ರಾಜಕೀಯ ಮುಖಂಡರೋರ್ವರು ಕಾಂಗ್ರೆಸ್ ಮುಖಂಡರ ವಿರುದ್ಧ ಗಂಭೀರ ಆರೋಪ ಒಂದನ್ನು ಮಾಡಿದ್ದಾರೆ. ತಮಗೆ 25 ಲಕ್ಷ ಲಂಚ ನೀಡುವ ಬಗ್ಗೆ ಆಫರ್ ನೀಡಿದ್ದರು ಎಂದು ಹೇಳಿದ್ದಾರೆ. 

ಹೈದ್ರಾಬಾದ್ :  ಎಐಎಂಐಎಂ ಅಧ್ಯಕ್ಷ ಅಸಾದುದ್ದಿನ್ ಓವೈಸಿ ಇದೀಗ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ರ್ಯಾಲಿಯನ್ನು ರದ್ದು ಮಾಡಿ ಟಿಆರ್ ಎಸ್ ಗೆ ಬೆಂಬಲ ನೀಡಬೇಕು ಎಂದು 25 ಲಕ್ಷ ರು. ಹಣದ ಆಮಿಷ ಒಡ್ಡಲಾಗಿತ್ತು ಎಂದು ಆರೋಪ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ನಿರ್ಮಲ್ ನಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು ಮಹೇಶ್ವರ್ ರೆಡ್ಡಿ ಎನ್ನುವವರು ತಮಗೆ ಕರೆ ಮಾಡಿ 25 ಲಕ್ಷ ನೀಡುವುದಾಗಿ ಹೇಳಿದ್ದರು. ಆದರೆ ತಾವು ಇದನ್ನು ನಿರಾಕರಿಸಿದ್ದು, ಮುಂದೊಂದು ದಿನ ಈ ವಿಚಾರವನ್ನು ನಿರಾಕರಿಸಬಹುದು ಎನ್ನುವ ಕಾರಣದಿಂದ ಕರೆಯನ್ನು ರೆಕಾರ್ಡ್ ಮಾಡಿ ಇರಿಸಿದ್ದಾಗಿಯೂ ಹೇಳಿದ್ದಾರೆ. 

ಇನ್ನು ಓವೈಸಿ ಬಗ್ಗೆ ಮಾತನಾಡಿದ ಅಭಿಷೇಕ್ ಸಿಂಗ್ವಿ ತಾವು ಯಾವುದೇ ಕಾರಣಕ್ಕೂ ಕೂಡ ಓವೈಸಿಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ತಾವು ಎಲ್ಲಯೂ ಕೂಡ ಓವೈಸಿಯನ್ನು ಗಂಭಿರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. 

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ರೆಡ್ಡಿ ಓವೈಸಿ ಈ ಬಗ್ಗೆ ಸಾಬೀತುಪಡಿಸಲಿ. ತಾವು ಯಾವುದೇ ರೀತಿ ಹಣದ ಆಮಿಷ ಒಡ್ಡಿದಲ್ಲಿ ಅವರು ಸಾಕ್ಷಿ ಸಮೇತ ಬಹಿರಂಗ ಮಾಡಲಿ. ನಾವೇಕೆ ಇನ್ನೊಂದು ಪಕ್ಷದ ರ್ಯಾಲಿಯನ್ನು ತಡೆಯುವ ಯತ್ನವನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.