Asianet Suvarna News Asianet Suvarna News

MLC Election: ಸುಳ್ಳು ಹೇಳುವ ಬಿಜೆಪಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ: ಸಲೀಂ ಅಹ್ಮದ್‌

*  ಬಿಜೆಪಿ ಸರ್ಕಾರ ಜೀವಂತವಾಗಿಲ್ಲ
*  ರೈತರಿಗೆ ಸರ್ಕಾರ ಯಾವುದೇ ಸಹಾಯಕ್ಕೆ ಮುಂದಾಗದ ಬಿಜೆಪಿ ಸರ್ಕಾರ
*  ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿ

People Tired of the Lying BJP Government Says Saleem Ahmed grg
Author
Bengaluru, First Published Dec 6, 2021, 11:39 AM IST
  • Facebook
  • Twitter
  • Whatsapp

ಸವಣೂರ(ಡಿ.06):  ಬ್ಲಾಕ್‌ನಿಂದ ರಾಷ್ಟ್ರ ಮಟ್ಟದ ರಾಜಕಾರಣದ ಅನುಭವದೊಂದಿಗೆ ಮಾಜಿ ಪ್ರಧಾನಿಗಳ ಜೊತೆಗೆ ಕೆಲಸ ಮಾಡಿದ ಹೆಮ್ಮೆ ನನಗಿದೆ. ಕಳೆದ 25 ವರ್ಷಗಳಿಂದ ಹಾವೇರಿ(Haveri) ಜಿಲ್ಲೆಯ ಜನರ ಸೇವೆಯನ್ನು ಮಾಡುತ್ತಿದ್ದೇನೆ. 2 ಬಾರಿ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದೇನೆ. ಆದ್ದರಿಂದ, ಈ ಬಾರಿ ಹೆಚ್ಚಿನ ಪ್ರಥಮ ಪ್ರಾಶಸ್ತ್ಯದ ಮತನೀಡಿ ನನ್ನನ್ನು ಗೆಲ್ಲಿಸಬೇಕು ಎಂದು ವಿಧಾನ ಪರಿಷತ್‌(Vidhan Parishat) ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ್‌(Saleem Ahmed) ಹೇಳಿದರು.

ಪಟ್ಟಣದ ಬ್ಲಾಕ್‌ ಕಾಂಗ್ರೆಸ್‌(Congress) ಕಚೇರಿ (ಅಡವಿಸ್ವಾಮಿಮಠ)ಯಲ್ಲಿ ಭಾನುವಾರ ಏರ್ಪಡಿಸಿದ್ದ ಮತಯಾಚನೆ ಸಭೆಯಲ್ಲಿ ಪುರಸಭೆ, ಗ್ರಾಪಂ ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸುಳ್ಳು ಹೇಳುವ ಬಿಜೆಪಿ(BJP) ಸರ್ಕಾರದಿಂದ ಬೇಸತ್ತ ಜನ ಬದಲಾವಣೆ ಬಯಸಿದ್ದಾರೆ. ಹಾನಗಲ್‌ ಚುನಾವಣೆ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ನೀವು ತಲೆ ತಗ್ಗಿಸುವ ಕಾರ್ಯ ಎಂದಿಗೂ ಮಾಡುವುದಿಲ್ಲ ನನಗೆ ಮತ ನೀಡಿ ಗೆಲ್ಲಿಸಿ ಎಂದು ಹೇಳಿದರು.

Karnataka Politics : ಚುನಾವಣೆ ನಂತರ ರಾಜಕೀಯ ಅಲ್ಲೋಲ ಕಲ್ಲೋಲ-ಈಶ್ವರಪ್ಪ

ಕಳೆದ ಮೂರು ವರ್ಷದಿಂದ ಬಿಜೆಪಿ ಸರ್ಕಾರ ಗ್ರಾಮೀಣ ಪ್ರದೇಶದ ಜನರಿಗೆ ಒಂದೇ ಒಂದು ಮನೆಯನ್ನು ನೀಡಿಲ್ಲ. ಬಿಜೆಪಿ ಸರ್ಕಾರ ಜೀವಂತವಾಗಿಲ್ಲ, 18 ತಿಂಗಳಿಂದ ಗ್ರಾಪಂ ಸಿಬ್ಬಂದಿ ವೇತನ ಹಾಗೂ ಒಂದು ವರ್ಷದಿಂದ ಗ್ರಾಪಂ ಸದಸ್ಯರ ಗೌರವ ಧನ ಸಹ ನೀಡಿಲ್ಲ. ಆದ್ದರಿಂದ, ಜಿಪಂ ಹಾಗೂ ತಾಪಂ ಚುನಾವಣೆ ಎದುರಿಸಲು ಸಾಧ್ಯವಾಗದೇ ಚುನಾವಣಾ ಆಯೋಗ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಚುನಾವಣೆಯಿಂದ(Election) ಪಲಾಯನ ಮಾಡುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಉದ್ಯೋಗ(Job) ಕೇಳಿದರೆ ಪಕೋಡಾ ಮಾರಾಟಕ್ಕೆ ಸಲಹೆ ನೀಡುವುದಕ್ಕೆ, ಬೆಲೆ ಏರಿಕೆಗೆ, ಸುಳ್ಳು ಹೇಳುವುದಕ್ಕೆ ನಿಮಗೆ ಮತ ನೀಡಬೇಕೆ? ರೈತರ(Farmers) ಮುಂದೆ ಕ್ಷಮೆ ಕೇಳುವ ಪ್ರಧಾನಿ ಮೋದಿಯವರು(Narendra Modi) ಹುತಾತ್ಮಗೊಂಡ ರೈತ ಕುಟುಂಬಸ್ಥರಿಗೆ ಏನ್‌ ಉತ್ತರ ನೀಡುತ್ತಿರಾ ಎಂದು ಪ್ರಶ್ನಿಸಿದ ಸಲೀಂ ಅಹ್ಮದ ಅವರು, ಪ್ರಕೃತಿ ವಿಕೋಪದಲ್ಲಿ ನೊಂದ ರೈತರಿಗೆ ಸರ್ಕಾರ ಯಾವುದೇ ಸಹಾಯಕ್ಕೆ ಮುಂದಾಗಿಲ್ಲ. ಆದ್ದರಿಂದ, ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ಎಂದರು.

ಮಾಜಿ ಎಚ್‌. ಆಂಜನೇಯ ಮಾತನಾಡಿ, 2023ರಲ್ಲಿ ಜರುಗುವ ವಿಧಾನಸಭೆ ಚುನಾವಣೆಯಲ್ಲಿ(Assembly Election)ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಈ ಬಾರಿ ಸಲೀಂ ಅಹ್ಮದ ಅವರ ಗೆಲವು ನಿಶ್ಚಿತವಾಗಿದೆ ಎಂದರು.
ವಿಧಾನ ಪರಿಷತ್‌ ಸದಸ್ಯ ಮಾಜಿ ಸೋಮಣ್ಣ ಬೇವಿನಮರದ, ಕಾಂಗ್ರೆಸ್‌ ಪದಾಧಿಕಾರಿ ಷಣ್ಮುಖ ಶಿವಳ್ಳಿ, ರಾಜೇಶ್ವರ ಪಾಟೀಲ, ಸಂಜೀವಕುಮಾರ ನೀರಲಗಿ, ಎಂ.ಎಂ. ಹಿರೇಮಠ, ಶ್ರೀಕಾಂತ ದುಂಡಿಗೌಡ್ರ, ನಾಗಪ್ಪ ತಿಪ್ಪಕ್ಕನವರ ಮಾತನಾಡಿದರು.

ಪಕ್ಷದ ಪ್ರಮುಖರಾದ ಅದ್ದು ಪರಾಶ, ಪೀರಅಹ್ಮದ ಗವಾರಿ, ಅಲ್ತಾಫ ಮುಳ್ಳೆನವರ, ಶಿವಕುಮಾರ ಅಡವಿಸ್ವಾಮಿಮಠ, ರಮೇಶ ದುಗ್ಗತ್ತಿ, ಮಲ್ಲೇಶಪ್ಪ ಹರಿಜನ ಹಾಗೂ ಇತರರು ಪಾಲ್ಗೊಂಡಿದ್ದರು.

Karnataka Politics: ಕಾಂಗ್ರೆಸ್‌ ಶಾಸಕರನ್ನು ಬಿಜೆಪಿಯವರು ನಾಯಿ, ನರಿಗಳಂತೆ ಖರೀದಿಸಿದರು: ಆಂಜನೇಯ

ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿ

ಶಿಗ್ಗಾಂವಿ(Shiggaon): ಪಕ್ಷದ ಬಲವರ್ಧನೆಗಾಗಿ ಸಂಘಟನೆ ಮುಖ್ಯವಾಗಿದ್ದು, ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಬೆಂಬಲಿಸುವ ಜತೆಗೆ ಪಕ್ಷಕ್ಕೆ ಪ್ರಬಲಶಕ್ತಿ ನೀಡಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು.

ತಾಲೂಕಿನ ಬಂಕಾಪುರ ಪಟ್ಟಣದ ವಿಠ್ಠಲ್‌ ರುಕ್ಮಿಣಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಪುರಸಭೆ ಚುನಾವಣೆ ಅಂಗವಾಗಿ ನಡೆದ ಕಾಂಗ್ರೆಸ್‌ ಪಕ್ಷದ ಸಭೆಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್‌ ಆರಂಭದಿಂದ ತನ್ನದೆಯಾದ ತತ್ವಸಿದ್ಧಾಂತಗಳನ್ನು ಒಳಗೊಂಡಿದ್ದು, ಅವುಗಳ ಅಡಿಯಲ್ಲಿ ಪ್ರತಿಯೊಬ್ಬರೂ ಹೋಗಬೇಕು. ಸಣ್ಣ ಪುಟ್ಟಭಿನ್ನಾಭಿಪ್ರಾಯಗಳನ್ನು ಬಿಟ್ಟು ಪುರಸಭೆ ಚುನಾವಣೆಯಲ್ಲಿ ಯಾರಿಗೆ ಪಕ್ಷದ ವರಿಷ್ಠರು ಟಿಕೆಟ್‌ ನೀಡಲಾಗುತ್ತದೆ. ಅಂತಹ ವ್ಯಕ್ತಿಗೆ ಬೆಂಬಲಿಸುವದು ಮುಖ್ಯವಾಗಿದೆ. ಪಕ್ಷ ತೆಗೆದುಕೊಂಡ ತೀರ್ಮಾನಕ್ಕೆ ಪ್ರತಿಯೊಬ್ಬರೂ ಬದ್ಧರಾಗಿ ಕೆಲಸ ಮಾಡಿದಾಗ ಮಾತ್ರ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲವು ಸಾಧಿಸಲು ಸಾಧ್ಯವಿದೆ. ಅದಕ್ಕಾಗಿ ಕಾಂಗ್ರೆಸ್‌ ಕಾರ್ಯಕರ್ತರ ಪಡೆ ಗಟ್ಟಿಯಾಗಬೇಕು. ಪಕ್ಷದ ಸೇವೆಗಾಗಿ ನಾವು ಮುಂದಾಗಬೇಕು ಎಂದರು.

ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಂ.ಎಂ. ಹಿರೇಮಠ, ತಾಲೂಕು ಅಧ್ಯಕ್ಷ ಎಂ.ಎನ್‌. ವೆಂಕೋಜಿ ಅಧ್ಯಕ್ಷತೆ ವಹಿಸಿದ್ದರು. ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಸವಣೂರ ತಾಲೂಕು ಅಧ್ಯಕ್ಷ ನಾಗಪ್ಪ ತಿಪ್ಪಕ್ಕನವರ, ಮುಖಂಡರಾದ ಶಿವಾನಂದ ಬಾಗೂರ, ಹನುಮರಡ್ಡಿ ನಡುವಿನಮನಿ, ಪ್ರಕಾಶ ಹಾದಿಮನಿ, ಮಂಜುನಾಥ ತಿಮ್ಮಾಪುರ, ರಾಜು ಕಮ್ಮಾರ, ಚನ್ನುಕುಮಾರ ದೇಸಾಯಿ, ಸತೀಶ ಆಲದಕಟ್ಟಿ, ಎಸ್‌.ಎಫ್‌. ಮಣಕಟ್ಟಿ, ಗುರನಗೌಡ ಪಾಟೀಲ, ಎ.ಎ. ಜಮಾದಾರ, ಮಲ್ಲೇಶಪ್ಪ ಬಡ್ಡಿ ಸೇರಿದಂತೆ ಪುರಸಭೆ ಚುನಾವಣೆ ಟಿಕೆಟ್‌ ಆಕಾಂಕ್ಷಿ ಅಭ್ಯರ್ಥಿಗಳು ಇದ್ದರು.
 

Follow Us:
Download App:
  • android
  • ios