Congress Padayatra ಕಾಂಗ್ರೆಸ್ ಮೇಕೆದಾಟು ಪಾದಯಾತ್ರಗೆ ಎದುರಾಯ್ತು ಮತ್ತೊಂದು ವಿಘ್ನ
* ಕಾಂಗ್ರೆಸ್ ಮೇಕೆದಾಟು ಪಾದಯಾತ್ರಗೆ ಎದುರಾಯ್ತು ಮತ್ತೊಂದು ವಿಘ್ನ
* ಕೋವಿಡ್ ಆತಂಕದ ಮಧ್ಯೆಯೂ ಕಾಂಗ್ರೆಸ್ ಪಾದಯಾತ್ರೆ
* ಕೊರೋನಾ ನೆಪದಲ್ಲಿ ಕಾಂಗ್ರೆಸ್ ಪಾದಯಾತ್ರೆಗೆ ಬ್ರೇಕ್ ಹಾಕಲು ಅರ್ಜಿ
ಬೆಂಗಳೂರು, (ಜ.11): ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್(Congress Mekedatu Padayatra) ಪಾದಯಾತ್ರೆಗೆ ಮತ್ತೊಂದು ವಿಘ್ನ ಎದುರಾಗಿದೆ.
ಹೌದು...ಕಾಂಗ್ರೆಸ್ ಪಾದಯಾತ್ರೆ (Congress Padayatre) ವಿರುದ್ಧ ಪಿಐಎಲ್ (PIL) ಸಲ್ಲಿಸಲಾಗಿದೆ. ನರೇಂದ್ರ ಪ್ರಸಾದ್ ಎಂಬುವರು ಕರ್ನಾಟಕ ಹೈಕೋರ್ಟ್ ಗೆ(Karnataka High Court) ಪಿಐಎಲ್ ಸಲ್ಲಿಸಿದ್ದು, ಸರ್ಕಾರ, ಬಿಬಿಎಂಪಿ, ರಾಮನಗರ ಜಿಲ್ಲಾಧಿಕಾರಿ, ಕೆಪಿಸಿಸಿ ಪ್ರತಿವಾದಿ ಮಾಡಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ಖರ್ಗೆ, ಸಿದ್ದು, ಡಿಕೆಶಿ ಸೇರಿ 30 ಜನರ ವಿರುದ್ಧ ಎಫ್‍ಐಆರ್
ರಾಜ್ಯದಲ್ಲಿ ಕೊರೋನಾ ವೈರಸ್ (Coronavirus) ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ನಡುವೆ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ. ಇದರಿಂದ ಕೊರೋನಾ ಸೋಂಕಿನ ಪ್ರಕರಣಗಳು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಪಾದಯಾತ್ರೆ ಕೈಬಿಡುವಂತೆ ಹೈಕೋರ್ಟ್ ಪಿಐಎಲ್ ಸಲ್ಲಿಸಲಾಗಿದೆ.
ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಯಿಂದ ಕೊರೋನಾ ಸೋಂಕು ಸೂಪರ್ ಸ್ಪ್ರೇಡರ್ ಆಗುವ ಸಾಧ್ಯತೆಗಳು ಇದೆ. ನಿರ್ಬಂಧ ಇದ್ದರೂ ಕಾಂಗ್ರೆಸ್ ಪಾದಯಾತ್ರೆ ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಅರ್ಜಿದಾರ ನರೇಂದ್ರ ಪ್ರಸಾದ್ ಪಿಐಎಲ್‌ನಲ್ಲಿ ಮನವಿ ಮಾಡಿದ್ದಾರೆ.
ನಾಳೆ (ಜ.12) ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಗಳಿದ್ದು, ಕಾಂಗ್ರೆಸ್ ಪಾದಯಾತ್ರೆಗೆ ಬ್ರೇಕ್ ಬೀಳುತ್ತಾ? ಅಥವಾ ಮುಂದುವರೆಯುತ್ತಾ ಎನ್ನುವುದು ಕಾದುನೋಡಬೇಕಿದೆ.
ಬೆಂಗಳೂರು, (ಜ.11): ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್(Congress Mekedatu Padayatra) ಪಾದಯಾತ್ರೆಗೆ ಮತ್ತೊಂದು ವಿಘ್ನ ಎದುರಾಗಿದೆ.
ಹೌದು...ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಪಿಐಎಲ್ ಸಲ್ಲಿಸಲಾಗಿದೆ. ನರೇಂದ್ರ ಪ್ರಸಾದ್ ಎಂಬುವರು ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದು, ಸರ್ಕಾರ, ಬಿಬಿಎಂಪಿ, ರಾಮನಗರ ಜಿಲ್ಲಾಧಿಕಾರಿ, ಕೆಪಿಸಿಸಿ ಪ್ರತಿವಾದಿ ಮಾಡಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ನಡುವೆ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ. ಇದರಿಂದ ಕೊರೋನಾ ಸೋಂಕಿನ ಪ್ರಕರಣಗಳು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಪಾದಯಾತ್ರೆ ಕೈಬಿಡುವಂತೆ ಹೈಕೋರ್ಟ್ ಪಿಐಎಲ್ ಸಲ್ಲಿಸಲಾಗಿದೆ.
ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಯಿಂದ ಕೊರೋನಾ ಸೋಂಕು ಸೂಪರ್ ಸ್ಪ್ರೇಡರ್ ಆಗುವ ಸಾಧ್ಯತೆಗಳು ಇದೆ. ನಿರ್ಬಂಧ ಇದ್ದರೂ ಕಾಂಗ್ರೆಸ್ ಪಾದಯಾತ್ರೆ ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಅರ್ಜಿದಾರ ನರೇಂದ್ರ ಪ್ರಸಾದ್ ಪಿಐಎಲ್‌ನಲ್ಲಿ ಮನವಿ ಮಾಡಿದ್ದಾರೆ.
ನಾಳೆ (ಜ.12) ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಗಳಿದ್ದು, ಕಾಂಗ್ರೆಸ್ ಪಾದಯಾತ್ರೆಗೆ ಬ್ರೇಕ್ ಬೀಳುತ್ತಾ? ಅಥವಾ ಮುಂದುವರೆಯುತ್ತಾ ಎನ್ನುವುದು ಕಾದುನೋಡಬೇಕಿದೆ.
ಕಾಂಗ್ರೆಸ್ ಪಾದಯಾತ್ರೆ ತಡೆಗೆ ಬಿಜೆಪಿ ಕಸರತ್ತು
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ 10 ದಿನಗಳ ಪಾದಯಾತ್ರೆ ನಡೆಸುತ್ತಿರುವುದರಿಂದ ಇದಕ್ಕೆ ಬ್ರೇಕ್ ಹಾಕಲು ಬಿಜೆಪಿ ನಾನಾ ಪ್ಲಾನ್ ಮಾಡುತ್ತಿದೆ. ಇನ್ನಿಲ್ಲದ ಅಸ್ತ್ರಗಳನ್ನ ಬಳಸಿ ಪಾದಯಾತ್ರೆ ನಿಲ್ಲಿಸಲು ಬಿಜೆಪಿ ಹಾಗೂ ಸರ್ಕಾರ ಕಸರತ್ತು ನಡೆಸಿದೆ.
ರಾಜ್ಯದಲ್ಲಿ ಕೋವಿಡ್ ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸಿ ವಾರಾಂತ್ಯದ ನಿಷೇಧಾಜ್ಞಾ ಜಾರಿಗೊಳಿಸಿದ್ದರೂ ಕಾಂಗ್ರೆಸ್‍ನ ಮೇಕೆದಾಟು ಪಾದಯಾತ್ರೆ ತಡೆಯಲು ಸಾಧ್ಯವಾಗಿಲ್ಲ
ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ವಿಚಾರದಲ್ಲಿ ಬಿಜೆಪಿ ವರ್ಚಸ್ಸಿಗೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು ಎಂದು ರಾಜ್ಯ ಘಟಕ ಅಲರ್ಟ್ ಆಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಹಂತದಲ್ಲಿಯೂ ಕೌಂಟರ್ ಟಾಂಗ್ ಕೊಡುವ ಟಾಸ್ಕ್‍ನ್ನು ರಾಜ್ಯ ಬಿಜೆಪಿ ನಾಯಕರಿಗೆ ನೀಡಲಾಗಿದೆ. ಪಕ್ಷದ ಹಿರಿಯ ನಾಯಕರು, ರಾಜ್ಯ ಪದಾಕಾರಿಗಳು ಮೇಕೆದಾಟು ಪಾದಯಾತ್ರೆಗೆ ಪ್ರತಿಯಾಗಿ ಯೋಜನೆ ಕುರಿತು ಜನತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಲಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆಗೆ ಬಿಜೆಪಿ ಸಾಮಾಜಿಕ ಜಾಲತಾಣಗಳ ಮೂಲಕ ಟ್ರಾಲ್ ಮಾಡುತ್ತಲೇ ಇದೆ.
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಬಿಜೆಪಿ ನಾಯಕರು ಬಲವಾಗಿ ಟೀಕಿಸುತ್ತಲೇ ಇದ್ದಾರೆ. ಇದು ರಾಜಕೀಯ ಪಾದಯಾತ್ರೆ, ಸುಳ್ಳಿನಜಾತ್ರೆ ಅಂತೆಲ್ಲಾ ಲೇವಡಿ ಮಾಡುತ್ತಿದೆ.
ಮಾಧ್ಯಮ ವಕ್ತಾರರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮಾಧ್ಯಮಗೋಷ್ಠಿ ನಡೆಸಿ ವಿವರ ನೀಡುತ್ತಿದ್ದಾರೆ. ಪಾದಯಾತ್ರೆ ಉದ್ದಕ್ಕೂ ಕಾಂಗ್ರೆಸ್ ನಾಯಕರು ಮಾಡುವ ಆರೋಪಗಳಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿ ಸತ್ಯವನ್ನು ಜನರೆದುರು ಇಡುವ ಕೆಲಸಕ್ಕೆ ಕೇಸರಿಪಡೆ ನಿಂತಿದೆ.
ಪಾದಯಾತ್ರೆಯ ಆರಂಭದಿಂದಲೂ ಪತ್ರಿಕೆಗಳ ಮುಖಪುಟದಲ್ಲಿ ಜಾಹೀರಾತು ನೀಡಿರುವ ಬಿಜೆಪಿ ಎರಡು ಪುಟಗಳ ಜಾಹೀರಾತಿನಲ್ಲಿ ಮೇಕೆದಾಟು ಯೋಜನೆ ನಡೆದು ಬಂದ ಹಾದಿ, ವಿಳಂಬಕ್ಕೆ ಕಾರಣ, ಯಾರಿಂದ ವಿಳಂಬ, ಕೋರ್ಟ್ ಪ್ರಕರಣಗಳು ಹೀಗೆ ಸಮಗ್ರವಾದ ಮಾಹಿತಿ ನೀಡಿ ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಕಾರಣದ್ದಾಗಿದೆ ಎನ್ನುವ ಎಂಬ ಸಂದೇಶ ಜನರಿಗೆ ತಲುಪಿಸುತ್ತಿದೆ.