಾಯಿ ಅನುಪಮಾ ಮಹೇಶ್  

ಹಾಸನ(ಏ.02): ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೇಯಸ್ ಪಟೇಲ್ ಅವರು ಜಿಲ್ಲಾ ಚುನಾವಣಾಧಿಕಾರಿ ಸಿ.ಸತ್ಯಭಾಮ ಅವರಿಗೆ ಸೋಮವಾರ ನಾಮಪತ್ರ ಸಲ್ಲಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಶ್ರೇಯಸ್ ಪಟೇಲ್ ತಾಯಿ ಅನುಪಮಾ ಮಹೇಶ್, 'ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಈ ಬಾರಿಯಾದರೂ ಗೆಲ್ಲಿಸಿ' ಎಂದು ಕಣ್ಣೀರಿಡುತ್ತಾ ಸೆರಗೊಡ್ಡಿ ಬೇಡಿದರು. 

ಸಿದ್ದರಾಮಯ್ಯ ಏನು ಟ್ವೀಟ್ ಮಾಡಿದ್ದಾರೋ ಅದಕ್ಕೆ ಸದ್ಯದಲ್ಲೇ ಉತ್ತರ ಕೊಡ್ತೇನೆ: ಎಚ್‌ಡಿ ದೇವೇಗೌಡ ಗರಂ

ಪಂಚಾಯಿತಿಯಿಂದ ಪ್ರಧಾನಿವ ರೆಗೂ ಅವರಿಗೇ ಅಧಿಕಾರ ನೀಡಿದ್ದೀರಿ, ನನಗೆ ಇರುವುದು ಒಬ್ಬನೇ ಮಗ. ಮೂರು ಚುನಾವಣೆಗಳಲ್ಲಿ ನಮ್ಮನ್ನು ಸೋಲಿಸಿದ್ದೀರಿ. ಮೂರು ಬಾರಿ ಅವರ ಮುಂದೆ ನಾವು ಮಂಡಿ ಯೂರಿದ್ದೇವೆ. ಈ ಬಾರಿಯಾದರೂ ನನ್ನ ಮಗನನ್ನು ಗೆಲ್ಲಿಸಿಕೊಡಿ ಎಂದು ಭಾವನಾತ್ಮಕವಾಗಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮತದಾರರಲ್ಲಿ ಮನವಿ ಮಾಡಿದರು.